ರಾಮ್ ಲಲ್ಲಾನ ದರ್ಶನ ಪಡೆಯಲು ಈವರೆಗೂ ಬಿಡುವು ಮಾಡಿಕೊಳ್ಳದ ಮೋದಿ ವಿದೇಶದಲ್ಲಿ ಮಸೀದಿ ಸುತ್ತುತ್ತಿದ್ದಾರೆ: ತೊಗಾಡಿಯಾ

0
1237

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ವಿಹಿಂಪ ನಾಯಕ ತೊಗಾಡಿಯಾ, ವಿದೇಶದಲ್ಲಿರುವ ಮಸೀದಿಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿಯವರಿಗೆ ಇದೇ ದೇಶದಲ್ಲಿರುವ ಅಯೋಧ್ಯೆಯ ರಾಮ್ ಲಲ್ಲಾನ ದರ್ಶನ ಮಾಡಲು ಇನ್ನೂ ಬಿಡುವು ಸಿಕ್ಕಿಲ್ಲ ಎಂದು ಚಾಟಿ ಬೀಸಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಈವರೆಗೆ ಏನನ್ನೂ ಮಾಡಿಲ್ಲ. ಕಾಶಿ, ಮಥುರಾ ಮತ್ತು ಅಯೋಧ್ಯೆಯಲ್ಲಿ ದೇವಾಲಯಗಳನ್ನು ನಿರ್ಮಿಸುವುದಕ್ಕಾಗಿ ಕಾನೂನು ರಚಿಸುವ ಕುರಿತು ಕೊಟ್ಯಾ೦ತರ ಹಿಂದೂಗಳಿಗೆ ಅವರು ದ್ರೋಹ ಎಸಗಿದ್ದಾರೆ ಎಂದವರು ಆರೋಪಿಸಿದ್ದಾರೆ.
ರಾಮ ಮಂದಿರ ವಿಷಯದಲ್ಲಿ ಇದೇ ಒಕ್ಟೋಬರ್ ನಲ್ಲಿ ಲಕ್ನೋ ದಿಂದ ಅಯೋಧ್ಯೆವರೆಗೆ ಮಾರ್ಚ್ ನಡೆಸಲು ಯೋಚಿಸಿರುವುದಾಗಿ ಹೇಳಿರುವ ಅವರು ಇದೇ ಉದ್ದೇಶದಿಂದ ಇಪ್ಪತ್ತು ಕೋಟಿ ಹಿಂದೂಗಳ ಸಹಿ ಸಂಗ್ರಹ ಅಭಿಯಾನವನ್ನು ನಡೆಸುವುದಾಗಿ ಹೇಳಿದ್ದಾರೆ.