ಉತ್ತರಪ್ರದೇಶ: ಮದ್ರಸ ವಿದ್ಯಾರ್ಥಿಗಳ ಬಿಳಿ ಕುರ್ತಾ ಪೈಜಾಮಕ್ಕೆ ಬದಲಾಗಿ ಹೊಸ ಡ್ರೆಸ್ ಕೋಡ್?

0
1208

ಉತ್ತರ ಪ್ರದೇಶ ರಾಜ್ಯ ಸಚಿವ ಮೊಹ್ಸಿನ್ ರಾಝಾ ಅವರು ರಾಜ್ಯ ಸರಕಾರವು ಮದ್ರಸಾ ವಿದ್ಯಾರ್ಥಿಗಳಿಗೆ “ಶೀಘ್ರದಲ್ಲೇ ಹೊಸ ಉಡುಪನ್ನು” ಪ್ರಸ್ತಾಪಿಸಬಹುದೆಂದು ಹೇಳಿದ ಹಿಂದೆಯೇ ಅವರ ಹಿರಿಯ ಸಚಿವ ಸಹೋದ್ಯೋಗಿ ಈ ಹೇಳಿಕೆಯನ್ನು ತಿರಸ್ಕರಿಸಿದ್ದು, ಈ ವಿಷಯದಲ್ಲಿ “ಯಾವುದೇ ಹೊಸ ನೀತಿಯನ್ನು ಸರಕಾರ ರಚಿಸಲಿಲ್ಲ” ಎಂದಿದ್ದಾರೆ. . ಕ್ಯಾಬಿನೆಟ್ ಮಂತ್ರಿ ಲಕ್ಷ್ಮಿ ನಾರಾಯಣ್ ಚೌಧರಿ ಟ್ವೀಟ್ ಮುಖಾಂತರ, ” ಮದ್ರಸಾಗಳ ಡ್ರೆಸ್ ಕೋಡ್ಗೆ ಸಂಬಂಧಿಸಿದಂತೆ ಯಾವುದೇ ಹೊಸ ನೀತಿಯನ್ನು ಸರಕಾರ ರಚಿಸಲಿಲ್ಲ, ಈ ವಿಷಯದಲ್ಲಿ, ಇಲಾಖೆಯ ಯಾವುದೇ ಹಸ್ತಕ್ಷೇಪವಿಲ್ಲ.” ಎಂದು ತಿಳಿಸಿದ್ದಾರೆ.
ಚೌಧರಿ ಅವರು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ಹಜ್ ನ ಕ್ಯಾಬಿನೆಟ್ ಸಚಿವರಾಗಿದ್ದಾರೆ. ವಕ್ಫ್ ಮತ್ತು ಹಜ್ ನ ರಾಜ್ಯ ಸಚಿವರಾಗಿರುವ ಮೊಹ್ಸಿನ್ ರಾಝಾ ಅವರ ಪ್ರಕಾರ, “ಪ್ರತಿ ಅರ್ಥದಲ್ಲಿ ಇತರ ಶೈಕ್ಷಣಿಕ ಸಂಸ್ಥೆಗಳಿಗೆ ಸಮಾನವಾಗಿ ಮದ್ರಸಾಗಳನ್ನು ತರಲು ಯುಪಿ ಸರಕಾರದ ಗುರಿ ಇದೆ. ಈವರೆಗೆ, ಮದ್ರಸಾದಲ್ಲಿರುವ ವಿದ್ಯಾರ್ಥಿಗಳು ಕುರ್ತಾ ಪೈಜಾಮಾ ಧರಿಸುತ್ತಾರೆ. ಔಪಚಾರಿಕವಾದ ಈ ಉಡುಪಿನ ಬದಲು ಸಮಾನವಾದ ಉಡುಪನ್ನು ಸರಕಾರದ ಖರ್ಚಿನೊಂದಿಗೆ ನೀಡುವ ಉದ್ದೇಶ ವಾಗಿದೆ ಎಂದು ರಾಝಾ ಹೇಳಿದರು.
ಅಲ್ಪಸಂಖ್ಯಾತರೊಂದಿಗೆ ನ್ಯಾಯವನ್ನು ಬಿಜೆಪಿ ನೇತೃತ್ವದ ಸರಕಾರಗಳು ಮಾತ್ರ ಮಾಡುತ್ತಿವೆ ಎಂದ ಸಚಿವರು, ಇತರ ರಾಜಕೀಯ ಪಕ್ಷಗಳು ಅಲ್ಪ ಸಂಖ್ಯಾತರನ್ನು ಮತ ಬ್ಯಾಂಕ್ ಎಂದು ಪರಿಗಣಿಸಿವೆ. ಪ್ರಸ್ತುತದಲ್ಲಿ ಮದ್ರಾಸಾ ವಿದ್ಯಾರ್ಥಿಗಳ ಡ್ರೆಸ್ಸಿಂಗ್ ಶೈಲಿಯು ಅವರನ್ನು ಮತ್ತು ಇತರ ಶಾಲೆಗಳ ವಿದ್ಯಾರ್ಥಿಗಳನ್ನು ಸ್ಪಷ್ಟವಾಗಿ ವಿಭಜಿಸುತ್ತಿವೆ ಎಂದು ಹೇಳಿದರು . ಇದೇವೇಳೆ, ಸರ್ಕಾರದ ಕ್ರಮವು ಸಮುದಾಯದ ಮುಖಂಡರಿಂದ ಮಿಶ್ರ ಪ್ರತಿಕ್ರಿಯೆಯನ್ನು ಎದುರಿಸುತ್ತಿದೆ. ಒಂದು ವಿಭಾಗವು ಅದನ್ನು ಸ್ವಾಗತಿಸಿದರೆ ಇತರರು ಸಾಂಪ್ರದಾಯಿಕ ಉಡುಪುಗಳನ್ನುಬದಲಾಯಿಸುವ ಅಗತ್ಯತೆಯನ್ನು ಪ್ರಶ್ನಿಸುತ್ತಿದ್ದಾರೆ.
