ತಿರುನಲ್ವೇಲಿ: ವಿಶ್ವ ಹಿಂದೂ ಪರಿಷತ್ನ ರಾಮರಾಜ್ಯ ರಥಯಾತ್ರೆಯ ವಿರುದ್ದ ತಮಿಳುನಾಡಿನಲ್ಲಿ ಬ್ರಹತ್ ಪ್ರತಿಭಟನೆ ನಡೆದು ಸಂಘರ್ಷಾವಸ್ಥೆ ತಲೆದೋರಿದೆ. ಮಂಗಳವಾರ ರಥಯಾತ್ರೆಯು ತಿರುನಲ್ವೇಲಿ ಪ್ರವೇಶಿಸಿದ ಕೂಡಲೇ ವಿವಿಧ ಪಕ್ಷಗಳು ಪ್ರತಿಭಟಿಸುತ್ತಾ ಆಗಮಿಸಿತು. ಈ ರಥಯಾತ್ರೆ ತಮಿಳುನಾಡು ಪ್ರವೇಶಿಸುವುದರಿಂದ ಶಾಂತಿ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆಯೆಂದು ಹೇಳಿ ಡಿಎಮ್ಕೆ ಅದ್ಯಕ್ಷ ಸ್ಟಾಲಿನ್ ನೇತೃತ್ವದಲ್ಲಿ ಡಿಎಮ್ಕೆ ಶಾಸಕರು ವಿಧಾನ ಸಭೆಯಿಂದ ಸಭಾತ್ಯಾಗ ಮಾಡಿದರು. ನಾಲ್ಕು ಪಕ್ಷೇತರ ಶಾಸಕರು ಕೂಡಾ ಇವರ ಜೊತೆಗಿದ್ದರು. ಬಳಿಕ ರಸ್ತೆಯಲ್ಲಿ ಕುಳಿತು ರಸ್ತೆ ತಡೆ ನಿರ್ಮಿಸಿದರು. ಬಳಿಕ ಪೋಲೀಸರು ಬಂಧಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ರಾಜ್ಯದ ಧಾರ್ಮಿಕ ಸೌಹಾರ್ಧವನ್ನು ದ್ವಂಸಗೊಳಿಸುವ ನಿಗೂಢ ಉದ್ದೇಶದ ರಥಯಾತ್ರೆಯಿದು ಎಂದು ಸ್ಟಾಲಿನ್ ನಿನ್ನೆ ಆರೋಪಿಸಿದ್ದರು. ಅಯೋಧ್ಯೆಯ ಪ್ರಕರಣ ಸುಪ್ರೀಮ್ ಕೋರ್ಟಿನಲ್ಲಿ ತನಿಖೆಯಲ್ಲಿರುವಾಗ ರಾಜ್ಯದಲ್ಲಿ ನಡೆಸುತ್ತಿರುವ ರಥಯಾತ್ರೆ ನ್ಯಾಯಾಲಯದ ಉಲ್ಲಂಘನೆಯಾಗಿದೆ. ಇದು ವಿ.ಹೆಚ್.ಪಿಯ ಒತ್ತಡದ ತಂತ್ರವಾಗಿದೆ. ಪಳನಿಸ್ವಾಮಿ ಸರಕಾರ ತನ್ನನ್ನು ರಕ್ಷಿಸಿಕೊಳ್ಳಲು ರಥಯಾತ್ರೆಗೆ ಅನುಮತಿ ನೀಡಿದೆ ಎಂದೂ ಅವರು ಹೇಳಿದರು.
ಈ ಮಧ್ಯೆ ತಿರುನಲ್ವೇಲಿಯಲ್ಲಿ ರಥಯಾತ್ರೆಯ ವಿರುದ್ದ ಪ್ರತಿಭಟನೆ ವ್ಯಾಪಕವಾಗುತ್ತಿದ್ದಂತೆ ಸೆಕ್ಷನ್ 144ರ ಪ್ರಕಾರ ನಿಷೇಧಾಜ್ಞೆ ವಿಧಿಸಲಾಗಿದೆ.












