ವಿಶಾಖಪಟ್ಟಣದಲ್ಲಿ 12 ನಕ್ಸಲರ ಶರಣಾಗತಿ

0
514

ಸನ್ಮಾರ್ಗ ವಾರ್ತೆ

ವಿಶಾಖಪಟ್ಟಣ,ಡಿ.6: ವಿಶಾಖಪಟ್ಟಣದಲ್ಲಿ 12 ನಕ್ಸಲರು ಪೊಲೀಸರಿಗೆ ಶರಣಾಗತರಾಗಿದ್ದು ಪೀಪಲ್ಸ್ ಲಿಬರೇಷನ್ ಆರ್ಮಿಯ ಸಕ್ರಿಯ ಕಾರ್ಯಕರ್ತರು ಇವರು. ಚಿಂಟಪಲ್ಲಿ ಅಸಿಸ್ಟೆಂಟ್ ಪೊಲೀಸ್ ಸುಪರೀಡೆಂಟ್ ಮುಂದೆ ಗಾಲಿಕೊಂಡ, ಪನಸಲಬಂದ, ಅಕುಲೂರು ಮತ್ತು ರಾಮಗಡ್ಡ ಗ್ರಾಮದ ನಿವಾಸಿಗಳಾದ ನಕ್ಸಲರು ಶರಣಾದರು. ಪೊಲೀಸರಿಗೆ ಮಾಹಿತಿ ನೀಡುವವರು ಎಂಬ ತಪ್ಪಾದ ವಿವರಗಳಿಂದ ಗ್ರಾಮೀಣರನ್ನು ಕೊಲೆ ಮಾಡಿದ್ದಕ್ಕೆ ಮನನೊಂದು ಎಎಸ್ಪಿ ಮುಂದೆ ಹನ್ನರೆಡು ಮಂದಿ ಶರಣಾಗಿದ್ದಾರೆ.

ಇವರ ಗ್ರಾಮಗಳು ಮಾವೊಯಿಸ್ಟರ ಪರಂಪರಾಗತ ಶಕ್ತಿ ಕೇಂದ್ರವಾಗಿತ್ತು. ಚಿಂದಪ್ಪಳ್ಳಿ ಸಬ್‍ ಡಿವಿಷನಲ್ ಮಾವೊಯಿಸ್ಟ್‌ಗಳ ಶಕ್ತಿ ಕ್ಷಯಿಸುವ ಸೂಚನೆಯು ನಕ್ಸಲರ ಶರಣಾಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.