ಇಬ್ಬರು ವಯಸ್ಕರ ಮದುವೆಯನ್ನು ಕಗ್ಗಂಟುಗೊಳಿಸಿದವರಾರು?

0
1364

ಯುವತಿ ವಯಸ್ಕೆ ಎಂದು ಅವಳ ಹಿರಿಯ ವಕೀಲರು ಬಲವಾಗಿ ವಾದಿಸಿ ದ್ದರೂ ಒಂದು ವಿಷಯವನ್ನು ಮನ ವರಿಕೆ ಮಾಡಿಕೊಳ್ಳಬೇಕಿದೆ. ’20 ವರ್ಷದ ಚಂಚಲ ಮನಸ್ಸಿನ ಯುವತಿ ಅವಳು. ಭಾರತದ ಸಂಪ್ರದಾಯದಂತೆ’ ಇರುವುದು ಮದುವೆ ಮಾಡಿಕೊಡುವ ವರೆಗೆ ಹೆಣ್ಣು ಮಕ್ಕಳ ಹೊಣೆ ತಂದೆ-ತಾಯಿ ಗಳಿಗೆ ಸೇರಿರುತ್ತದೆ. ಶೋಷಣೆಗೆ ಗುರಿ ಯಾಗುವ ಸಾಧ್ಯತೆಯಿರುವ ಒಬ್ಬ ವ್ಯಕ್ತಿ ಯನ್ನು ಅಪಾಯದ ಬಾಯಿಗೆ ಕೊಡದಿರುವುದು ಕೋರ್ಟಿನ ಕರ್ತವ್ಯವಾಗಿದೆ ಎಂದು ಭಾವಿಸುತ್ತೇವೆ. ವಿಶೇಷತಃ ಇಸ್ಲಾಮಿ ಧರ್ಮದ ಪ್ರಕಾರ ಮತ್ತೊಬ್ಬರ ಮೂಲಕ ಮದುವೆ ಕ್ರಿಯೆ ನಡೆಸಿಕೊಟ್ಟಿರುವಾಗ. ಅದು ಕೂಡಾ ಯಾರ ಜೊತೆ ವಾಸಿಸಲು ಕೋರ್ಟು ಅನುಮತಿ ನೀಡಿದೆಯೋ ಅಂತಹ ಏಳನೇ ಆರೋಪಿಯ ಗೂಢಾಲೋಚನೆಯಲ್ಲಿ

ಇಬ್ಬರು ಸಾಮಾನ್ಯ ಪ್ರಜೆಗಳಾದ ಹಾದಿಯಾ-ಶಫಿನ್ ಜಹಾನ್ ಮದುವೆಯನ್ನು ರಾಷ್ಟ್ರೀಯ ಸಮಸ್ಯೆಯಾಗಿ ಬದಲಾಯಿಸಿದ್ದು ಕೇರಳ ಹೈಕೋರ್ಟು 2017 ಮೇ 24ಕ್ಕೆ ನೀಡಿದ ಈ ತೀರ್ಪು. ಇದನ್ನು ನೋಡುವಾಗ ನ್ಯಾಯಾಲಯ ವಿಷಯವನ್ನು ಭಾವನಾತ್ಮಕವಾಗಿ ಪರಿಗಣಿಸಿದೆ ಎನ್ನುವುದನ್ನು ತಪ್ಪು ಎನ್ನಲಾಗದು. ಪ್ರಾಪ್ತ ವಯಸ್ಕರಾದ ಯುವತಿ ಯುವಕರು ಕಾನೂನು ಹೇಳುವ ಪ್ರಕಾರ ಅದೆ ದಾರಿಯಲ್ಲಿ ಮದುವೆ ಯಾಗುತ್ತಾರೆ. ಅದಕ್ಕೆ ಕಾನೂನು, ಊರಿನ ಆಚಾರಗಳ ಮಿತಿ ದಾಟಿದ್ದು ಸರಿಯಲ್ಲವೆಂದು ಹೇಳಿ ಹೈಕೋರ್ಟು ರದ್ದುಪಡಿಸಿತು. ಈಗ ಅದೇ ತೀರ್ಪನ್ನು ಸುಪ್ರೀಂ ಕೋರ್ಟು ಅಸಿಂಧುಗೊಳಿಸಿ ಹಾದಿಯಾ- ಶಫಿನ್ ಜಹಾನ್ ಮದುವೆಯನ್ನು ಎತ್ತಿ ಹಿಡಿದು ಊರ್ಜಿತಗೊಳಿಸಿದೆ. ಹಾದಿಯಾ- ಶಫಿನ್ ಸತಿಮಿತಿಗಳು ಅಲ್ಲದೇ, ಅವರ ಮದುವೆ ಸಿಂಧು ಮಾತ್ರವಲ್ಲ ಅವರು ದಂಪತಿಗಳಾಗಿ ಜೀವಿಸಬಹುದು ಎನ್ನುವ ಐತಿಹಾಸಿಕ ತೀರ್ಪನ್ನು ನೀಡಿದೆ.

