ಚಿಕ್ಕಮಗಳೂರು| ಸೀರತ್ ಪ್ರಬಂಧ ಸ್ಪರ್ಧೆ: ಬಹುಮಾನ ವಿತರಣೆ

0
483

ಸನ್ಮಾರ್ಗ ವಾರ್ತೆ

ತರೀಕೆರೆ:’ಹುಟ್ಟಿನ ಆಧಾರದಲ್ಲಿ ಯಾರು ಶ್ರೇಷ್ಠರಲ್ಲ ಎಂಬುದನ್ನು ತಿಳಿಸಿದ ಪ್ರವಾದಿ ಮುಹಮ್ಮದ್(ಸ)‌ ರವರು ಸಮಾಜದಲ್ಲಿ ಸಮಾನತೆಯನ್ನು ಅನುಸರಿಸಲು ಕಲಿಸಿದ್ದಾರೆ’ ಎಂದು ಜಮಾಅತೆ ಇಸ್ಲಾಮಿ ಹಿಂದ್ ಘಟಕದ ಅಕ್ಬರ್‌ ಅಲಿ ತಿಳಿಸಿದರು.

ತರಿಕೆರೆ ಪಟ್ಟಣದಲ್ಲಿ ಭಾನುವಾರ ಜಮಾಅತೆ ಇಸ್ಲಾಮಿ ಹಿಂದ್ ಘಟಕದ ವತಿಯಿಂದ ನಡೆದ ಸೀರತ್ ಅಭಿಯಾನ ಹಾಗೂ ಪ್ರವಾದಿ ಮುಹಮ್ಮದ್‌(ಸ)ರವರ ಕುರಿತು ಹಮ್ಮಿಕೊಳ್ಳಲಾಗಿದ್ದ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಶಿಕ್ಷಕಿ ಸವಿತಾ ಪ್ರಥಮ, ಸುವರ್ಣ ದ್ವಿತೀಯ ಸ್ಥಾನ ಪಡೆದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್.ರಮೇಶ್, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್. ಪ್ರಕಾಶ್ ವರ್ಮಾ ಬಹುಮಾನ ನೀಡಿದರು.

ಮುಖಂಡರಾದ ಎಸ್.ಎಚ್.ಆದಿಲ್ ಪಾಷ ಮತ್ತು ಜಾವೀದ್ ಪಾಷ ಇದ್ದರು.