ಹಲ್ಲೆಗೊಳಗಾಗುತ್ತಿದ್ದ 5 ಹಿಂದುಗಳನ್ನು ತಮ್ಮ ಮನೆಯಲ್ಲಿಟ್ಟು ರಕ್ಷಿಸಿದ ಮುಸ್ಲಿಮರು: ವ್ಯಾಪಕ ಪ್ರಶಂಸೆ

0
2602

ಮೂಲ: ಕಾರವಾನ್ ನ್ಯೂಸ್
ಕನ್ನಡಕ್ಕೆ: ಆಯಿಷತುಲ್ ಅಫೀಫಾ

ಮುಂಬೈ: ಕಳೆದವಾರ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಜನಸಮೂಹದಿಂದ ಐದು ಜನರು ಹತ್ಯೆಗೊಳಗಾದ ಗಂಟೆಗಳ ನಂತರ, ನಾಸಿಕ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು, ಮಗುವನ್ನೊಳಗೊಂಡ 5 ಜನರ ಮತ್ತೊಂದು ತಂಡವನ್ನು ಹಲ್ಲೆಕೋರರಿಂದ ರಕ್ಷಿಸಲಾಯಿತು -ಐದು ಜನರನ್ನು ಉಳಿಸಲು ತನ್ನ ಜೀವವನ್ನು ಪಣಕ್ಕಿಟ್ಟ ಮುಸ್ಲಿಂ ಯುವಕ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದಾನೆ.
ವರದಿ ಪ್ರಕಾರ ಈ ತಂಡ ದಿನಗೂಲಿ ಕೆಲಸವನ್ನು ಹುಡುಕಲು ಧುಲೆಗೆ ಹೋಗಲು ಯೋಚಿಸಿತ್ತು. ಆದರೆ ಅವರಲ್ಲಿ ಮಹಿಳೆಯೊಬ್ಬಳ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದುದನ್ನು ಕಂಡುಕೊಂಡ ನಂತರ ಮಾಲೆಗಾಂವ್ ನಿಂದ 35 ಕಿ.ಮೀ. ದೂರದಲ್ಲಿರುವ ಮನ್ಮಾಡ್ ನಲ್ಲಿರುವ ಮನೆಗೆ ರೈಲಿನಲ್ಲಿ ಹಿಂತಿರುಗಲು ಆ ಗುಂಪು ತೀರ್ಮಾನಿಸಿತು. ಹಾಗೆ ಹಿಂದುರುಗುವ ವೇಳೆ ಮಾಲೆಗಾಂವ್ ನಲ್ಲಿ ಭಿಕ್ಷೆ ಬೇಡಲು ತೀರ್ಮಾನಿಸಿದರು. ರೋಸಾನಾಬಾದ್ ಪ್ರದೇಶದ ಮಸೀದಿ ಬಳಿ ಹಣ ಸಿಗಬಹುದೆಂದು ಸ್ಥಳೀಯರು ಹೇಳಿದ್ದಾರೆ ಎಂದು ಅವರು ಹೇಳಿರುವುದಾಗಿ ದಿ ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ. ನ್ಯೂಸ್ 18.ಕಾಂ ನ ಒಂದು ವರದಿ ಪ್ರಕಾರ ಘಟನೆ ಮನ್ಮಾಡ್ ನಲ್ಲಿ ನಡೆದಿದೆ. ಅವರು ಮೂಲತಃ ಪರ್ಭಾನಿ ಜಿಲ್ಲೆಯವರೆಂದು ವರದಿ ಹೇಳುತ್ತದೆ .
