ಸನ್ಮಾರ್ಗ ವಾರ್ತೆ
ಲಕ್ನೊ,ನ.29: ಉತ್ತರ ಪ್ರದೇಶದ ಸೋನ್ಭದ್ರದಲ್ಲಿ ಶಾಲೆಯ ಮಧ್ಯಾಹ್ನದೂಟ ಯೋಜನೆಯಲ್ಲಿ ಒಂದು ಲೀಟರ್ ಹಾಲು 81 ವಿದ್ಯಾರ್ಥಿಗಳಿಗೆ ನೀಡುವುದು ವಿವಾದವಾಗಿದೆ. ಒಂದು ಲೀಟರ್ ಹಾಲನ್ನು ಬಕೆಟ್ಗೆ ಹಾಕಿ ನೀರು ಸುರಿದು ವಿದ್ಯಾರ್ಥಿಗಳಿಗೆ ಕೋಡುತ್ತಿರುವ ವೀಡಿಯೊ ಪ್ರಚಾರವಾದ ನಂತರ ಘಟನೆ ಬಯಲಾಗಿದೆ.
ಸೋನ್ಭದ್ರದ ಗ್ರಾಮ ಸದಸ್ಯ ವೀಡಿಯೊ ತೆಗೆದು ಪ್ರಚಾರ ಮಾಡಿದ್ದು ಕುದಿಸಿದ ಬಿಸಿ ನೀರಿಗೆ ಒಂದು ಲೀಟರ್ ಹಾಲು ಹಾಕಿ ಅಡಿಗೆ ಮಾಡಲಾಗುತ್ತಿದೆ. ನಂತರ ಪ್ರತಿ ವಿದ್ಯಾರ್ಥಿಗಳಿಗೆ ಅರ್ಧ ಗ್ಲಾಸು ಕೊಡುತ್ತಿರುವುದು ವೀಡಿಯೊದಲ್ಲಿದೆ.
ಉತ್ತರಪ್ರದೇಶ ಪ್ರಾಥಮಿಕ ಶಾಲೆಯಲ್ಲಿ 171 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಬುಧವಾರ ಎಂಬತ್ತೊಂದು ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಬಂದಿದ್ದರು. ಉತ್ತರಪ್ರದೇಶ ಶಾಲೆಯ ಮಧ್ಯಾಹ್ನದೂಟ ವಿತರಣೆಯ ಭ್ರಷ್ಟಾಚಾರವನ್ನು ಬಹಿರಂಗಗೊಳಿಸಿದ ಪತ್ರಕರ್ತನ ವಿರುದ್ಧ ಕೇಸು ಹಾಕಿದ ಘಟನೆ ನಡೆದು ಎರಡು ತಿಂಗಳ ನಂತರ ಹೊಸ ವಿವಾದ ಸೃಷ್ಟಿಯಾಗಿದೆ.












