ಮುಂಬೈ:Zee ಟಿವಿಯಲ್ಲಿ ಮಾರ್ಚ್ 14 ರಿಂದ ಪ್ರಾರಂಭಗೊಂಡ ಇಷ್ಕ್ ಸುಬಾನಲ್ಲಾಹ್ ಎಂಬ ಧಾರಾವಾಹಿಯ ವಿರುದ್ಧ ಮುಂಬೈಯ ರಜಾ ಅಕಾಡೆಮಿಯು ಕೇಸು ದಾಖಲಿಸಿದ್ದು, ಧಾರ್ಮಿಕ ನಿಯಮಗಳನ್ನು ತಪ್ಪಾಗಿ ಪ್ರಸ್ತುತಪಡಿಸುವ ಮತ್ತು ಧರ್ಮದ ವರ್ಚಸ್ಸಿಗೆ ಕುಂದುಂಟುಮಾಡುವ ರೀತಿಯಲ್ಲಿ ಧಾರಾವಾಹಿ ಪ್ರಸಾರವಾಗುತ್ತಿದ್ದು, ಇದರ ಪ್ರಸಾರವನ್ನು ನಿಷೇಧಿಸಬೇಕೆಂದು ಕೋರಿದೆ. ಐ ಕ್ರಿಯೇಟಿವ್ ನಿರ್ಮಿಸಿರುವ ಮತ್ತು ಅದ್ ನಾನ್ ಖಾನ್ ಹಾಗೂ ಇಶಾ ಸಿಂಗ್ ಪ್ರಮುಖ ಪಾತ್ರದಲ್ಲಿರುವ ಈ ಧಾರಾವಾಹಿಯು ತ್ರಿವಳಿ ತಲಾಕ್ ಗೆ ಸಂಬಂಧಿಸಿದ ಕತೆಯನ್ನು ಹೊಂದಿದ್ದು, ಧರ್ಮ ಸೂಕ್ಷ್ಮ ವಿಷಯವನ್ನು ಪ್ರಚೋಧನಾತ್ಮಕ ರೀತಿಯಲ್ಲಿ ಪ್ರಸ್ತುತಪಡಿಸುತ್ತಿದೆ ಎನ್ನಲಾಗಿದೆ. ಇಸ್ಲಾಮ್ ಬದಲಾಗಬೇಕಾದ, ಅನೇಕಾರು ತಿದ್ದುಪಡಿಗೊಳಗಾಗಬೇಕಾದ ಧರ್ಮವಾಗಿದೆ ಎಂಬಂತೆ ಈ ಧಾರಾವಾಹಿಯ ಪ್ರಸ್ತುತಿಯಲ್ಲಿ ಹೇಳಲಾಗಿದೆ ಎಂದು ಅಕಾಡಮಿ ಹೇಳಿದೆ. ಸುಮಾರು 20 ತಪ್ಪುಗಳನ್ನು ಅಕಾಡಮಿ ಉಲ್ಲೇಖಿಸಿದ್ದು, ಸೆಕ್ಷನ್,124A, 153A, 153B, 504, 292, 293, ಮತ್ತು ೨295A ಅಡಿಯಲ್ಲಿ ಕೇಸು ದಾಖಲಿಸಿದ್ದು, ಸೆಕ್ಷನ್ 95 ರ ಅಡಿಯಲ್ಲಿ ಧಾರಾವಾಹಿಗೆ ನಿಷೇಧ ವಿಧಿಸಬೇಕೆಂದು ಮನವಿ ಮಾಡಿಕೊಂಡಿದೆ.












