ನಮೋ ಹೇಳಿದ್ದೇ ಸರಿ: ಪೆಟ್ರೋಲ್ ಬೆಲೆ ಸರಕಾರದ ವೈಫಲ್ಯವನ್ನು ತೋರಿಸುತ್ತದೆ: ಶಶಿ ತರೂರ್

0
599

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.12: ಪೆಟ್ರೋಲ್ ಬೆಲೆ ಹೆಚ್ಚಳಕ್ಕೆ ಕೇಂದ್ರ ಸರಕಾರವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಟೀಕಿಸಿದ್ದು 2012ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪೆಟ್ರೋಲ್ ಬೆಲೆ ಹಚ್ಚಳದ ಕುರಿತು ಮಾಡಿದ್ದ ಟ್ವೀಟನ್ನು ಪೋಸ್ಟ್ ಮಾಡಿದ್ದಾರೆ. ನಮೋ ಸರಿಯಾಗಿದ್ದರು. ಸರಕಾರದ ವೈಫಲ್ಯಕ್ಕೆ ಮುಖ್ಯ ಉದಾಹರಣೆ ಪೆಟ್ರೋಲಿಗೆ ಬೆಲೆ ಹೆಚ್ಚಿರುವುದು. ಯುಪಿಎ ಸರಕಾರ ಕಾಲದಲ್ಲಿ ಬ್ಯಾರಲ್ಲಿಗೆ 140 ಡಾಲರ್ ಬೆಲೆಯಿತ್ತು. ಆದರೆ ಬಿಜೆಪಿ ಸರಕಾರದಲ್ಲಿ ಪೆಟ್ರೋಲ್ ಬೆಲೆ ಅದರ ಮೂರರಲ್ಲಿ ಒಂದರಷ್ಟು ಮಾತ್ರ ಇದೆ. ಆರ್ಥಿಕ ದುರುಪಯೋಗ, ಅನಿಯಂತ್ರಿತ ತೆರಿಗೆ ಹೆಚ್ಚಳ ಇದಕ್ಕೆಲ್ಲ ಕಾರಣ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಬೃಹತ್ ತೆರಿಗೆಯ ಮೂಲಕ ಸಬ್ಸಿಡಿಯನ್ನು ಇಲ್ಲದಂತೆ ಮಾಡಿ ಕೇಂದ್ರ ಸರಕಾರ ಪೆಟ್ರೋಲ್ ಬೆಲೆ ಹೆಚ್ಚಿಸಿತು. ತೈಲ ಕಂಪೆನಿಗಳು ಕೋಟ್ಯಂತರ ರೂಪಾಯಿ ಲಾಭ ಕೊಳ್ಳೆ ಹೊಡೆದಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಮೀಪ ಕಾಲದಲ್ಲಿ ಕಡಿಮೆ ಇದೆ. ಆದರೂ ಜನರ ಸೊಂಟ ಮುರಿದು ಇಂಧನ ಬೆಲೆ ಧಾವಂತದಲ್ಲಿದೆ.

ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟ, ರಾಜ್ಯಗಳಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮರೆಯಲ್ಲಿ ತೈಲ ಬೆಲೆಯಲ್ಲಿ ಲಾಭವನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಪೆಟ್ರೋಲಿಗೆ ಈಗ ಭೋಪಾಲದಲ್ಲಿ 91.59 ರೂ. ದಿಲ್ಲಿಯಲ್ಲಿ 83.71 ರೂಪಾಯಿ, ಮುಂಬೈಯಲ್ಲಿ 90.34 ರೂ. ಚೆನ್ನೈಯಲ್ಲಿ 86.51ರೂ. ಮತ್ತು ಕೊಲ್ಕತಾದಲ್ಲಿ 85.19 ರೂಪಾಯಿ ಇದೆ.