ಕಾರ್ಗಿಲ್ ವಿಫಲ ದಾಳಿಯ ಬಳಿಕ ಪಾಕ್ ಅಧ್ಯಕ್ಷ ಜನರಲ್ ಮುಶರ್ರಫ್ ಅವರು ಎರಡು ವಿಷಯಗಳನ್ನು ಸ್ಪಷ್ಟವಾಗಿ ಅರಿತುಕೊಂಡಿದ್ದರು ಮತ್ತು ಪಾಕ್ ರಾಜಕಾರಣಿಗಳು ಮತ್ತು ಸೇನಾ ಜನರಲ್ ಗಳಿಗೆ ಅದನ್ನು ಹೇಳಿಯೂ ಇದ್ದರು.
1. ಭಾರತವು ಬಲಶಾಲಿ ರಾಷ್ಟ್ರವಾಗಿದ್ದು, ಯುದ್ಧ ಮಾಡಿ ಭಾರತದ ವಿರುದ್ಧ ಜಯಿಸಲು ಪಾಕ್ ಗೆ ಸಾಧ್ಯವಾಗದು.
2. ಆದ್ದರಿಂದ ಶಾಂತಿ ಸ್ಥಾಪನೆಯ ಆರಂಭಿಕ ಪ್ರಯತ್ನವೆಂಬ ನೆಲೆಯಲ್ಲಿ ಭಾರತದೊಂದಿಗೆ ಒಪ್ಪಂದವೊಂದಕ್ಕೆ ಮುಂದಾಗಬೇಕು. ಲಾಹೋರ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಪ್ರಧಾನಿ ವಾಜಪೇಯಿಯವರು ಈಗಾಗಲೇ ಇಂಥ ವಾತಾವರಣ ಹುಟ್ಟುಹಾಕಿದ್ದಾರೆ ಎಂದು ಹೇಳಿದ್ದರು ಎಂದಿರುವ ಸೈಫುದ್ದೀನ್ ಸೋಝ್ ರು, ನಾನು ನನ್ನ ಪುಸ್ತಕದಲ್ಲಿ ಇದನ್ನೇ ಹೇಳಿರುವೆ.
ಕಾಶ್ಮೀರಿಗಳು ಪಾಕಿಸ್ತಾನಕ್ಕೆ ಸೇರಿದವರಲ್ಲ. ನೀವು ಅವರ ಮುಂದೆ ಪಾಕ್ ಅಥವಾ ಸ್ವಾತಂತ್ರ್ಯ ಎಂಬೆರಡು ಆಯ್ಕೆಯನ್ನಿಟ್ಟರೆ, ಅವರು ಆಝಾದಿಯನ್ನು ಆಯ್ದುಕೊಳ್ಳುವರು ಎಂದು ಅವರು ಹೇಳಿರುವುದನ್ನೇ ಹೇಳಿರುವೆ. ಆದರೆ ನಾನು ನನ್ನ ಪುಸ್ತಕದಲ್ಲಿ ಇದನ್ನು ಬೆಂಬಲಿಸಿಲ್ಲ . ಮಾತುಕತೆ ಮಾತ್ರ ಶಾಂತಿಯನ್ನು ತರಬಹುದು ಅಂದಿರುವೆ ಎಂದಿದ್ದಾರೆ.
ಆದರೆ ನನ್ನನ್ನು ಟೀಕಿಸುವವರು ನನ್ನ ಪುಸ್ತಕ ಓದಿಲ್ಲ. ನಾನು ಸತ್ಯವನ್ನು ಆಧಿಸಿ ಬರೆದಿರುವೆ. ನಾನು ದಾಖಲೆಗಳನ್ನು ನೋಡಿರುವೆ. ಮತ್ತು ಅದನ್ನು ಅಡಗಿಸಲಾರೆ. ದೇಶದ್ರೋಹಿ ನಾನಲ್ಲ, ಬಿಜೆಪಿ ಮತ್ತು ಆರೆಸ್ಸೆಸ್ಸಿನವರಾಗಿದ್ದಾರೆ. ಭಾರತವನ್ನು ಈ ಸ್ಥಿತಿಗೆ ತಂದವರು ಅವರೇ. ನನ್ನ ರಾಜಕೀಯ ಜೇವನದಲ್ಲಿ ನನ್ನ ಮನೆ ಸುಡಲಾಗಿದೆ. ಮಗಳನ್ನು ಅಪಹರಿಸಲಾಗಿದೆ. ಪೊಲೀಸ್ ಭದ್ರತೆಯೊಂದಿಗೆ ಬದುಕುತ್ತಿರುವೆ ಎಂದು ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.












