ಮೋದೀಜಿ ಭಾಷಣ: ನೀತಿಸಂಹಿತೆ ಉಲ್ಲಂಘನೆಯೇ?-ಚುನಾವಣಾ ಆಯೋಗದಿಂದ ಇಂದು ನಿರ್ಧಾರ

0
1463

ಹೊಸದಿಲ್ಲಿ,ಮಾ.29: ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಉಪಗ್ರಹ ಭೇದಕ ಮಿಸೈಲ್ ಪರೀಕ್ಷೆಯ ಕುರಿತ ಭಾಷಣ ನೀತಿ ಸಂಹಿತೆ ಉಲ್ಲಂಘನೆಯೇ ಎಂದು ಚುನಾವಣಾ ಆಯೋಗ ಇಂದು ತೀರ್ಮಾನಿಸಲಿದೆ.

ಉಪಗ್ರಹ ಭೇದಕ ಮಿಸೈಲ್ ಪರೀಕ್ಷೆಯ ವಿವರವನ್ನು ಪ್ರಧಾನಿ ಘೋಷಿಸಿದ್ದು ನೀತಿ ಸಂಹಿತೆ ಉಲ್ಲಂಘನೆಯಾಗುವುದೇ ಎನ್ನುವ ವಿಷಯವನ್ನು ಪರಿಶೀಲಿಸಲು ಚುನಾವಣಾ ಆಯೋಗ ಸಮಿತಿಯೊಂದನ್ನು ರಚಿಸಿದೆ. ಚುನಾವಣಾ ಅಧಿಕಾರಿಗಳಿರುವ ಸಮಿತಿ ಈ ವಿಷಯವನ್ನು ಪರಿಶೀಲಿಸುತ್ತಿದೆ.

ಅಂತರಿಕ್ಷ, ರಕ್ಷಣಾ ವಿಜ್ಞಾನಿಗಳು ಜನರಿಗೆ ತಿಳಿಸಬೇಕಾಧ ವಿಷಯವನ್ನು ದೇಶ ಸುರಕ್ಷೆಯ ಚೌಕಿದಾರ್ ಎಂದು ಬಿಂಬಿಸಲಿಕ್ಕಾಗಿ ಪ್ರಧಾನಿ ಬಳಸಿಕೊಂಡಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿ ವಿವಿಧ ಪ್ರತಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡಿವೆ. ಇಂದು ಈ ವಿಷಯದಲ್ಲಿ ಚುನಾವಣಾ ಆಯೋಗದ ನಿರ್ಧಾರ ಪ್ರಕಟವಾಗಲಿದ್ದು ಯಾವ ನಿರ್ದಾರ ಹೊರಬೀಳಲಿದೆ ಎನ್ನುವ ಕುತೂಹಲ ಎಲ್ಲೆಡೆ ಸೃಷ್ಟಿಯಾಗಿದೆ.