ಒಂದು ಸಾಮಾನ್ಯ ಮದುವೆಯು ಹೀಗೆಲ್ಲ ಹಿಗ್ಗಾಮುಗ್ಗಾ ಎಳೆದಾಡಿ ಪ್ರತಿಷ್ಠೆಯ ಹೋರಾಟವಾಗಿದ್ದೇಕೆ? ಹೈಕೋರ್ಟು ಮದುವೆ ರದ್ದುಪಡಿಸಿ ಹಾದಿಯಾರನ್ನು ತಂದೆಯ ಗೃಹ ಬಂಧನಕ್ಕೆ ವಹಿಸಿಕೊಟ್ಟಿದ್ದನ್ನು ಸುಪ್ರೀಮ್ ಕೋರ್ಟು ತನ್ನ ಈ ಹಿಂದಿನ ಮಧ್ಯಂತರ ತೀರ್ಪಿನಲ್ಲಿ ಬದಲಾಯಿಸಿ ಸೇಲಂನ ಕಾಲೇಜಿಗೆ ವೈದ್ಯಕೀಯ ಕಲಿಯಲು ಕಳುಹಿಸಿಕೊಟ್ಟು ಹಾಸ್ಟೆಲ್ ವಾಸ್ತವ್ಯದ ವ್ಯವಸ್ಥೆ ಮಾಡಿಕೊಟ್ಟಿತ್ತು. ಅಲ್ಲದೇ, ಮದುವೆ ರದ್ದುಪಡಿಸುವ ಅಧಿಕಾರ ಹೈಕೋರ್ಟಿಗೆ ಇದೆಯೇ ಎಂದು ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶ ಜಸ್ಟಿಸ್ ದೀಪಕ್ ಮಿಶ್ರರ ಪೀಠ ಕೇಳಿತ್ತು. ಬಳಿಕ ತಂದೆಯ ಗೃಹ ಬಂಧನದಿಂದ ಹಾದಿಯರನ್ನು ಬಿಡಿಸಿದ ಸುಪ್ರೀಂ ಕೋರ್ಟು ಕೇರಳ ಹೈಕೋರ್ಟಿನ ಮದುವೆ ರದ್ಧತಿ ತೀರ್ಪನ್ನೇ ಈಗ ರದ್ದುಪಡಿಸಿ ಹಾದಿಯಾ-ಶಫಿನ್ ಸತಿಪತಿಗಳೆಂದು ತೀರ್ಪಿತ್ತಿದೆ. ಮತಾಂತರ ಮದುವೆಗೆ ಅಧಿಕೃತ ಮುದ್ರೆಯೊತ್ತುವ ಮೂಲಕ ಅದು ಸುಖಾಂತ್ಯ ಕಲ್ಪಿಸಿದೆ.

