ರಾಮಮಂದಿರ, ಶಬರಿಮಲೆ: ಭಯದ ಮರೆಯಲ್ಲಿ ಹುಟ್ಟಿಕೊಂಡ ಕಾರ್ಯಸೂಚಿ 

0
2001

ಬಿಜೆಪಿಯ ಅಲ್ಪಸಂಖ್ಯಾತ ವಿರೋಧಿ  ಚುನಾವಣಾ ಜೂಜಾಟಗಳ ಬಗ್ಗೆ ನನಗೆ ಯಾವ  ಸಂದೇಹವೂ ಇರಲಿಲ್ಲ. ಆದರೆ ಪಕ್ಷದ ಮಾರ್ಗದರ್ಶಿಯಾದ  ಆರ್ ಎಸ್ ಎಸ್  ಅದರ ಕಾರ್ಯಸೂಚಿಯನ್ನು ಈಗ ನಿಸ್ಸಂದಿಗ್ಧವಾಗಿ ಮತ್ತು ಬಲವಾಗಿ ವ್ಯಕ್ತಪಡಿಸಿದೆ.

ನರೇಂದ್ರ ಮೋದಿ ಸರಕಾರವು ತಕ್ಷಣಕ್ಕೆ  ಏನು ಮಾಡಬೇಕೆಂಬುದರ ಬಗ್ಗೆ ಅದರ ಮುಖ್ಯಸ್ಥ ಮೋಹನ್ ಭಾಗವತ್, ದಸರಾ /ವಿಜಯ್ ದಶಮಿ ಸಂದರ್ಭದಲ್ಲೇ ಸಂಘಟನೆಯ ಮೂಲ ಸಂದೇಶವನ್ನು ವಿತರಿಸಿದರು . ಇದರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಪ್ರಾರಂಭಿಸುವುದು ಕೂಡಾ ಒಂದು.

ಈ ವಿಷಯವು ಸುಪ್ರೀಂ ಕೋರ್ಟ್ ಮುಂದಿದೆ  ಎಂಬ ಅಂಶವನ್ನು ಕಡೆಗಣಿಸಿ, ಕೇಸರಿ ಪದೇ ಹೇಳುತ್ತಿದ್ದ ಸಂದರ್ಭದ 1990 ರ ದಶಕದ ರಾಮಜನ್ಮಭೂಮಿ ಚಳವಳಿಯ ದಿನಗಳೆಡೆಗೆ ಒಯ್ದಿದ್ದಾರೆ.

1996 ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು, ಸಂಘದ ಪರಿವಾರದ ಮೂರು “ಪ್ರಮುಖ” ವಿಚಾರಗಳನ್ನು -ದೇವಾಲಯದ ನಿರ್ಮಾಣ, ಸಂವಿಧಾನದ 370 ನೇ ವಿಧಿ ರದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ,ಮತ್ತು ಏಕರೂಪ ನಾಗರಿಕ ಸಂಹಿತೆಯ ಪರಿಚಯ- ಇವುಗಳನ್ನು ಬದಿಗಿರಿಸಿದರು.

ಹೀಗೆ ವಾಜಪೇಯಿ ಅವರ ಆಶಯಗಳ ನಿರಾಕರಣೆಯು  ಅವರ ಸಾವಿನ ವರ್ಷದಲ್ಲಿ ನಡೆದಿದೆ  ಮತ್ತು ಅದಕ್ಕೆ ಯಾವುದೇ ಮಹತ್ವವಿಲ್ಲ. ಆರ್ ಎಸ್ ಎಸ್, ವಿಧಿ 370 ಮತ್ತು ಏಕರೂಪದ ನಾಗರಿಕ ಸಂಹಿತೆ ಈ  ಎರಡು  ವಿಷಯದ ಕುರಿತು  ಸರಕಾರಕ್ಕೆ ಯಾವುದೇ “ಸಲಹೆ” ನೀಡುತ್ತದೆಯೇ ಎಂದು ಕಾದು ನೋಡಬೇಕು.

