ಸನ್ಮಾರ್ಗ ವಾರ್ತೆ
ಬೀಜಿಂಗ್, ಫೆ. 17: ಚೀನದಲ್ಲಿ ಕೊರೊನಾ ವೈರಸ್ ಬಾಧಿಸಿ ಮೃತಪಟ್ಟವರ ಸಂಖ್ಯೆ 1765 ಆಗಿದೆ. ಹುಬೆ ಪ್ರಾಂತದಲ್ಲಿ ರವಿವಾರ 105 ಮಂದಿ ಮೃತಪಟ್ಟಿದ್ದು ಚೀನದಲ್ಲಿ 70,500 ಮಂದಿಗೆ ವೈರಸ್ ತಗಲಿದೆ. ರವಿವಾರ 2009 ಮತ್ತು ಶನಿವಾರ 2541 ಪ್ರಕರಣಗಳು ವರದಿಯಾಗಿವೆ. ಕೊರೊನಾ ದೃಢೀಕರಣ ನಿರಂತರ ಮೂರನೆ ದಿವಸವೂ ಕಡಿಮೆಯಾಗಿದೆ ಎಂದು ಚೀನದ ಆರೋಗ್ಯ ಸಚಿವಾಲಯ ತಿಳಿಸಿದೆ. ಹುಬೆ ಪ್ರಾಂತದ ಸಂಚಾರ ನಿಯಂತ್ರಣವನ್ನು ಸರಕಾರ ಹೆಚ್ಚು ಶಕ್ತಗೊಳಿಸಲಿದೆ. ಬಳಸಿದ ನಾಣ್ಯ, ನೋಟುಗಳನ್ನು ಪುನಃ ಮಾರುಕಟ್ಟೆಗೆ ತಲುಪಿಸುವ ಮೊದಲು ಅವುಗಳು ವೈರಸ್ ಮುಕ್ತಗೊಳಿಸಲಾಗುತ್ತಿದೆ ಎಂದು ಚೀನದ ಸೆಂಟ್ರಲ್ ಬ್ಯಾಂಕ್ ತಿಳಿಸಿದೆ.












