ಗೋ ಹತ್ಯೆ ಮಾಡುವವರಿಗೆ ಜೈಲು ಶಿಕ್ಷೆ ಖಚಿತ: ಸಿಎಂ ಯೋಗಿ ಆದಿತ್ಯನಾಥ್

0
1120

ಸನ್ಮಾರ್ಗ ವಾರ್ತೆ

ಲಕ್ನೊ,ಅ.28:ಉತ್ತರ ಪ್ರದೇಶದಲ್ಲಿ ಗೋಹತ್ಯೆ ಕಾನೂನು ದುರುಪಯೋಗಗೊಳಿಸಲಾಗುತ್ತಿದೆ ಎಂದು ಅಲಹಾಬಾದ್ ಹೈಕೋರ್ಟು ಹೇಳಿ ಬೆನ್ನಿಗೆ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದು, “ಗೋ ಹತ್ಯೆ ಮಾಡುವವರಿಗೆ ಜೈಲು ಶಿಕ್ಷೆ ಖಚಿತ” ಎಂದಿದ್ದಾರೆ. ನವೆಂಬರ್ ಮೂರಕ್ಕೆ ನಡೆಯವಲಿರುವ ಉಪಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಅವರು ಮಾತಾಡುತ್ತಿದ್ದರು. ಗೋಹತ್ಯೆಯನ್ನು ಒಪ್ಪುವುದಿಲ್ಲ. ಗೋಹತ್ಯೆ ಮಾಡುವವರನ್ನು ಜೈಲಿಗೆ ಅಟ್ಟಲಾಗುವುದು. ಗೋಸಂರಕ್ಷಣೆಗಾಗಿ ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ಕಟ್ಟಿಸಲಾಗುವುದು. ಗೋವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರಿಗೂ ಇದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ದುರುಪಯೋಗವಾಗುತ್ತಿದೆ ಎಂದು ಲಹಾಬಾದ್ ಹೈಕೋರ್ಟು ಹೇಳಿತ್ತು. ನಿರಪರಾಧಿಗಳ ಮೇಲೆ ಕಾನೂನನ್ನು ಪ್ರಯೋಗಿಸಲಾಗುತ್ತಿದೆ. ಈ ಕಾನೂನಿಡಿಯಲ್ಲಿ ಬಂಧನಕ್ಕೊಳಗಾದ ರಹ್ಮದೀನ್ ಜಾಮೀನು ಅರ್ಜಿಯ ವಿಚಾರಣೆಯ ವೇಳೆ ಹೈಕೋರ್ಟು ಗಂಭೀರ ಪರಾಮರ್ಶೆ ಮಾಡಿತ್ತು.

ನಿರಪರಾಧಿಗಳ ಮೇಲೆ ಕಾನೂನು ಹೇರಲಾಗುತ್ತಿದೆ. ವಶಪಡಿಸುವ ಮಾಂಸವನ್ನು ಪರಿಶೀಲಿಸದೆ ಬೀಫ್ ಎಂದು ಪೊಲೀಸರು ನಿರ್ಧರಿಸಿ ಬಿಡುತ್ತಾರೆ. ರಹ್ಮದೀನ್‍ರ ಪ್ರಕರಣದಲ್ಲಿಯೂ ಮಾಂಸದ ಫಾರೆನ್ಸಿಕ್ ಪರೀಕ್ಷೆ ನಡೆದಿಲ್ಲ ಎಂದು ಕೋರ್ಟು ಹೇಳಿದೆ. ಗೋಹತ್ಯೆ ನಿಷೇಧ ಕಾನೂನು ಪ್ರಕಾರ ಕಳೆದ ಒಂದು ತಿಂಗಳಿನಿಂದ ರಹ್ಮದೀನ್ ಜೈಲಿನಲ್ಲಿದ್ದಾರೆ. ಈತನ ಅಪರಾಧದ ಕುರಿತು ಎಫ್‍ಐಆರ್‌ನಲ್ಲಿ ಸರಿಯಾದ ವಿವರವಿಲ್ಲ. ಇದರೊಂದಿಗೆ ಜಾಮೀನು ನೀಡಲು ಹೈಕೋರ್ಟು ತೀರ್ಮಾನಿಸಿತು. ರಸ್ತೆಯಲ್ಲಿ ಅಲೆದಾಡುವ ದನಗಳ ಕುರಿತು ಗಮನ ಹರಿಸಬೇಕೆಂದು ಹೈಕೋರ್ಟು ಹೇಳಿತು.