ಯಾಕೆ ಅತ್ಯಾತುರ :

ಆದರೆ ದೇವಾಲಯದ ನಿರ್ಮಾಣದ ಬಗ್ಗೆ ಹಠಾತ್ ಅವಸರ ಏಕೆ? ಎರಡು ಕಾರಣಗಳಿವೆ. ಒಂದು ಚುನಾವಣೆ  ಸಮೀಪವಿರುವ ಈ ಘಟ್ಟದಲ್ಲಿ ದೇಶದ ಅನಾನುಕೂಲಕರವಾದ ಆರ್ಥಿಕ ಪರಿಸ್ಥಿತಿಯಿಂದಾಗಿ 2014 ರಲ್ಲಿ ಬಿಜೆಪಿಗೆ ಮತ ಚಲಾಯಿಸಿದ್ದ ಉದಾರ ಹಿಂದೂಗಳು ಮತ್ತೊಮ್ಮೆ ಮತಚಲಾಯಿಸುವ ಮಾತು ದೂರದಲ್ಲಿದೆ.  ಮತಗಳು ವಿಭಾಗವಾಗುವ ಸಾಧ್ಯತೆಯಿರುವ ಈ ಸಂದರ್ಭದಲ್ಲಿ ಕೋಮು ಮನಸ್ಸಿನ ಹಿಂದೂಗಳ ಮತವನ್ನು ಏಕೀಕರಿಸಲಿರುವ ಏಕೈಕ ಮಾರ್ಗವಾಗಿದೆ ಇದು.

 ಮತ್ತೊಂದು ಬಿಜೆಪಿಯು 2019 ರಲ್ಲಿ ಲೋಕಸಭೆಯಲ್ಲಿ ತನ್ನದೇ ಆದ ಬಹುಮತವನ್ನು ಪಡೆಯುವಲ್ಲಿ ವಿಫಲವಾಗುವ ಸಾಧ್ಯತೆ ಹೆಚ್ಚಿರುವ ಕಾರಣ ದೇವಸ್ಥಾನ ನಿರ್ಮಾಣ ಈಗಿಲ್ಲದಿದ್ದರೆ ಮತ್ತೆಂದೂ ಸಾಧ್ಯವಿಲ್ಲವೆಂದು  ಕೇಸರಿ ವಲಯಕ್ಕೆ ಮನವರಿಕೆಯಾಗಿದೆ. ಬಿಜೆಪಿಯ ನೆಚ್ಚಿನ ತ್ರಿವಳಿ  ತಲಾಕ್ ಆದೇಶವನ್ನು ವಿರೋಧಿಸಿದ ಜನತಾ ದಳ (ಸಂಯುಕ್ತ ) ದಂತಹ ಕೆಲವು ಮಿತ್ರ ಪಕ್ಷಗಳನ್ನು ಮನವೊಲಿಸುವುದು ಬಿಜೆಪಿಗೆ  ಸುಲಭವಲ್ಲ -ಮತ್ತು ಅಕಾಲಿ ದಳವು ನಿರ್ಮಾಣ ಕಾರ್ಯಸೂಚಿಗೆ ಒಪ್ಪಿಗೆ ನೀಡಿ, ಅಲ್ಪಸಂಖ್ಯಾತರನ್ನು ದೂರಮಾಡಲು ಸಾಧ್ಯವಿಲ್ಲ.

ಅರ್ಧ ಶತಮಾನದ ಆಳ್ವಿಕೆ ನಡೆಸುತ್ತಿದ್ದಾರೆಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಆರೋಪಿಸಿದರೂ, 2014 ರ ಫಲಿತಾಂಶವು ಹಲವಾರು ಅನಿರೀಕ್ಷಿತ ಘಟನೆಗಳ ಫಲಿತಾಂಶ ಎಂದು ಆರ್ ಎಸ್ ಎಸ್ ಅರಿವಿದೆ  -ಕಾಂಗ್ರೆಸ್ ನ  ಹಠಾತ್  ವಿವರಿಸಲಾಗದ ಕುಸಿತ ಮತ್ತು ಮೋದಿ ಅವರ ಹುಟ್ಟು (ಅವರ ಪಕ್ಷದ ಹಲವಾರು ಇಚ್ಛೆಗೆ ವಿರುದ್ಧವಾಗಿ) ಒಂದು ವಿಧದಲ್ಲಿ ಮಸೀಹ(ಉದ್ಧಾರಕ )ನಂತೆ ಆಗಿತ್ತು.  ಆದರೆ,  2014 ರಂತೆಯೇ 2019  ಇರುವುದಿಲ್ಲ.