“ನಾವು ಅದನ್ನು ಸ್ವಾಗತಿಸುತ್ತೇವೆ. ಬದಲಾವಣೆಗಳನ್ನು ಯಾಕೆ ಮತ್ತು ಯಾವ ಉದ್ದೇಶವಿಟ್ಟು ತಂದಿದ್ದಾರೆ ಎಂಬುದನ್ನು ನೋಡಿದ ನಂತರ ನಿರ್ಧರಿಸುತ್ತೇವೆ ” ಎಂದು ಜಮಾಅತ್ ಉಲೇಮಾ -ಇ-ಹಿಂದ್ ಯುಪಿ ಘಟಕದ ಅಧ್ಯಕ್ಷರಾದ ಅಶ್ಶಾದ್ ರಾಶಿದಿ ಹೇಳಿದ್ದಾರೆ. ಇದರ ನೇತ್ರತ್ವದಲ್ಲಿ ಮೊರಾದಾಬಾದ್, ರಾಮ್ಪುರ್ ಮತ್ತು ಬಿಜ್ನೋರ್ ನಲ್ಲಿ ಮದ್ರಸಾಗಳು ನಡೆಯಯುತ್ತಿವೆ. ಆದಾಗ್ಯೂ, ಆಲ್ ಇಂಡಿಯಾ ಶಿಯಾ ಪರ್ಸನಲ್ ಲಾ ಬೋರ್ಡ್ ನ ವಕ್ತಾರ ಯಾಸೂಬ್ ಅಬ್ಬಾಸ್, ಮದ್ರಸಾಗಳಲ್ಲಿ ಧರಿಸುವ ಸಾಂಪ್ರದಾಯಿಕ ಉಡುಪಿನಲ್ಲಿ ಬದಲಾವಣೆಯನ್ನು ತರುವ ಅಗತ್ಯವನ್ನು ಪ್ರಶ್ನಿಸಿದ್ದಾರೆ. ಯಾರೂ ಸಾಂಪ್ರದಾಯಿಕ ಉಡುಪಿಗೆ ವಿರೋಧ ವ್ಯಕ್ತಪಡಿಸಿಲ್ಲವಾದ್ದರಿಂದ ಸರಕಾರದಿಂದ ಹೊಸ ಡ್ರೆಸ್ ಕೋಡ್ ನ ಅಗತ್ಯವನ್ನು ನಾವು ಪ್ರಶ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಉತ್ತರಪ್ರದೇಶದ ಮದ್ರಸಾಗಳಲ್ಲಿ ಎನ್ಸಿಇಆರ್ ಟಿ ಪುಸ್ತಕಗಳನ್ನು ಪರಿಚಯಿಸುವ ಯೋಜನೆಗಳನ್ನು ರಾಜ್ಯ ಸರ್ಕಾರ ಈಗಾಗಲೇ ಮುಂದಿಟ್ಟಿದೆ. ಸರಕಾರವು ಇತರ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ಮದ್ರಸಾ ವಿದ್ಯಾರ್ಥಿಗಳನ್ನು ತರಲು ಮತ್ತು ರಾಜ್ಯ ಮದ್ರಾಸಾ ಮಂಡಳಿಗೆ ಸಂಯೋಜಿತವಾದ ಮದ್ರಸಾಗಳಲ್ಲಿ ಶಿಕ್ಷಣವನ್ನು ಆಧುನೀಕರಿಸುವ ಪ್ರಯತ್ನದಲ್ಲಿದೆ. “ಈಗ ಮದ್ರಸಾದಲ್ಲಿ ವಿದ್ಯಾರ್ಥಿಗಳು ಬಿಳಿ ಕುರ್ತಾ-ಪೈಜಾಮವನ್ನು ಧರಿಸುತ್ತಾರೆ, ಅದು ನಿರ್ದಿಷ್ಟ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ನಾವು ಅವರಿಗೆ ಶೀಘ್ರದಲ್ಲೇ ಹೊಸ ಡ್ರೆಸ್ ಕೋಡ್ ಪ್ರಸ್ತಾಪಿಸುತ್ತೇವೆ ” ಎಂದು ಸಚಿವರು ಹೇಳಿದರು. ಆದರೂ, ಹೊಸ ಡ್ರೆಸ್ ಕೋಡ್ ಏನೆಂದು ವಿವರಿಸಲು ರಾಝಾ ನಿರಾಕರಿಸಿದರು.

ವರದಿ: ಇಂಡಿಯನ್ ಎಕ್ಸ್ ಪ್ರೆಸ್