ಜೋಹ್ರಿಗೆ ಬಿಜೆಪಿ -ಆರೆಸ್ಸೆಸ್ ಬೆಂಬಲವಿದೆ- ಜೆ ಎನ್ ಯು ವಿದ್ಯಾರ್ಥಿನಿಯರ ಆಕ್ರೋಶ

0
1273

ದೆಹಲಿಯ ಜೆ ಎನ್ ಯು ಪ್ರೊಫೆಸರ್ ಅತುಲ್ ಜೋಹ್ರಿ ಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊರಿಸಿರುವ ಎಂಟು ಮಂದಿ ಸಂಶೋಧನಾ ವಿದ್ಯಾರ್ಥಿನಿಯರು ಜೆ ಎನ್ ಯು ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಜೋಹ್ರಿ ಗೆ ಬಿಜೆಪಿ ಮತ್ತು ಆರೆಸ್ಸೆಸ್ ನ ಬೆಂಬಲವಿದೆ ಎಂದು ಆರೋಪಿಸಿದ್ದಾರೆ. ತಮಗೆ ಬಿಜೆಪಿ ಮತ್ತು ಆರೆಸ್ಸೆಸ್ ನ ಬೆಂಬಲವಿದೆಯೆಂದು ಹೇಳಿಕೊಂಡಿರುವ ಜೋಹ್ರಿ ಬೆಂಬಲಿಗರು, ತಮ್ಮ ಮೇಲೆ ಒತ್ತಡ ಹೇರುತ್ತಿರುವರೆಂದು ಅವರು ಹೇಳಿದ್ದಾರೆ.

File image of JNU professor Atul Johri. jnu.ac.in
“ನಾವು ಎಡಪಂಥೀಯ ಬೆಂಬಲಿಗರಂತೆ ಗುರುತಿಸಿಕೊಳ್ಳುತ್ತಿದ್ದು ಇದೊಂದು ರಾಜಕೀಯ ಸಂಚಾಗಿದೆ. ನಿಜ ಏನೆಂದರೆ, ನಮ್ಮಲ್ಲಿ ಹೆಚ್ಚಿನವರು abvp ಯ ನೋಂದಾಯಿತ ಸದಸ್ಯರು” ಎಂದು ತಮ್ಮ ಮೇಲೆ ಒತ್ತಡ ಹೇರುತ್ತಿರುವವರು ಹೇಳಿರುವುದಾಗಿ ಈ ವಿದ್ಯಾರ್ಥಿನಿಯರು ಬಹಿರಂಗಪಡಿಸಿದ್ದಾರೆ ಎಂದು ನೇಷನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.
ಜೋಹ್ರಿ ಯವರಿಗೆ ದೆಹಲಿಯ ಪಾಟಿಯಾಲ ಹೌಸ್ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.