“ಆಚ್ಚೆ  ದಿನ್” (ಒಳ್ಳೆಯ ದಿನಗಳು) ಅಥವಾ “ಸಬ್ಕಾ ಸಾತ್, ಸಬ್ಕಾ ವಿಕಾಸ್” (ಎಲ್ಲರೊಂದಿಗೆ ಎಲ್ಲರ  ಅಭಿವೃದ್ಧಿ)  ಮಂತ್ರಗಳೂ ಅನುಕೂಲಕರ ಪ್ರತಿಕ್ರಿಯೆಯನ್ನು ಹುಟ್ಟುಹಾಕುತ್ತಿಲ್ಲ ಎಂದು ಪಕ್ಷ ಮತ್ತು ಪರಿವಾರ ಅರಿತುಕೊಂಡ ನಂತರ, ಕೇಸರಿ ಪ್ರಚಾರದ ಗಮನ ಹಿಂದೂ-ಮುಸ್ಲಿಂ ಧ್ರುವೀಕರಣದ ಮೇಲೆ ಬಂದಿದೆ.

 ಅಸ್ಸಾಂನಿಂದ ಇತರ ರಾಜ್ಯಗಳಿಗೆ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ ಸಿ ) ವ್ಯಾಪ್ತಿಯನ್ನು ವಿಸ್ತರಿಸುತ್ತಾ  ಅಥವಾ ಮುಘಲ್ಸಾರಾಯ್ ಮತ್ತು ಅಲಹಾಬಾದ್ ಮುಂತಾದ ಉತ್ತರ ಪ್ರದೇಶದ ದೀರ್ಘಕಾಲದ ಸ್ಥಾಪಿತ ಮುಸ್ಲಿಂ ಹೆಸರುಗಳನ್ನು ತೆಗೆದುಹಾಕುವ ಮೂಲಕ, ಮುಸ್ಲಿಮರು ತಮ್ಮ ಪೌರತ್ವದ ಪ್ರಾಮಾಣಿಕತೆಯನ್ನು ಸಾಬೀತುಪಡಿಸುವ ಅಗತ್ಯವಿದೆ  ಮತ್ತು ಹಿಂದೂ ರಾಷ್ಟ್ರವು ತನ್ನ ಬೇರೂರುತ್ತಿದ್ದು,   ಭಾರತದ ಬಹು-ಸಾಂಸ್ಕೃತಿಕ ಅಂತಸ್ತನ್ನು ಅಳಿಸಿಹಾಕಲಾಗುವುದು ಎಂಬ ಸಂದೇಶವನ್ನು ಕಳುಹಿಸಲು ಬಿಜೆಪಿಯು  ಗುರಿ ಹೊಂದಿದೆ.

ಸಂಘ ಪರಿವಾರ ಮತ್ತು ಶಬರಿಮಲೆ:

ಮುಸ್ಲಿಮರ ವಿರುದ್ಧ ನೇರ ಮತ್ತು ಪರೋಕ್ಷ ಆಕ್ರಮಣದ  ಜೊತೆಗೆ, ಕೇರಳದ ಶಬರಿಮಲೆ ದೇವಾಲಯದೊಳಗೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದೆಂಬ ಸುಪ್ರೀಂ ಕೋರ್ಟ್ ನ  ತೀರ್ಪನ್ನು ಶತಮಾನಗಳ-ಹಳೆಯ ನಂಬಿಕೆಗಳನ್ನು ಉಲ್ಲಂಘಿಸುವ ಆಧಾರದ ಮೇಲೆ ಪ್ರವಿರೋಧಿಸುವ ಮೂಲಕ ಅದರ  ಹಿಂದೂ ರುಜುವಾತುಗಳನ್ನು ದೃಢೀಕರಿಸುವ ಬಗ್ಗೆ ಸಹ ಸಂಘ ಪರಿವಾರ ಉದ್ದೇಶವನ್ನು ಹೊಂದಿದೆ .

ಶಬರಿಮಲೆ ಅಧ್ಯಾಯವು  ಆರ್ ಎಸ್ ಎಸ್  ಮತ್ತು ಬಿಜೆಪಿಗೆ  ಎರಡು ಹಕ್ಕಿಗಳನ್ನು ಒಂದೇ ಕಲ್ಲಿನಿಂದ ಕೊಲ್ಲಲು ಸಾಧ್ಯವಾಗಿಸಿದೆ. ಒಂದು ತಮ್ಮನ್ನು ಹಿಂದೂ ಧರ್ಮದ ಧೂತರನ್ನಾಗಿ ಚಿತ್ರಿಸುವುದು, ಮತ್ತೊಂದು  ಸುಪ್ರೀಂ ಕೋರ್ಟ್ನನ ಉಲ್ಲಂಘನೆಯನ್ನು  ತೋರಿಸುವುದು.

