ಲಂಕಾದಲ್ಲಿ ಹೊರಗಿನವರನ್ನು ಹೊರಗಟ್ಟುವ ಬುದ್ಧಿಸ್ಟ್ ಉಗ್ರವಾದ

0
1489

2018ರ ಆರಂಭದಲ್ಲಿ ಶ್ರೀಲಂಕಾದ ಬುದ್ಧಿಸ್ಟ್ ಭಯೋತ್ಪಾದಕರು ಮತ್ತು ಶ್ರೀಲಂಕಾದ ಮುಸ್ಲಿಮರ ನಡುವೆ ಕ್ಯಾಂಡಿ, ಅಂಬಾರ ನಗರಗಳಲ್ಲಿ ಘರ್ಷಣೆ ನಡೆದಿತ್ತು. ಇಂದು ಜನರನ್ನು ಅಕ್ರಮಾಸಕ್ತ ಗೊಳಿಸುವುದು ಸಾಮಾಜಿಕ ಮಾಧ್ಯಮಗಳು. ಅದರಲ್ಲೂ ಫೇಸ್‍ಬುಕ್‍ನಿಂದ ವೈರಲಾದ ಫೇಕ್ ಸುದ್ದಿಗಳು ಜನರಲ್ಲಿ ತೀವ್ರತೆ,ಉದ್ರಿಕ್ತತೆ, ಮತ್ತು ದಾಂಧಲೆ ಮನೋಭಾವವನ್ನು ಕಟ್ಟಿ ಬೆಳೆಸುತ್ತದೆ.
ಶ್ರೀಲಂಕಾದಲ್ಲಿ ಮುಸ್ಲಿಮರ ವಿರುದ್ಧ ಸಂಘರ್ಷದಲ್ಲಿ ಫೇಸ್ಬುಕ್ ಪ್ರಚೋದನೆ ಬಹುದೊಡ್ಡ ಪಾತ್ರವನ್ನೇ ವಹಿಸಿದೆ. ಭಾರತದಲ್ಲಿ ಫೇಸ್‍ಬುಕ್ ನಿಂದಾಗುವ ಅವಾಂತರಗಳು ಅಪರಿಚಿತವಲ್ಲ. ಕೇರಳದಲ್ಲಿ ನಾಲ್ವರು ಕಿಡಿಗೇಡಿಗಳು ವಾಟ್ಸಪ್ ಹರತಾಳಕ್ಕೆ ಕರೆ ನೀಡಿದ್ದು, ಅದು ಯಶಸ್ವಿಯಾಗಿದ್ದು ಮತ್ತು ಅಲ್ಲಲ್ಲಿ ಘರ್ಷಣೆಗಳಾದದ್ದು ಇತ್ತಿಚೆಗಿನ ಉದಾಹರಣೆ. ಸಿಂಹಳ ಬುದ್ಧಿಸ್ಟ್ ಫೇಸ್‍ಬುಕ್ ಗ್ರೂಪ್‍ಗಳ ವಿದ್ವೇಷದ ಪೋ¸ ಸ್ಟ್ ಗಳೇ ಶ್ರೀಲಂಕದಲ್ಲಿ ಗಲಭೆಗೆ ನಾಂದಿ ಹಾಡಿತು. ಗಲಭೆಯಲ್ಲಿ ಒಬ್ಬ ಮುಸ್ಲಿಂ ಹತನಾಗಿ, ಅನೇಕ ಮುಸ್ಲಿಮರ ಕಟ್ಟಡ ಗಳನ್ನು ಬುದ್ಧಿಸ್ಟ್‍ಗಳು ಕೆಡವಿದರು. ಕೇರಳದಲ್ಲಿ ಫೇಸ್‍ಬುಕ್ ಹರತಾಳದ ಮೂಲಕ ಹಿಂದೂ ಮುಸ್ಲಿಂ ಗಲಭೆಗೆ ಯತ್ನಿಸಿದಂತೆ ಶ್ರೀಲಂಕಾದ ಬುದ್ಧಿಸ್ಟ್ ಉಗ್ರರು ಫೇಸ್‍ಬುಕ್ ಮೂಲಕ ಗಲಭೆ ಸೃಷ್ಟಿಸಿದರು.