ಶಫಿನ್ ಜಹಾನ್ ಭಯೋತ್ಪಾದಕ ಎಂದು ಸಾಬೀತು ಪಡಿಸುವುದು ಹಾದಿಯ ಮದುವೆಗೆ ಸಂಬಂಧಿಸಿದ ವಿಷಯವಲ್ಲ ಎಂಬುದನ್ನು ಖಾತರಿ ಪಡಿಸುವಂತಹ ಹಲವು ಸಾಕ್ಷ್ಯಗಳನ್ನು ಹೈಕೋರ್ಟಿನ ಮುಂದಿಡಲಾಯಿತು. ಪ್ರಕರಣದಲ್ಲಿ ಹಾದಿಯಾರನ್ನು ಕಳುಹಿಸಿದ್ದ ಎರ್ನಾಕುಳಂ ಚಿಟ್ಟೂರ್ ರಸ್ತೆಯ ಹಾಸ್ಟೆಲ್‍ನಿಂದ ಅರ್ಜಿದಾರ ಅಶೋಕನ್ ತಮ್ಮ ಮನೆಗೆ ಕರೆದು ಕೊಂಡು ಹೋಗಬೇಕು, ಮನೆಯಲ್ಲಿ ಮೊಬೈಲ್ ಫೋನ್ ಬಳಸಲು ಬಿಡಬಾರದು, ಶಫಿನ್ ಜಹಾನ್‍ರ ಜೀವನ, ವಿದ್ಯಾಭ್ಯಾಸ, ಕುಟುಂಬದ ಬದುಕಿನ ಹಿನ್ನೆಲೆ ಇವೆಲ್ಲದ್ದರ ಮೇಲೆ ಪೊಲೀಸರು ನಿಗಾವಿರಿಸಬೇಕು, ಮದುವೆ ಸರ್ಟಿಫಿಕೆಟಿನ ಅಧಿಕೃತತೆ ಮತ್ತು ಅದು ನೀಡಿದ ಸಂಘಟನೆಯ ಕುರಿತು ತನಿಖೆ ನಡೆಸಬೇಕು, ರಿಟ್ ಅರ್ಜಿಯಲ್ಲಿ ಆರೋಪಿಗೆ ಭಯೋತ್ಪಾದಕ ಸಂಘಟನೆ ಗಳೊಂದಿಗೆ ಸಂಬಂಧ ಇದೆಯೇ ಎನ್ನುವ ಕುರಿತು ಆಳವಾದ ತನಿಖೆ ನಡೆಯಬೇಕು, ಇನ್ನೊಂದು ಆದೇಶ ನೀಡುವ ವರೆಗೆ ಮಲಪ್ಪುರಂ ಒದುಕ್ಕುಂಗಲ್‍ನ ಪಂಚಾಯತ್ ಮದುವೆ ಸರ್ಟಿಫಿಕೇಟ್ ನೀಡಬಾರದು. ನರಕದ ಚಿತ್ರ ಸಹಿತವುಳ್ಳ ವಿವರಣೆ ಕೊಟ್ಟು ಪರಲೋಕದ ಜೀವನದ ಶಿಕ್ಷೆಯ ಕುರಿತು ಕಲಿಸಿ ಇಸ್ಲಾಮ್ ಸ್ವೀಕರಿಸಿದರೆ ಮಾತ್ರ ಸ್ವರ್ಗಕ್ಕೆ ಹೋಗಲು ಸಾಧ್ಯವಿದೆ ಎಂದು ನಂಬಿಸ ಲಾಗಿದೆ… ಇತ್ಯಾದಿ ಸರಕಾರಿ ಅಭಿಯೋಜಕರ ವಾದವನ್ನು ಕೋರ್ಟು ಚಾಚೂತಪ್ಪದೆ ಒಪ್ಪಿದ್ದು ಹೈಕೋರ್ಟಿನ ತೀರ್ಪಿನಲ್ಲಿ ಮನವರಿಕೆಯಾಗಿತ್ತು.

ಇದೇ ವೇಳೆ, ಹಾದಿಯಾರಿಗಾಗಿ ಹಾಜರಾದ ವಕೀಲರು ಮುಂದಿಟ್ಟ ವಾದವನ್ನು ಈ ಹಂತದಲ್ಲಿ ಹೈಕೋರ್ಟು ಸ್ವೀಕರಿಸಲಿಲ್ಲ ಎಂದನ್ನಿಸು ತ್ತದೆ. ಹೀಗೆ ಹಾದಿಯಾರನ್ನು ಮೊದಲು ಹಾಸ್ಟೆಲೊಂದಕ್ಕೆ ಕಳುಹಿಸಲಾಯಿತು. ಅಲ್ಲಿಂದ ಮನೆಗೆ ಕರೆದುಕೊಂಡು ಹೋಗುವುದನ್ನು ಹಾದಿಯಾ ವಿರೋಧಿ ಸಿದ್ದರು. ಪೊಲೀಸ್ ನೆರವು ಪಡೆದು ವೈಕಂನ ಅವರ ಮನೆಗೆ ಕರೆತರಲಾ ಯಿತು. ಮನೆ ಮತ್ತು ಪರಿಸರದಲ್ಲಿ ಪೊಲೀಸರ ತೀಕ್ಷ್ಣ ಕಾವಲು ಏರ್ಪಡಿಸ ಲಾಯಿತು. ಈ ಘಟ್ಟದಲ್ಲಿ ಶಫಿನ್ ಜಹಾನ್ ಸುಪ್ರೀಂಕೋರ್ಟಿನ ಮೊರೆ ಹೋದರು. ತನ್ನ ಪತ್ನಿಯನ್ನು ಬಿಟ್ಟು ಕೊಡಬೇಕೆಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದರು. ಇಷ್ಟಾಗುವಾಗ ರಾಷ್ಟ್ರೀಯ ತನಿಖಾ ದಳ ವಿಚಾರಣೆ ನಡೆಸಿ ಲವ್ ಜಿಹಾದ್ ಮತ್ತು ಶಫಿನ್ ಜಹಾನ್‍ಗೆ ಭಯೋತ್ಪಾದಕ ರೊಂದಿಗೆ ಸಂಬಂಧ ಇದೆ ಎಂಬು ದನ್ನು ಪತ್ತೆಹಚ್ಚಿ ಆಗಿಬಿಟ್ಟಿತ್ತು. ನಂತರ ಕೇರಳದಲ್ಲಿ ಐಸಿಸ್ ಭಯೋತ್ಪಾದನಾ ಜಾಲ ಇದೆ ಎಂದು ಸಮರ್ಥಿಸಿ ಕೊಳ್ಳಲು ಬಲಪಂಥೀಯ ಸಂಘಟನೆ ಗಳಿಗೆ ತುತ್ತು ಒದಗಿಸಿ ಕೊಟ್ಟಂತಾಯಿತು.