 ಗೌಪ್ಯತೆಯ ಹಕ್ಕುಗಳನ್ನು ಎತ್ತಿಹಿಡಿಯುವಂತಹ “ಪ್ರಗತಿಪರ” ತೀರ್ಪುಗಳ (ಶಬರಿಮಲ ಒಂದಾಗಿದೆ) ಸರಣಿಯನ್ನು ಪ್ರಾರಂಭಿಸಿದಂದಿನಿಂದ  ನ್ಯಾಯಾಲಯವು ಕೇಸರಿ ಲಾಬಿಯ  ಕೋಪವನ್ನು ಕೆರಳಿಸಿದೆ. ಸಲಿಂಗಕಾಮವನ್ನು ನಿರಪರಾಧವನ್ನಾಗಿಸಿದ ಪ್ರಕರಣದಲ್ಲಿ  ಬಿಜೆಪಿಗೆ ಹಿನ್ನಡೆಯಾಗಿರುವುದನ್ನು ತಪ್ಪಿಸಬೇಕಾದ ಅಗತ್ಯ ಇತ್ತು.

ಶಬರಿಮಲೆಯು  ಆರ್ ಎಸ್ ಎಸ್  ಮತ್ತು ಬಿಜೆಪಿಯು  ಸುಪ್ರೀಂ ಕೋರ್ಟ್ ತೀರ್ಪಿಗೆ  ವಿರೋಧ ವ್ಯಕ್ತಪಡಿಸಲು  ಮತ್ತು ಇದು ಎಲ್ಲ ಸಮಯದಲ್ಲೂ ಸರಿಯಾಗಿಲ್ಲ ಎಂದು ಸೂಚಿಸಲು ಅವಕಾಶ ನೀಡಿದೆ. ಈ ವಿರೋಧವು ಕೇಂದ್ರ ಸಚಿವರು ತಲೆದಂಡ ತೆತ್ತ  # ಮೀಟೂ  ಚಳುವಳಿಯಿಂದ ಪ್ರಚೋದಿಸಲ್ಪಟ್ಟಿರಬಹುದು  ಮತ್ತು ಚಳವಳಿಯನ್ನು ಬೆಂಬಲಿಸುವವರು “ವಿಕೃತರು ” ಎಂದು ಹೇಳಲು ಮತ್ತೊಂದು ಸಚಿವನನ್ನು ಮನವೊಲಿಸಿತು.

 ವಿಕೃತರೆಂದು ಕರೆಯಲ್ಪಡುವವರೊಡನೆ ”ನಗರ ನಕ್ಸಲರೆಂದು ” ಕರೆಯಲ್ಪಡುವವರಿದ್ದಾರೆ…  ಇದು, ಯಾವಾಗಲೂ ರಾಷ್ಟ್ರ -ವಿರೋಧಿ ಎಂದು ಕರೆಯಲ್ಪಡುವ ಎಡ-ಪಂಥೀಯರನ್ನು ನಿಂದಿಸಲು  ಆರ್ ಎಸ್ ಎಸ್ ಮತ್ತು ಬಿಜೆಪಿಯ ಬಳಸಿದ ಹೊಸ ರೂಪ. “ನಗರ ನಕ್ಸಲರನ್ನು ಸರಕಾರ  ಕಣ್ಗಾವಲು ಅಡಿಯಲ್ಲಿ ಇರಿಸಿಕೊಳ್ಳಬೇಕೆಂದು  ಆರ್ ಎಸ್ ಎಸ್ ಮುಖ್ಯಸ್ಥರು ಸಲಹೆ ನೀಡಿರುವುದು ಆಶ್ಚರ್ಯಕರವಲ್ಲ.

ಆಂಗ್ಲ ಬರಹ: ಅಮುಲ್ಯಾ ಗಂಗುಲಿ
ಕನ್ನಡಕ್ಕೆ: ಆಯಿಶತುಲ್  ಅಫೀಫ
ಮೂಲ: ನ್ಯೂಸ್ ಕ್ಲಿಕ್ ಡಾಟ್ ಇನ್