ಟೈಮ್ಸ್ ಆಫ್ ಇಂಡಿಯ ಪ್ರಕಾರ, ಬೆಳಿಗ್ಗೆ ಸುಮಾರು 9.30 ರ ವೇಳೆಗೆ, ಅವರು ಭಿಕ್ಷೆ ಹುಡುಕುತ್ತಿರುವಾಗ, ಅರೇಬಿಕ್ ತರಗತಿಯಿಂದ ಮನೆಗೆ ಹಿಂದಿರುಗುತ್ತಿದ್ದ 13 ವರ್ಷದ ಹುಡುಗನನ್ನು ಅವರು ಮರಾಠಿ ಭಾಷೆಯಲ್ಲಿ ಮಾತನಾಡಿಸಿದರು, ಮರಾಠಿ ತಿಳಿದಿಲ್ಲದ ಕಾರಣ ಅವರು ಏನು ಹೇಳುತ್ತಾರೆಂದು ಹುಡುಗನಿಗೆ ಅರ್ಥವಾಗಲಿಲ್ಲ ಮತ್ತು ಆ ಗುಂಪು ತನ್ನನ್ನು ಎಳೆಯಿತು ಎಂದು ಫೋಷಕರಲ್ಲಿ ತಿಳಿಸಲು ಆ ಬಾಲಕ ಮನೆಗೆ ಧಾವಿಸಿದನು, ಇದು ಮಕ್ಕಳ ಕಳ್ಳರೆಂಬ ವದಂತಿಯನ್ನು ಸೃಷ್ಟಿಸಿತು ಮತ್ತು ಇದು ಸಾಮಾಜಿಕ ಮಾಧ್ಯಮದ ಮೂಲಕ ವೇಗವಾಗಿ ಹರಡಿತು. ಕ್ಷಿಪ್ರ ಗತಿಯಲ್ಲಿ ಜನಸಮೂಹವು ಅಲೀ ಅಕ್ಬರ್ ಆಸ್ಪತ್ರೆಯ ಬಳಿ ಒಟ್ಟುಸೇರಿತು.
ಅವರ ಮೇಲೆ ಹಲ್ಲೆಗೆ ಮುಂದಾಯಿತು. ಆಗ ಹಣ್ಣಿನ ವ್ಯಾಪಾರಿ ವಾಸಿಂ (ಚಿತ್ರದಲ್ಲಿರುವುದು) ಎಂಬ ಸ್ಥಳೀಯ ಯುವಕನು ಅವರನ್ನು ರಕ್ಷಿಸಿದನು ಇತರರು ತಕ್ಷಣವೇ ಎಲ್ಲಾ ಐದು ಜನರನ್ನು ಜವಳಿ ಕಚ್ಚಾ ಸಾಮಗ್ರಿಯನ್ನು ಸಂಗ್ರಹಿಸುವ ಒಂದು ಸಣ್ಣ ಮನೆಯೊಳಗೆ ತಳ್ಳಿದರು. ಹಣ್ಣಿನ ಮಾರಾಟಗಾರ ಶೇಖ್ ವಾಸಿಂ, ಶೇಖ್ ಕರೀಮ್ ಅವರು ಪಟ್ಟಣದಲ್ಲಿ ಈ ತಂಡವನ್ನು ನಾವು ನೋಡಿದ್ದೇವೆ ಎಂದು ಮಧ್ಯಪ್ರವೇಶಿಸಿದರು. ಆದರೆ ಅದು ಜನಸಮೂಹವನ್ನು ಶಮನಗೊಳಿಸಲಿಲ್ಲ.
ಆದಾಗ್ಯೂ, ಶೇಖ್ ವಾಸಿಮ್ ಅವರ ಚಿಕ್ಕಪ್ಪ ರಷೀದ್ ರೇಶನವಾಲಾ ಅವರೊಂದಿಗೆ ಸೇರಿ ತಂಡಕ್ಕೆ ತಪ್ಪಿಸಿಕೊಳ್ಳುವ ಸಂದರ್ಭವನ್ನು ಒದಗಿಸಿಕೊಟ್ಟರು. ಶೀಘ್ರದಲ್ಲೇ ದಂಪತಿ ಮತ್ತು ಮಗುವನ್ನು ಗಿರಣಿ ಸಮೀಪದಲ್ಲಿದ್ದ ರೇಶನ್ವಾಲಾ ಮನೆ ಮತ್ತು ಇತರ ಎರಡು ಗ್ರಾಮಸ್ಥರ ಮನೆಗಳಲ್ಲಿ ಅಡಗಿಸಿಡಲಾಯಿತು. ಪೋಲೀಸರು ಘಟನಾ ಸ್ಥಳವನ್ನು ತಲುಪುವವರೆಗೂ ಉದ್ರಿಕ್ತರನ್ನು ತಡೆ ಹಿಡಿಯುವಲ್ಲಿ ಮತ್ತು ಮಧ್ಯರಾತ್ರಿಯ ಹೊತ್ತಿಗೆ ತಂಡವನ್ನು ರಕ್ಷಿಸುವಲ್ಲಿ ಅವರು ಸಫಲರಾದರು .
