ಬೀದಿ ಗಾಯಕಿಯಿಂದ ಬಾಲಿವುಡ್‌ಗೆ| ಪ್ರಶಸ್ತಿಗಳಿಗೆ ಮಾರುಹೋಗಿ ವಿವಾದಗಳಲ್ಲೇ ಸದ್ದು ಮಾಡುವ ರಾನು ಮಂಡಲ್‌ರ ಇಂದಿನ ಪರಿಸ್ಥಿತಿ ಹೀನಾಯ

0
1299

ಸನ್ಮಾರ್ಗ ವಾರ್ತೆ

ಕೊಳೆ ತುಂಬಿದ ಬಟ್ಟೆಯುಟ್ಟು ರೈಲು ನಿಲ್ದಾಣದಲ್ಲಿ ಕುಳಿತು ಹಾಡಿ ಸಾಮಾಜಿಕ ತಾಣಗಳ ಮುಖಾಂತರ ಜನಮನ್ನಣೆಗೆ ಪಾತ್ರರಾಗಿದ್ದ ರಾನು ಮಂಡಲ್ ಬಾಲಿವುಡ್ ನಲ್ಲೂ ಹಾಡುವ ಸೌಭಾಗ್ಯವನ್ನು ಪಡೆದು ಕೇವಲ ಒಂದು ಹಾಡಿನ ಮೂಲಕ ತನ್ನ ಜೀವನ ಶೈಲಿಯೇ ಬದಲಾಗಿತ್ತು. ಪ್ರಖ್ಯಾತ ಗಾಯಕರು ಮತ್ತು ಸೆಲೆಬ್ರಿಟಿಗಳ ಪ್ರಶಂಸೆಗೂ ಪಾತ್ರರಾಗಿದ್ದ ರಾನು ಮಂಡಲ್‌ಗೆ ಪ್ರಶಸ್ತಿಗಳ ಮಹಾಪೂರವೇ ಹರಿದು ಬಂದಿತ್ತು.

ತನ್ನನ್ನು ಬಿಟ್ಟು ಹೋಗಿದ್ದ ಮಗಳೂ ಕೂಡ ರಾನು ಸೆಲೆಬ್ರಿಟಿಯಾದ ಬಳಿಕ ಮರಳಿ ಬಂದ ಸಂಧರ್ಭದಲ್ಲಿ ಸಣ್ಣ ಮಟ್ಟಿನ ವಿವಾದವೂ ಸದ್ದು ಮಾಡಿತ್ತು. ಅದರ ಜೊತೆಯಲ್ಲೇ ಪ್ರಶಸ್ತಿಗಳು ಮತ್ತು ಹಣದ ಕಂತುಗಳು ಕೈ ಸೇರ ತೊಡಗಿದಂತೆ ತನ್ನ ಕಳೆದು ಹೋದ ಬದುಕಿನ ಬಗ್ಗೆ ಎಷ್ಟು ಬೇಗ ಮರೆತುಬಿಡುತ್ತಾರೆ ಮತ್ತು ಅನಿರೀಕ್ಷಿತ ಸ್ಥಾನ ದೊರೆತಾಗ ಮನಸ್ಸಿನಲ್ಲಿ ಬಲುಬೇಗ ಬೆಳೆಯುವ ದರ್ಪದ ಪ್ರಮಾಣ ಹೇಗಿರುತ್ತೆ ಎಂಬುದು ಕೂಡ ರಾನು ಮಂಡಲ್ ಸಾಕ್ಷೀಕರಿಸಿದ್ದಾರೆನ್ನುವುದು ಈಗ ನೆಟ್ಟಿಗರ ಅಭಿಪ್ರಾಯ.

ರಾನು ಮಂಡಲ್‌ರ ಇಂದಿನ ಪರಿಸ್ಥಿತಿ ಬಹಳ ಹೀನಾಯವಾಗಿದೆ ಎಂದು ವರದಿಯಾಗಿದೆ. ಕಳೆದ ಕೆಲವು ದಿನಗಳಿಂದ ರಾನು ಕುರಿತಾಗಿ ಯಾರಿಗೂ ಸರಿಯಾದ ಮಾಹಿತಿಯಿಲ್ಲ. ಕೊರೋನಾ ಕಾರಣ ಸಾರ್ವಜನಿಕ ಕಾರ್ಯಕ್ರಮಗಳೂ ನಡೆಯದ ಹಿನ್ನೆಲೆಯಲ್ಲಿ ರಾನು ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅದರಂತೇ ಹೊಸ ಮನೆಯನ್ನೂ ತಿರಸ್ಕರಿಸಿ ತನ್ನ ಹಳೆಯ ಮನೆಗೆ ಮರಳಿದ್ದಾರೆನ್ನುವ ಸುದ್ದಿಯೂ ಕೇಳಿಬರುತ್ತಿದೆ. ಪ್ರಶಸ್ತಿಗಳು ಹರಿದು ಬಂದಾಗ ದರ್ಪ ಬೆಳೆದು ಅಭಿಮಾನಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಈ ಹಿಂದೆ ರಾನು ವಿವಾದಾಕ್ಕೀಡಾಗಿದ್ದರು.

ಈ ಹಿಂದೆ ಪಶ್ಚಿಮ ಬಂಗಾಳದ ರಣಾಘಟ್ ರೈಲು ನಿಲ್ದಾಣದಲ್ಲಿ ಲತಾ ಮಂಗೇಶ್ಕರ್‌ರವರ ‘ಏಕ್ ಪ್ಯಾರ್ ಕಾ ನಗ್ಮಾ ಹೇ..’ ಎಂಬ ಹಾಡನ್ನು ಹಾಡಿ ಜನಮನಗಳಲ್ಲಿ ಸ್ಥಾನ ಪಡೆದಿದ್ದರು. ಹಾಡು ವೈರಲ್ ಆಗುತ್ತಿದ್ದಂತೆ ಬಾಲಿವುಡ್‌ನಲ್ಲಿ ಹಾಡುವ ಅವಕಾಶವನ್ನೂ ದಕ್ಕಿಸಿಕೊಂಡಿದ್ದರು.