ಹೊರಾಂಗಣ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ ; ಎ ಪಿ ಮುಹ್ಸಿನ್ ಅಭಿಮತ

0
409

ಸನ್ಮಾರ್ಗ ವಾರ್ತೆ

ಹೊರಾಂಗಣ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ದೈಹಿಕ ಸಾಮರ್ಥ್ಯ ಮಾನಸಿಕ ನೆಮ್ಮದಿ ಹೆಚ್ಚಿಸಿಕೊಳ್ಳಲು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಿದೆ ಎಂದು ಶಿಬಿರದ ನಾಯಕ ಎ ಪಿ ಮುಹ್ಸಿನ್ ಅವರು ನುಡಿದರು.

ತಾಲೂಕಿನ ಆಲದಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ನೆರವೇರಿದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಕವಿತಾ ಮಠದ ಉಪನ್ಯಾಸಕರು ಡಯಟ್ ಹಾವೇರಿ ಹೊರಾಂಗಣದ ಬದುಕಿನಲ್ಲಿ ದಿನನಿತ್ಯ ಎದುರಿಸಬಹುದಾದ ಸಮಸ್ಯೆ ಮತ್ತು ವಿಪತ್ತುಗಳನ್ನು ಎದುರಿಸಲು ಹಾಗೂ ಇತರರಿಗೆ ಸಹಾಯ ಮಾಡಲು ಸಜ್ಜಾಗಿರುವ ವಿಷಯಗಳು, ಪ್ರಥಮ ಚಿಕಿತ್ಸೆ, ದಿನಕ್ಕೊಂದು ಒಳ್ಳೆಯ ಕೆಲಸ , ರಾಷ್ಟ್ರ ಪ್ರೇಮ , ಅಪರಿಚಿತ ಪ್ರದೇಶಗಳಲ್ಲಿ ದಾರಿ ತಪ್ಪುವುದು , ಹಾಗೂ ಜಾಡು ಹಿಡಿಯುವುದು ಇಂತಹ ಹಲವು ವಿದ್ಯೆಗಳು ಬಾಲಕರಿಗೆ ಸೇವಾ ಮನೋಭಾವನೆಗೆ ಪ್ರೇರೇಪಿಸುತ್ತದೆ. ಪ್ರತಿ ಶಾಲೆಗಳಲ್ಲಿ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಇತರರಿಗೆ ಮಾರ್ಗದರ್ಶಿಯಾಗಿ ಬದುಕಲು ಸ್ಕೌಟಿಂಗ್ ತರಗತಿಗಳು ಇತರರಿಗೆ ಪ್ರೇರಕ ಶಕ್ತಿಗಳಾಗುತ್ತವೆ ಎಂದರು.

ನಿವೃತ್ತ ಸೇನಾಧಿಕಾರಿಯಾಗಿ ಲಾರ್ಡ್ ಬೆಡನ್ ಪೋವೆಲ್ ಅವರು 1907ರಲ್ಲಿ ಹುಟ್ಟು ಹಾಕಿದ ಸ್ಕೌಟಿಂಗ್ ಚಳುವಳಿ ಇಂದು ವಿಶ್ವವ್ಯಾಪಿ. 200 ಎರಡು ನೂರಕ್ಕೂ ಅಧಿಕ ರಾಷ್ಟ್ರಗಳಲ್ಲಿ ತನ್ನ ಕಾರ್ಯ ವೈಖರಿಯನ್ನು ವಿಸ್ತರಿಸಿಕೊಂಡು ನಿರಂತರವಾಗಿ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಜಿ ಎನ್ ಜಾವೂರ, ರೇಖಾ ಮಣಣ್ಣೂರ, ಪ್ರೇಮಾ ಏರಿಮನಿ, ಮಕಬೂಲ ದೇವಿಹೊಸೂರ ಮೌಲಾಸಾಬ ಎ ಎ ಮುಕಾಶಿ, ಜಿ ಕೆ ಮಂತಗಿ ಇನ್ನಿತರರು ಉಪಸ್ಥಿತರಿದ್ದರು.

ಮೂರು ದಿನಗಳ ಕಾಲ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಸ್ಕೌಟಿಂಗ್ ಚಳುವಳಿ, ಚಿತ್ರಕಲೆ, ಸ್ಕೌಟ್ಸ್ ನಿಯಮ, ಪ್ರತಿಜ್ಞೆ, ಪ್ರಥಮ ಚಿಕಿತ್ಸೆ, ಸೇವಾ ಕಾರ್ಯ, ಗಂಟುಗಳು, ಶಿಬಿರವಾಸ, ಚಾರಣ ಹಾಗೂ ಹೊರ ಸಂಚಾರದಡಿಯಲ್ಲಿ ಹಾವೇರಿ ವಿಶ್ವವಿದ್ಯಾಲಯ ಹಾವೇರಿಗೆ ಭೇಟಿ ನೀಡಿ ವಿವಿಧ ವಿಭಾಗಗಳು ವೀಕ್ಷಿಸಲಾಯಿತು.

ಸ್ಕೌಟ್ ಗೈಡ್ ಮಕ್ಕಳ ಬೇಸಿಗೆ ಶಿಬಿರಾರ್ಥಿಗಳಿಗೆ ರಾಜ್ಯ ಹಾಗೂ ಜಿಲ್ಲಾ ಸಂಸ್ಥೆಯಿಂದ ಬಿಸ್ಕತ್ತು ಮತ್ತು ಜ್ಯೂಸ್ ವಿತರಿಸಲಾಯಿತು. ಸ್ಥಳೀಯರು ಪಾಲಕರು ಗಣ್ಯರು ಶ್ಲಾಘಿಸಿದರು. ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯವರು ಸದರಿ ಶಿಬಿರವನ್ನು ಸಂಘಟಿಸಲು ಸಹಕರಿಸಿದರು.

LEAVE A REPLY

Please enter your comment!
Please enter your name here