ನನ್ನ ದೇಶಪ್ರೇಮ ಸಾಬೀತು ಪಡಿಸಲು ನಿಮ್ಮ ಸರ್ಟಿಫಿಕೆಟ್ ಅಗತ್ಯವಿಲ್ಲ- ಬಿಜೆಪಿಗೆ ಅಸದುದ್ದೀನ್ ಉವೈಸಿ

0
823

ಸನ್ಮಾರ್ಗ ವಾರ್ತೆ

ಹೈದರಾಬಾದ್,ಡಿ.6: ನನ್ನ ದೇಶ ಪ್ರೇಮವನ್ನು ಸಾಬೀತು ಪಡಿಸಲು ನಿಮ್ಮ ಸರ್ಟಿಫಿಕೆಟ್ ಅಗತ್ಯವಿಲ್ಲ ಎಂದು ಬಿಜೆಪಿಯೊಂದಿಗೆ ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ ಹೇಳಿದ್ದಾರೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಾಲಿಟ ಕಾರ್ಪೊರೇಷನ್ (ಜಿಎಚ್‍ಎಂಸಿ) ಚುನಾವಣೆಯ ಫಲಿತಾಂಶ ಅವಲೋಕ ಮಾಡುವ ವೇಳೆ ಅಜ್ ತಕ್ ಚ್ಯಾನೆಲ್‍ನಲ್ಲಿ ನಡೆದ ಚರ್ಚೆಯ ನಡುವೆ ಅವರು ಹೀಗೆ ಹೇಳಿದ್ದಾರೆ. ಉವೈಸಿ ಮತದಾರರು ಭಾರತದವರಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶ್ ತ್ರಿವೇದಿ ಹೇಳಿದ್ದಕ್ಕೆ ಹೀಗೆ ಅವರು ಉತ್ತರಿಸಿದ್ದಾರೆ.

ನೀವು ಒಬ್ಬ ಮುಸ್ಲಿಮನನ್ನು ನೋಡುವಾಗ ನಿಮ್ಮ ಮನೋಭಾವ ಬದಲಾಯಿಸಬೇಕು ಎಂದು ಹೇಳಲು ನಾನು ಬಯಸುತ್ತೇನೆ. ಭಾರತದ ಸಂವಿಧಾನ ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿದೆ. ಭಾರತ್ ಮಾತಾ ಕಿ ಜೈ ಎನ್ನುವವರನ್ನು ನಾನು ಗೌರವಿಸುತ್ತೇನೆ ಎಂದು ಉವೈಸಿ ಹೇಳಿದರು. ಬಿಜೆಪಿಯಿಂದ ದೇಶ ಪ್ರೇಮದ ಸರ್ಟಿಫಿಕೆಟ್ ಸಿಗಲು ನಾನು ಬಯಸುವುದಿಲ್ಲ. ಅವರ ಸರ್ಟಿಫಿಕೆಟ್ ನನ್ನ ಶೂವಿನಡಿಯಲ್ಲಿ ಇರಿಸಿದ್ದೇನೆ. ನಾನು ದೇಶಭಿಮಾನಿ. ಅದು ಹಾಗೆಯೇ ಮುಂದುವರಿಯಲಿದೆ ಎಂದು ಉವೈಸಿ ಹೇಳಿದ್ದಾರೆ.