ಬುದ್ಧನಿಗೂ ಹಿಂಸೆಗೂ ಫರ್ಲಾಂಗು ದೂರ. ಹೀಗಿರುವಾಗ ಶ್ರೀಲಂಕಾದ ಹಿಂಸೆ ಆದೇಶದಿಂದ ದೂರದಲ್ಲಿರುವ ಬುದ್ಧರ ಪಾಲಿಗೆ ಆಶ್ಚರ್ಯದ ವಿಷಯವೇ ಆಗಿದೆ.
ಸಾವಿನ ಕಾರಣಗಳನ್ನು ಭೇದಿಸಲು ವಿಫಲನಾಗಿ ಅನುಭವಿಸಿದ ಮಾನಸಿಕ ತುಮುಲಗಳಿಂದಾಗಿ ಸಿದ್ಧಾರ್ಥ ಬುದ್ಧನಾದ. ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾಗಿ ಅಹಿಂಸಾ ಪರಮೋ ಧರ್ಮ ಎಂದು ಬೋಧಿಸಿದ. ಇಂತಹ ಬುದ್ಧನ ಅನು ಯಾಯಿಗಳು, ಬುದ್ಧನ ಶಿಕ್ಷಣ ಕಲಿತ ಬುದ್ಧಿಷ್ಟ್‍ಗಳು ಆಕ್ರಮಾಸಕ್ತರು ಹೇಗಾಗಲು ಸಾಧ್ಯ ಎನ್ನುವ ಪ್ರಶ್ನೆ ಹೊರಗೆಲ್ಲೋ ಕುಳಿತು ತಮ್ಮನ್ನೇ ಕೇಳಿಕೊಂಡವರೂ ಇರಬಹುದು. ಅಂದರೆ ಬುದ್ಧ ಶಾಂತಿಯನ್ನು ಬೋಧಿಸಿರುವಾಗ ಅವನ ಅನುಯಾಯಿಗಳು ನರಹಂತಕರಾಗುವುದು ಹೇಗೆ ಸಾಧ್ಯ..
ಶ್ರೀಲಂಕಾಕ್ಕೆ 19ನೆ ಶತಮಾನದಲ್ಲಿ ಬುದ್ಧಿಸ್ಟ್ ಪ್ರೊಟೆಸ್ಟೆಂಟಿಸಂ ಆಗಮಿಸಿತು. ಬಂತು. ಶ್ರೀಲಂಕಾದ ಆಂತರಿಕ ಯುದ್ಧವನ್ನು ಸಮರ್ಥಿಸಿಕೊಳ್ಳು ವಂತಹ ಉಪಾಯಗಳಿಗೆ ಅದು ಮೊರೆಹೋದಾಗ ಅಲ್ಲಿನ ಬುದ್ಧ ಸನ್ಯಾಸಿಗಳನ್ನು ಅದು ಆಕರ್ಷಿಸಿಕೊಂಡಿತು. ಬುದ್ಧಿಸ್ಟ್ ಪ್ರೊಟಸ್ಟೆಂಟರು ಶ್ರೀಲಂಕಾವನ್ನು ಹೊರ ಗಿನವರಿಂದ ರಕ್ಷಿಸಲು ಅಸ್ತ್ರ ಎತ್ತಿಕೊಳ್ಳಬೇಕೆಂದು ಪ್ರಚಾರ ಮಾಡಿದರು. ಶ್ರೀಲಂಕಾದ ಹತ್ತಿರದ ಭಾರತದಲ್ಲಿ ಆರೆಸ್ಸೆಸ್ ಹೊರಗಿನವರನ್ನು ಹೊರಗಟ್ಟಿ ಅಖಂಡ ಭಾರತ ಮಾಡಲು ಹೊರಟು ಹತ್ತೆಪ್ಪತ್ತು ವರ್ಷ ಕಳೆದುದು ತೀವ್ರ ಮನೋಭಾವದ ಸನ್ಯಾಸಿ ವರ್ಗವನ್ನು ಆಕರ್ಷಿಸಿರಬಹುದು. ಉಗ್ರ ಬುದ್ಧಿಸಮನ್ನು ಅವರು ಪ್ರಚಾರ ಮಾಡಿದರು. ಹೊರಗಿನವರನ್ನು ಶ್ರೀಲಂಕಾದಿಂದ ಹೊರಗಟ್ಟ ಬೇಕು. ಇದಕ್ಕಾಗಿ ಎಲ್ಲ ತ್ಯಾಗಕ್ಕೂ ತಯಾರಿರುವ ಒಂದು ಬುದ್ಧ ಮತವರ್ಗವನ್ನು ಅವರು ಹುಟ್ಟುಹಾಕ ತೊಡಗಿದರು.