ಓರ್ವ ಯುವತಿಯ ಜೀವನದ ಕನಸು ಈ ರೀತಿ ಧ್ವಂಸಗೊಂಡು ರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲ್ಪಟ್ಟದ್ದು ಚಿಕ್ಕ ವಿಚಾರವೇನಲ್ಲ. ನಂತರ 2017ರ ನವೆಂಬರ್ 27ಕ್ಕೆ ಸುಪ್ರೀಂಕೋರ್ಟ ಮಧ್ಯಂತರ ತೀರ್ಪು ನೀಡಿ ಹಾದಿಯಾ ರನ್ನು ಸೇಲಂನ ಬಿಎಚ್‍ಎಂಎಸ್ ಕಾಲೇಜಿಗೆ ವಿದ್ಯಾಭ್ಯಾಸ ಮುಂದುವರಿ ಸಲು ಕಳುಹಿಸಿತು. ಹೀಗೆ ಇಲ್ಲಿಂದ ಹಾದಿಯಾ ಉಸಿರು ಬಿಗಿ ಹಿಡಿದು ಜೀವಿಸಿದ್ದ ಹನ್ನೊಂದು ತಿಂಗಳ ಗೃಹಬಂಧನ ಕೊನೆಗೊಂಡದ್ದು.

ಹಾದಿಯಾ ಎನ್ನುವ ಯುವತಿ ಮಾನಸಿಕವಾಗಿ, ಶಾರೀರಿಕವಾಗಿ ದಂಡಿಸಲ್ಪಡುವುದನ್ನು ಕಂಡು ಆತ್ಮ ಸಾಕ್ಷಿಯಿರುವವರು ಕಂಗೆಟ್ಟು ಹೋದರು. ಕೋಟ್ಟಯಂ ವೈಕಂನಲ್ಲಿರುವ ಹಾದಿಯಾರ ತಂದೆ ಆಶೋಕನ್‍ರ ಮನೆಯ ಸುತ್ತಲೂ ಬಲಪಂಥೀಯರ ಕಾವಲಿತ್ತು. ಇದೇ ವೇಳೆ ಹಾದಿಯಾ ರನ್ನು ಬಂದಿಯನ್ನಾಗಿಸಿದ್ದು ಮಾತ್ರವಲ್ಲ ಹುಚ್ಚಳೆನ್ನುವ ಪ್ರಯತ್ನವೂ ನಡೆದಿದೆ. ತಂದೆ ಅಶೋಕನ್ ತೋರಿಸಿದ ಕ್ರೂರ ವರ್ತನೆಯ ದೃಶ್ಯಗಳನ್ನು ಡಾಕ್ಯು ಮಂಟರಿ ನಿರ್ಮಾಪಕ ಸಾಮಾಜಿಕ ಕಾರ್ಯಕರ್ತ ಗೋಪಾಲ್ ಮೆನೊನ್ ಮತ್ತು ರಾಹುಲ್ ಈಶ್ವರ್ ಬಹಿರಂಗ ಗೊಳಿಸಿದಾಗ ಕೇರಳದ ಕವಿ ಸಚ್ಚಿದಾನಂದನ್ ಹೈಕೋರ್ಟಿನ ನಿಲು ವನ್ನೇ ಒಪ್ಪಲಿಲ್ಲ. ಇತರ ಸಮಾಜದ ಮುಂದೆ ಕೇರಳ ಬ ಹಳಷ್ಟು ಹಿಂದೆ ಸರಿದಿದೆ ಎಂದುಬಿಟ್ಟರು.

