ಪೂರ್ವನಿರ್ಧರಿತ ”ಹಲಾಲ” ಅವಮಾನಕರ ಮತ್ತು ಅನಿಸ್ಲಾಮಿಕ: ದಾರುಲ್ ಉಲೂಮ್

0
1092

ಮುಝಫ್ಫರ್ ನಗರ: “ಪೂರ್ವ ನಿರ್ಧರಿತ ಹಲಾಲ ಇಸ್ಲಾಮಿಕವಾಗಿಲ್ಲ ಮತ್ತು ಹೀಗೆ ಮಾಡುವ ಜನರು ‘ನಾಚಿಕೆಪಡಬೇಕಾಗಿದೆ” ಎಂದು ಪ್ರಭಾವಿ ದಾರುಲ್ ಉಲೂಮ್ ದಿಯೋಬಂದ್ ಫತ್ವಾವನ್ನು ಜಾರಿಮಾಡಿದೆ. ಹಲಾಲ ಅಡಿಯಲ್ಲಿ ವಿಚ್ಛೇದಿತ ಮಹಿಳೆ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಬೇಕು ಮತ್ತು ನಂತರ ಅವಳ ಮೊದಲ ಪತಿಯನ್ನು ವಿವಾಹವಾಗುವ ಸಲುವಾಗಿ ಆತನಿಂದ ವಿಚ್ಛೇದನವನ್ನು ಪಡೆಯಬೇಕು.

ದಿಯೋಬಂದ್ ನಿವಾಸಿಯಾದ ಮೊಹಮ್ಮದ್ ಉಸ್ಮಾನ್ ಹಲಾಲ ಬಗ್ಗೆ ಪ್ರಶ್ನೆಯನ್ನು ಕೇಳಿದರು.
”ವಿಚ್ಛೇದನ ಪ್ರಕರಣಗಳಲ್ಲಿ ಒಬ್ಬ ಮಹಿಳೆ ತನ್ನ ಮೊದಲ ಪತಿಯನ್ನು ಪುನಃ ವಿವಾಹವಾಗಲು ಇನ್ನೊಬ್ಬ ವ್ಯಕ್ತಿಯೊಂದಿಗೆ ಹಲಾಲ ಮಾಡಬೇಕೆಂದು ಕೆಲವು ಜನರು ಮೊದಲೇ ನಿರ್ಧರಿಸುತ್ತಾರೆ. ಇಸ್ಲಾಂ ಧರ್ಮ ಈ ಕಾರ್ಯವನ್ನು ಇಷ್ಟಪಡುವುದಿಲ್ಲ, ಇದು ಇಸ್ಲಾಮೀ ಕಾನೂನಿನ ಅಡಿಯಲ್ಲಿ ಅವಮಾನಕರ ಮತ್ತು ನಿಷೇಧಿತವಾಗಿದೆ.”

”ಯಾವುದೇ ಮಹಿಳೆ ವಿಚ್ಛೇದನಗೊಂಡಿದ್ದರೆ, ತನ್ನ ಮಾಜಿ ಗಂಡನನ್ನು ಹೊರತುಪಡಿಸಿ ಯಾವುದೇ ವ್ಯಕ್ತಿಯನ್ನು ವಿವಾಹವಾಗುವ ಹಕ್ಕನ್ನು ಅವಳು ಹೊಂದಿದ್ದಾಳೆ. ಎರಡನೇ ಪತಿ ವಿಚ್ಛೇದನ ನೀಡಿದರೆ, ಅವಳು ತನ್ನ ಮೊದಲ ಪತಿಯನ್ನು ‘ಇದ್ದತ್’ ನಂತರ ವಿವಾಹವಾಗಬಹುದು. ಆಕೆಯ ಮೊದಲ ಪತಿಯನ್ನು ವಿವಾಹವಾಗಲು ಹಲಾಲ ಮಾಡುವಂತೆ ಆಕೆಯನ್ನು ಒತ್ತಾಯಿಸುವುದು ನಿಷಿದ್ಧವಾಗಿದೆ”

ಇತರ ವಿದ್ವಾಂಸರು ಮತ್ತು ಏನ್ ಜಿ ಓ ಗಳು ಈ ಫತ್ವಾವನ್ನು ಸ್ವಾಗತಿಸಿವೆ.

ವರದಿ: ಮೊಹಮ್ಮದ್ ದಿಲ್ ಶಾದ್