ಮುಖ್ಯವಾಗಿ ಶ್ರೀಲಂಕಾದ ಕ್ಯಾಂಡಿ ಮುಂತಾದ ಕಡೆಗಳಲ್ಲಿ ಮುಸ್ಲಿಮರೇ ಹೆಚ್ಚು ಶ್ರೀಮಂತರು. ಯಾಕೆಂದರೆ ಅವರು ವ್ಯಾಪಾರಿಗಳು. ಬ ಹುತೇಕ ಕೇರಳದ ಮೂಲದವರು. ತಮ್ಮ ವಾಪಾರ ಸಾಮಥ್ರ್ಯದಲ್ಲಿ ಅವರು ಅಲ್ಲಿ ಹೊಳೆದು ಕಾಣಿಸಿ ದಾಗ, ರಾಜಕೀಯ, ಆರ್ಥಿಕವಾಗಿ ಬಲಾಢ್ಯವಾಗಿ ರುವುದು ಕಂಡಾಗ ಬುದ್ಧ ತೀವ್ರವಾದಿಗಳ ಕಣ್ಣು ಕೆಂಪಾಯಿತು. ಇನ್ನು ಇವರು ನಮ್ಮನ್ನು ಇಲ್ಲಿ ಬಿಟ್ಟು ಬಿಡಲಾರರು. ಇವರ ಹಣದ ದರ್ಪ, ರಾಜಕೀಯ ವಶೀಲಿಬಾಜಿ ಹೆಚ್ಚಾಗಿದೆ. ಇವರು ಒಂದಿಲ್ಲ ಒಂದು ದಿನ ಮೂಲ ನಿವಾಸಿಗಳಾದ ನಮ್ಮನ್ನೇ ಶ್ರೀಲಂಕಾದಿಂದ ಹೊರಗಟ್ಟುತ್ತಾರೆ ಎಂದು ತಿಳಿಯುವ ಎಲ್ಲ ಸನ್ನಿವೇಶಗಳು ಅಷ್ಟ ರಲ್ಲಿ ಶ್ರೀಲಂಕಾದಲ್ಲಿ ನಿರ್ಮಾಣಗೊಂಡಿದ್ದವು. ಹೀಗಾಗಿ ಹೊರಗಿನವರನ್ನು ಹೊರಗಟ್ಟಲಿಕ್ಕಾಗಿ ಸಿಂಹಳೀಸ್ ಪೇಸ್‍ಬುಕ್ ಸಂಘಟನೆ ಪಣ ತೊಟ್ಟಿತ್ತು.

