ಅಲಹಾಬಾದ್ ಹೆಸರು ಬದಲಾವಣೆ; ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂಕೋರ್ಟು ನೋಟಿಸು

0
1338

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 20: ಅಲಹಾಬಾದ್‍ನ ಹೆಸರು ಪ್ರಯಾಗ್‍ರಾಜ್ ಎಂದು ಬದಲಾಯಿಸಿದ್ದಕ್ಕಾಗಿ ಸುಪ್ರಿಂಕೋರ್ಟು ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ. ಅಲಹಾಬಾದ್‍ನ ಹೆಸರು ಬದಲಾಯಿಸಿದ್ದರ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯಲ್ಲಿ ಸುಪ್ರೀಂಕೋಟು ನೋಟಿಸು ಜಾರಿ ಮಾಡಿದೆ. ಸ್ಥಳದ ಹೆಸರು ಬದಲಾವಣೆ ರಾಜ್ಯ ಸರಕಾರದ ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ರೈಲ್ವೆ ನಿಲ್ದಾಣ, ಕೇಂದ್ರ ವಿಶ್ವವಿದ್ಯಾನಿಲಯಗಳು, ಕೇಂದ್ರ ಸರಕಾರದ ಸಂಸ್ಥೆಗಳು ಕೇಂದ್ರ ಸರಕಾರದ ಅಧಿಕಾರ ವ್ಯಾಪ್ತಿಯಲ್ಲಿದ್ದು ಹೆಸರು ಬದಲಾಯಿಸುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಕುರಿತು ಉತ್ತರ ಪ್ರದೇಶ ಸರಕಾರದಿಂದ ಸುಪ್ರೀಂಕೋರ್ಟು ವಿವರಣೆ ಕೇಳಿದೆ.

ಐತಿಹಾಸಿಕ ಪ್ರಾಮುಖ್ಯತೆಯಿರುವ ಅಲಹಾಬಾದಿನ ಹೆಸರು ಬದಲಾಯಿಸಿದ ಯೋಗಿ ಆದಿತ್ಯನಾಥರ ಸರಕಾರದ ಕ್ರಮ ತೀವ್ರ ಟೀಕೆಗೆ ಗುರಿಯಾಗಿತ್ತು. ಆದರೆ ಟೀಕೆಗೆ ಕಿವಿಗೊಡದೆ ಅಲಹಾಬಾದಿನ ರೈಲ್ವೆ ನಿಲ್ದಾಣ ಸಹಿತ ಎಲ್ಲ ಹೆಸರನ್ನು ಪ್ರಯಾಗ್ ರಾಜ್ ಎಂದು ಸರಕಾರ ಬದಲಾಯಿಸಿತ್ತು. ಪ್ರಯಾಗ್ ರಾಜ್ ನಗರದ ಹೆಸರನ್ನು ಮೊಗಲ ದೊರೆ ಅಕ್ಬರ್ 500 ವರ್ಷದ ಹಿಂದೆ ಬದಲಾಯಿಸಿದ್ದ ಎಂದು ಬಿಜೆಪಿ ಸರಕಾರ ಆರೋಪಿಸಿತ್ತು.