ಫೆಲೆಸ್ತೀನಿಯರಿಗೆ ಸಂಬಂಧಿಸಿ ಮಿಡ್ಲ್ ಈಸ್ಟ್ ಮಾನಿಟರ್ ನ ಈ ವರದಿಯನ್ನೊಮ್ಮೆ ಓದಿ

0
1229

ನ್ಯೂಸ್ ಡೆಸ್ಕ್

ಕಳೆದ ತಿಂಗಳು ಪಶ್ಚಿಮ ದಂಡೆ ಮತ್ತು ಗಾಝ ಪಟ್ಟಿಯಲ್ಲಿ ಹತ್ತು ಮಕ್ಕಳೂ ಸೇರಿದಂತೆ 83 ಫೆಲೆಸ್ತಿನಿಯರು ಇಸ್ರೇಲೀ ಪಡೆಗಳಿಂದ ಹತ್ಯೆಗೀಡಾಗಿದ್ದಾರೆ ಎಂದು ಅಧಿಕೃತ ವರದಿ ಬಹಿರಂಗ ಪಡಿಸಿದೆ. ಫೆಲೆಸ್ತೀನಿ ವಿಮೋಚನಾ ಸಂಘಟನೆಯಿಂದ ಬೆಂಬಲಿತವಾಗಿರುವ ಅಬ್ದುಲ್ಲಾಹ್ ಅಲ ಹೌರಾನಿ ಸೆಂಟರ್ ಫಾರ್ ಸ್ಟಡೀಸ್ ಅಂಡ್ ಡೊಕ್ಯುಮಂಟೇಷನ್ ಹೊರತಂದ ಮಾಸಿಕ ವರದಿಯಲ್ಲಿ ಫೆಲೆಸ್ತೀನ್ ಜನರ ಮೇಲೆ ಇಸ್ರೇಲೀ ಪಡೆಗಳ ಹಿಂಸೆಯನ್ನು ವರದಿ ಮಾಡಿದೆ.
ವರದಿಯ ಪ್ರಕಾರ 79 ಫೆಲೆಸ್ತಿನಿಯರು ಗಾಝ ಗಡಿಯಲ್ಲಿ ಶಾಂತಿಯುತ ಹಿಂದಿರುಗುವಿಕೆಯ ವೇಳೆ ಹಾಗೂ ನಾಲ್ವರು ಪಶ್ಚಿಮ ದಂಡೆ ಮತ್ತು ಜೆರುಸಲೇಮ್ ನಲ್ಲಿ ಇಸ್ರೇಲೀ ಆಕ್ರಮಣ ಪಡೆಗಳಿಂದ ಕೊಲ್ಲಲ್ಪಟ್ಟಿದ್ದಾರೆ.
ಗಾಝ ಪಟ್ಟಿಯ ಮೇಲೆ ಇಸ್ರೇಲ್ ನ ಆಕ್ರಮಣಕ್ಕೆ ಸಂಬಂಧಿಸಿದಂತೆ 9 ಮಕ್ಕಳನ್ನು ಒಳಗೊಂಡಂತೆ 79 ನಾಗರಿಕರನ್ನು ಅದು ಕೊಂದಿದೆ ಹಾಗೂ 6309 ನಾಗರಿಕರು ವಿವಿಧ ಹಂತದ ಗಾಯಗಳಿಂದ ಬಳಲುತ್ತಿದ್ದಾರೆ ಎಂದು ವರದಿ ದೃಢ ಪಡಿಸಿದೆ. ಈ ದಾಳಿಗಳಲ್ಲಿ 26 ಫಿರಂಗಿದಳದ ಬಾಂಬ್ ದಾಳಿಗಳು ,50 ವಾಯುದಾಳಿಗಳು, 164 ರೈತರು ಮತ್ತು ಕುರುಬರ ಮೇಲಿನ ಗುಂಡಿನ ದಾಳಿಗಳು ಸೇರಿದ್ದವು. ಮೀನುಗಾರರನ್ನು ಬೋಟುಗಳಿಂದ 49 ಗುಂಡಿನ ದಾಳಿಗಳ ಮೂಲಕ ಆಕ್ರಮಿಸಲಾಯಿತು.