19 ಶತಮಾನದಲ್ಲಿ ಶ್ರೀಲಂಕಾದಲ್ಲಿ ಬುದ್ಧಿಸ್ಟ್ ಪ್ರೊಟಸ್ಟೆಂಟಸಂ ಹುಟ್ಟಿತು. ಅದರ ಪಿತಾಮಹ ಧರ್ಮಪಾಲರು ಅಂದಿನ ಸಿಲೋನನ್ನು ಆಳು ತ್ತಿದ್ದ ಬ್ರಿಟಿಷರನ್ನು ಹೊರದಬ್ಬಿ ಬುದ್ಧ ರಾಷ್ಟ್ರ ಸ್ಥಾಪಿಸಲು ಅಕ್ರಮದಾರಿಯನ್ನು ಅನುಸರಿಸಿದರೂ ಅಡ್ಡಿಯಿಲ್ಲ ಎನ್ನುವ ಮನೋಭಾವವನ್ನು ಅವರು ಕಟ್ಟಿಕೊಟ್ಟಿ ದ್ದರು. ಅಕ್ರಮ ಅಂದರೆ ಬುದ್ಧ ಧರ್ಮಕ್ಕೆ ಎರ ವಾದ ಹಿಂಸೆಯ ಮಾರ್ಗವನ್ನು ನೆಚ್ಚಿಕೊಳ್ಳಬಹುದು ಎಂದಾಗಿದೆ. ಈವರೆಗೂ ಧರ್ಮಪಾಲ ಶ್ರೀಲಂಕಾಕ್ಕೆ ಸ್ವಾತಂತ್ರ್ಯ ಒದಗಿಸಿಕೊಟ್ಟ ವೀರ ಪುರುಷ ಎಂದು ಶ್ರೀಲಂಕನ್ನರ ವಿಶ್ವಾಸವಾಗಿದೆ. ಧರ್ಮ ಪಾಲರು ಬುದ್ಧ ವಿದ್ಯಾಲಯಗಳನ್ನು ಕಟ್ಟಿಸುವುದು, ಸಿಂಹಳ ಭಾಷೆ ಅಭಿವೃದ್ಧಿ ಕಾರ್ಯಕ್ಕೆ ಕೈಹಾಕಿದ್ದರು.
1915ರಲ್ಲಿ ಬುದ್ಧಿಸ್ಟ್ ಮೆರವಣಿಗೆ ಒಂದು ಮುಸ್ಲಿಮ್ ಮಸೀದಿ ಮುಂದಿನಿಂದ ಹೋಗದಂತೆ ತಡೆಯಲಾಯಿತು. ಬೇರೆ ದಾರಿಯಲ್ಲಿ ಹೋಗು ವಂತೆ ಮಾಡಲಾಯಿತು. ಇಲ್ಲಿಂದ ಅಸಮಾಧಾನದ ಹೊಗೆ ಏಳಲಾರಂಭವಾಯಿತು. ನಂತರ ಸಿಂಹಳದ ಬುದ್ಧಿಸ್ಟ್‍ಗಳ ಮುಸ್ಲಿಮರ ವಿರುದ್ಧ ದಾಳಿಯಿಂದಾಗಿ 25 ಮುಸ್ಲಿಮರು ಸತ್ತು ಬಿದ್ದರು. ಮಸೀದಿಗಳು ಬೆಂಕಿಗಾಹುತಿಯಾದವು. ಮುಸ್ಲಿಮರ ವ್ಯಾಪಾರ ಸಂಸ್ಥೆಗಳನ್ನು ಸುಟ್ಟುಹಾಕ ಲಾಯಿತು. ಗಲಭೆ ನಿಲ್ಲಿ ಸಲು ಪ್ರಯತ್ನಿಸಿದ ಮುಸ್ಲಿಮರ ಮತ್ತು ಹಿಂದೂ ಗಳನ್ನು ಅಂದು ಬ್ರಿಟಿಷರು ಕೊಂದರು. ನಂತರ ಇದು ಕಿಡಿಹಚ್ಚಿತು. ಶ್ರೀಲಂಕಾದ ಸ್ವಾತಂತ್ರ್ಯ ಹೋರಾಟಕ್ಕೆ ಇದು ವೇಗವರ್ಧನೆಯಾಯಿತು.