ಮತಾಂತರ ಮದುವೆ, ಪ್ರೇಮ ವಿವಾಹಗಳೆಲ್ಲ ಕೇರಳದಲ್ಲಿ ಒಂದು ವಾಡಿಕೆ. ಇಲ್ಲ್ಲಿ ಅಖಿಲಾ ಇಸ್ಲಾಮಿಗೆ ಆಕರ್ಷಿಸಲ್ಪಟ್ಟದ್ದು ನಂತರ ತನ್ನ ವರನನ್ನು, ಒಂದು ಮದುವೆ ಪೋರ್ಟಲ್ ಮೂಲಕ ಕಂಡು ಕೊಂಡದ್ದು ಅತ್ಯಪೂರ್ವ ಘಟನೆ ಯೆಂದು ಹೈ ಕೋರ್ಟು ಪರಿಗಣಿಸು ವಲ್ಲಿ ಎಡವಿತೇ? ಸುಪ್ರೀಂ ಕೋರ್ಟು ತೀರ್ಪು ಹೌದೆಂದೇ ಸಾಬೀತು ಪಡಿಸಿದೆ. ತಾನೇಕೆ ಮುಸ್ಲಿಮಳಾದೆ ಎನ್ನುವುದನ್ನು ಹಾದಿಯಾ ಕೋರ್ಟಿನ ಮುಂದೆ ಬಹಿಂಗಪಡಿಸಿದರೂ ಶಫಿನ್ ಜಹಾನ್‍ರೊಂದಿಗಿನ ಮದುವೆ ಮತ್ತು ಆ ನಂತರ ಮದುವೆಯ ಹಿಂದೆ ಇದೆಯೆನ್ನಲಾದ ¨ ಭಯೋತ್ಪಾದಕ ಸಂಬಂಧದತ್ತ ತನಿಖೆಯ ದಿಕ್ಕು ಸರಿಯಿತು. ಹೀಗೆ ಪ್ರಕರಣವನ್ನು ನಿವೃತ್ತಿಯಂಚಿನಲ್ಲಿದ್ದ ಮುಖ್ಯ ನ್ಯಾಯಮೂರ್ತಿ ಕೇಹರ್ ಅಧ್ಯಕ್ಷತೆಯ ಸುಪ್ರೀಂಕೋರ್ಟು ಪೀಠ ಎನ್‍ಐಎ ತನಿಖೆಗೆ ಒಪ್ಪಿಸಿ ಹೋಯಿತು. ಇದು ತೀವ್ರ ಬಲಪಂಥೀಯರಿಗೆ ಸಿಕ್ಕ ಅಸ್ತ್ರ. ಹೀಗೆ ಹಲವಾರು ಹೊಯ್ದಾಟಗಳ ನಡುವೆ ಹಾದಿಯಾ ಎನ್ನುವ ಅಖಿಲಾ ಮತ್ತು ಶಫಿನ್ ಜಹಾನ್‍ರ ಕುರಿತು ಹೈಕೋರ್ಟು ನೀಡಿದ ತೀರ್ಪು ಐತಿ ಹಾಸಿಕತೆಗೊಳಿಸಲ್ಪಟ್ಟರೆ ನಂತರ ಸುಪ್ರೀಂ ಕೋರ್ಟು ಮುಖ್ಯ ನ್ಯಾಯಾಧೀಶರಾಗಿ ನೇಮಕವಾದ ದೀಪಕ್ ಮಿಶ್ರ ಅಧ್ಯಕ್ಷ ತೆಯ ಪೀಠ ಹಾದಿಯಾ ಶಫಿನ್‍ರನ್ನು ಒಂದಾಗಿಸಿ ಇನ್ನೊಂದು ಐತಿಹಾಸಿಕ ತೀರ್ಪು ನೀಡಿತು. ಅವರ ಮದುವೆ ಊರ್ಜಿತಗೊಂಡು ಸತಿಪತಿಗಳೆಂಬ ಅಧಿಕೃತ ಮುದ್ರೆ ಸರ್ವೋಚ್ಚ ನ್ಯಾಯಾ ಲಯದಿಂದ ಈಗ ಸಿಕ್ಕಿದೆ. ಕೊನೆಗೂ ನ್ಯಾಯವೇ ಗೆದ್ದಿದೆ.