“ಉದ್ರಿಕ್ತರ ಗುಂಪು ಒಂದು ಬೈಕು ಜೊತೆಗೆ ಪೊಲೀಸ್ ವ್ಯಾನನ್ನು ಹಾನಿಗೊಳಿಸಿದೆ” ಎಂದು ಹೆಚ್ಚುವರಿ ಪೊಲೀಸ್ ಅಧಿಕಾರಿ ಹರ್ಶ್ ಪೊದಾರ್ ಹೇಳಿದ್ದಾರೆ.
ರಕ್ಷಿಸಿಸಲ್ಪಟ್ಟವರೆಂದರೆ, ಗಜಾನನ್ ಹಿರೇ (30), ಅವರ ಪತ್ನಿ ಸಿಂಧು (28), ಅವರ ಎರಡು ವರ್ಷದ ಮಗ, ಯೋಗೇಶ್ ವಾನಿ (30) ಮತ್ತು ಅನ್ಸುಯಾ ವಾಣಿ (30).
ಆ ಪ್ರದೇಶದಿಂದ ಹೊರ ಬರುವ ದಾರಿ ಯಾವುದು ಎಂದು ಆ ಅರೇಬಿಕ್ ವಿದ್ಯಾರ್ಥಿಯಲ್ಲಿ ನಾವು ಕೇಳಿರುವುದಾಗಿ ಪೊಲೀಸಧಿಕಾರಿ ಪೊದ್ವಾರ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ .
ಈ ಐದು ಮಂದಿಯನ್ನು ಉಳಿಸಲು ನೆರವಾದ ಅಫ್ರೀನ್ ಸೈಸಿಂಗ್ ವರ್ಕ್ಸ್ ಗಿರಣಿಯ ಮಾಲೀಕರು ಮತ್ತು ರಶೀದ್ ರೇಶನವಾಲಾರಿಗೆ ಎಸ್ಪಿ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ .
ರೇಶನ್ವಾಲಾ ಹೇಳುತ್ತಾರೆ “ಮುಸ್ಲಿಮರು ಜನರನ್ನು ಕೊಲ್ಲುವುದಿಲ್ಲ ,ರಕ್ಷಿಸುತ್ತಾರೆ ಎಂಬ ಸಂದೇಶವನ್ನು ನೀಡಲು ಬಯಸುತ್ತೇನೆ . ಮಾನವೀಯತೆಯನ್ನು ಉಳಿಸುವ ಸಲುವಾಗಿ ೫ ಜನರನ್ನು ನನ್ನ ಮನೆಯಲ್ಲಿರಿಸಿದೆ ”
ಕಳೆದ ವಾರವಷ್ಟೇ ಮಕ್ಕಳ ಕಳ್ಳರೆಂಬ ಅನುಮಾನದ ಮೇರೆಗೆ ಇಬ್ಬರು ಭಿಕ್ಷುಕರು ಮಾಲೆಗಾಂವ್ನಲ್ಲಿ ಹಲ್ಲೆಗೊಳಗಾದಾಗ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಿಜ್ವಾನ್ ಬ್ಯಾಟೇರಿವಾಲಾ ಅವರಿಂದ ರಕ್ಷಿಸಲ್ಪಟ್ಟಿದ್ದರು.