ರೈತರ ಹೋರಾಟವನ್ನು ಪ್ರತಿರೋಧಿಸಲು ಬಿಜೆಪಿಯಿಂದ 700 ಸಭೆ,100 ಪತ್ರಿಕಾಗೋಷ್ಠಿ

0
600

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.12: ಕೇಂದ್ರ ಸರಕಾದ ವಿವಾದಿತ ರೈತ ಕಾನೂನು ವಿರುದ್ಧ ರೈತ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿರೋಧಿಸುವ ಸಲುವಾಗಿ ನೂರು ಪತ್ರಿಕಾಗೋಷ್ಠಿ ಏಳ್ನೂರು ರೈತರ ಸಭೆಯನ್ನು ಕರೆಯಲು ತೀರ್ಮಾನಿಸಿದೆ. 700 ಜಿಲ್ಲೆಗಳಲ್ಲಿ ಸಭೆಗಳು ನಡೆಯಲಿದೆ ಎಂದು ವರದಿಯಾಗಿದೆ.

ಕೇಂದ್ರ ಸಚಿವರು ಪ್ರಚಾರದ ಭಾಗವಾಗಲಿದ್ದಾರೆ. ರೈತ ಕಾನೂನಿಗೆ ಸಂಬಂಧಿಸಿ ರೈತರ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ನೀಡಲಿದೆ. ರಐತರ ಹೋರಾಟ ತಿದ್ದುಪಡಿ ಮಾಡುವುದಾಗಿ ಕೇಂದ್ರ ಸರಕಾರ ಹೇಳಿದ್ದು ಇದನ್ನು ರೈತರು ತಿರಸ್ಕರಿಸಿದ್ದಾರೆ. ಇದರ ನಂತರ ರೈತರನ್ನು ಪುನಃ ಚರ್ಚೆಗೆ ಕರೆದರೂ ರೈತರು ಹೋಗಿಲ್ಲ.

ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಸೂಚನೆಯನ್ನು ರೈತರು ನೀಡಿದ್ದಾರೆ. ರೈಲು ತಡೆ, ಟೋಲ್ ಬೂತ್‍ಗೆ ದಿಗ್ಬಂಧನ ಇತ್ಯಾದಿ ಶಕ್ತಿಶಾಲಿ ಹೋರಾಟಗಳನ್ನು ಮುಂದಿನ ದಿನಗಳಲ್ಲಿ ರೈತರು ಮಾಡಲಿದ್ದಾರೆ.