ಶ್ರೀಲಂಕಾ ಬ್ರಿಟಿಷರಿಂದ ಸ್ವತಂತ್ರವಾದ ಬಳಿಕ 1983ರಲ್ಲಿ ತಮಿಳ್ನಾಡಿನಿಂದ ವಲಸೆ ಬಂದ ತಮಿಳು ಭಾಷಿಕ ಹಿಂದೂಗಳನ್ನು ದೇಶದಿಂದ ಹೊರಗೆ ಹಾಕುವ ಪ್ರಕ್ರಿಯೆ ಗರಿಗೆದರಿತು. ಇದ ರಿಂದ ಕೋಪ ಗೊಂಡ ತಮಿಳರು ಶ್ರೀಲಂಕಾದ ಜಾಫ್ನಾ ಕೇಂದ್ರವಾಗಿಟ್ಟು ಪ್ರತ್ಯೇಕ ರಾಷ್ಟ್ರ ಕೂಗೆಬ್ಬಿಸಿ ದರು. ನಂತರ ಹಲವು ತಮಿಳು ಸಂಘಟನೆ ಯವರನ್ನು ಶ್ರೀಲಂಕಾ ಸೈನ್ಯ ಕೊಂದು ಹಾಕಿತು. ಕೊನೆಗೆ ಎಲ್‍ಟಿಟಿಇಯ ಪ್ರಭಕರರನ್ನು ಕೂಡಾ ಕೊಂದು ತಮಿಳ್‍ವಾದದ ಹುಟ್ಟಡಗಿಸಲಾಯಿತು.
ಸೈನ್ಯದಲ್ಲಿಯೂ ತೀವ್ರ ಬುದ್ಧಿಸಂ ಇಂದು ಹಾಸುಹೊಕ್ಕಿದೆ. ಅಲ್ಲಿಗೇ ನಿಂತಿಲ್ಲ. ಸಾಮಾನ್ಯ ಬುದ್ಧಿಸ್ಟರ ತಲೆಗೆ ಈ ತೀವ್ರವಾದವನ್ನು ಆ ¸ ಸನ್ಯಾಸಿಗಳು ತುಂಬುತ್ತ್ತಿದ್ದಾರೆ. ತೀವ್ರವಾದವನ್ನು ಅಥವಾ ಅಕ್ರಮಾಸಕ್ತತೆಯನ್ನು ಬುದ್ಧ ಧರ್ಮದ ಪಾಠಗಳು, ಸೈನಿಕ ರೂಪಕಗಳನ್ನು ಉಪಯೋಗಿಸಿ ಸೈನಿಕರ ನಡುವೆಯೂ ಕೆಲವು ಬುದ್ಧ ಸನ್ಯಾಸಿಗಳು ವೈಭವೀಕರಿಸುತ್ತಿದ್ದಾರೆ.
2009ರಲ್ಲಿ ತಮಿಳರ ವಿರುದ್ಧ ಆಂತರಿಕ ಯುದ್ಧ ನಿಂತಾಗ ಶ್ರೀಲಂಕದಲ್ಲಿ ಎಲ್ಲರೂ ಶಾಂತಿ ಯಿಂದ ಬದುಕಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ದೇಶದ ಬುದ್ಧಿಸ್ಟ್ ತೀವ್ರವಾದಿಗಳು ಇನ್ನೊಂದು ಬಲಿಪಶುವನ್ನು ಕಂಡುಹುಡುಕಿದರು. ಮುಸ್ಲಿಮರು ಹೊರಗಿನವರು. ಅವರನ್ನು ಹೊರಗಟ್ಟ ಬೇಕು. ಶ್ರೀಲಂಕಾದಲ್ಲಿ ಮುಸ್ಲಿಮರ ವಿರುದ್ಧ ಘರ್ಷಣೆಗೆ ಕಾರಣ ಇದು. ಈ ಕೋನದಲ್ಲಿ ನೋಡುವಾಗ ಭಾರತದ ಕೋಮುವಾದಿಗಳ ಪ್ಯಾಶಿಸ್ಟ್ ವಾದ ಶ್ರೀಲಂಕನ್ ಬುದ್ಧಿಸ್ಟ್ ಫ್ಯಾಶಿಸ್ಟ್ ವಾದ ಏಕಬಿಂದುವಿನಲ್ಲಿ ಈಗ ಗುರುತಿಸಿ ನಿಂತಿದೆ. ಬರ್ಮದಲ್ಲಿ ಪ್ರಯೋಗವಾಗಿದ್ದು ಶ್ರೀಲಂಕಾದ ಮುಸ್ಲಿಮರನ್ನು ಕಾದಿದೆಯೇ ಎನ್ನುವು ದನ್ನು ಕಾಲವೇ ತಿಳಿಸಬೇಕು.