ಸೌದಿ ವಿರುದ್ಧ ಪ್ರತಿಪಕ್ಷ ಸಂಘಟನೆಯ ರಚನೆ

0
2402

ಪ್ಯಾರಿಸ್: ಸೌದಿ ಅರೇಬಿಯದ ಸರಕಾರದ ವಿರುದ್ಧ ಪ್ಯಾರಿಸಿನಲ್ಲಿ ಪ್ರತಿಪಕ್ಷ ಸಂಘಟನೆ ರೂಪಿಸಲಾಗಿದೆ ಎಂದು ಅರಬ್ 21 ನ್ಯೂಸ್ ಚ್ಯಾನೆಲ್ ವರದಿ ಮಾಡಿದೆ. ಸೌದಿ ಅರೇಬಿಯದ ವಿದ್ವಾಂಸ ಮತ್ತು ಬರಹಗಾರ ಮರ್ಸೂಕ್ ಮಶಾನ್ ಅಲ್ ಒತೈಬಿ ರಾಷ್ಟ್ರೀಯ ಏಕೀಕರಣ ಕೂಟವನ್ನು ಪ್ಯಾರಿಸಿನಲ್ಲಿ ಆರಂಭಿಸಿದ್ದಾರೆ ಎನ್ನಲಾ ಗಿದೆ. ಅವರ ಹೊಸ ಕಚೇರಿಯಿರುವ ಪ್ಯಾರಿಸಿನಲ್ಲಿ ಹೊಸ ಸಂಘಟನೆಯನ್ನು ಘೋಷಿಸಲಾಗಿದೆ ಎಂದು ಚ್ಯಾನೆಲ್ ತಿಳಿಸಿದೆ.

ಈಗ ಸೌದಿಯಲ್ಲಿ ಸೌದಿ ಸರಕಾರ ವನ್ನು ವಿರೋಧಿಸುವ ಪ್ರತಿಪಕ್ಷ ಎನ್ನುವ ಯಾವ ಸಂಘಟನೆಯು ಇಲ್ಲ. ಆದ್ದರಿಂದ ಹೊಸ ಸಂಘಟನೆಯನ್ನು ಈಗಿನ ಸರಕಾರ ಮತ್ತು ಸರಕಾರದ ನೀತಿಯನ್ನು ವಿರೋಧಿಸುವವರೆಲ್ಲರೂ ಬೆಂಬಲಿಸುವರು ಎನ್ನುವ ಭರವಸೆ ಯನ್ನು ಸಂಸ್ಥಾಪಕರು ವ್ಯಕ್ತಪಡಿಸಿದ್ದಾರೆ.

ಸೌದಿಯ ಸ್ಥಳೀಯ ಪತ್ರಿಕೆಯಾದ ಮಕ್ಕ, ಅಲ್ ಶರಕ್‍ನಲ್ಲಿ ಬರಹಗಾರ ನಾಗಿ ಮತ್ತು ಸೌದಿ ವಿಶ್ವವಿದ್ಯಾನಿಲಯದ ಕೆಮಿಸ್ಟ್ರಿ ವಿಭಾಗದ ಪ್ರೊಫೆಸರ್ ಆಗಿ ಮರ್ಸೂಖ್ ಈ ಹಿಂದೆ ಕೆಲಸ ಮಾಡಿದ್ದಾರೆ. ಸೌದಿ ಸರಕಾರ ನಿಮ್ಮನ್ನು ಅಪಮಾನಿಸು ತ್ತಿದೆ. ವಂಚಿಸುತ್ತಿದೆ. ಅವರು ನಿಮ್ಮನ್ನು ಗುಲಾಮರನ್ನಾಗಿಸಿ ಬೆದರಿಕೆ ಹುಟ್ಟು ಹಾಕಿದ್ದಾರೆ ಎಂದು ಮರ್ಸೂಖ್ ಸೌದಿ ಪ್ರಜೆಗಳನ್ನು ಉದ್ದೇ ಶಿಸಿ ನೀಡಿದ ಹೇಳಿಕೆಯಲ್ಲಿ ತಿಳಿ ಸಿದ್ದಾರೆ.