ಉತ್ತರ ಪ್ರದೇಶ: ಕರಾಟೆ ಕ್ಲಾಸಿಗೆ ಹೋದ ಯುವತಿಯ ಮೇಲೆ ಅತ್ಯಾಚಾರ: ಸಹಪಾಠಿ ಬಂಧನ

0
1003

ಸನ್ಮಾರ್ಗ ವಾರ್ತೆ

ಮೀರತ್,ಅ.19: ಉತ್ತರ ಪ್ರದೇಶದ ಮೀರತ್‍ನಲ್ಲಿ ಕರಾಟೆ ಕ್ಲಾಸಿಗೆ ಹೋದ 18 ವರ್ಷದ ಯುವತಿ ಅತ್ಯಾಚಾರಕ್ಕೆ ಗುರಿಯಾಗಿದ್ದಾಳೆ ಘಟನೆಯಲ್ಲಿ ಆಕೆಯ ಸಹಪಾಠಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಸಂಜೆ ಘಟನೆ ನಡೆದಿದೆ ಎಂದು ಎಸ್ಪಿ ಅಜಯ್ ಸಹಾನಿ ಹೇಳಿದರು. ಆರೋಪಿ ಮತ್ತು ಯುವತಿ ಪರಿಚಯಸ್ಥರು. ಶುಕ್ರವಾರ ಇಬ್ಬರು ಒಟ್ಟಿಗೆ ತರಗತಿಗೆ ಹೋಗಿದ್ದರು. ರಾತ್ರೆ ಏಳು ಗಂಟೆಗೆ ಬಾಲಕಿ ಮನೆಗೆ ಮರಳಿ ಬಂದಿದ್ದಾಳೆ. ಒಂಬತ್ತು ಗಂಟೆಗೆ ಯುವತಿಗೆ ಅನಾರೋಗ್ಯ ಕಾಡಿತ್ತು. ಕೂಡಲೇ ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಆಸ್ಪತ್ರೆಯಲ್ಲಿ ಯುವತಿ ಅತ್ಯಾಚಾರಕ್ಕೊಳಗಾದುದನ್ನು ಮರು ದಿವಸ ಆಸ್ಪತ್ರೆಯಲ್ಲಿ ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ನಾವು ಆಸ್ಪತ್ರೆಗೆ ತಲುಪಿದೆವು ಎಂದು ಪೊಲೀಸರು ತಿಳಿಸಿದ್ದಾರೆ. ನಾವು ಬಾಲಕಿಯೊಂದಿಗೆ ಮಾತಾಡಿದ್ದೇವೆ. ಕರಾಟೆ ಕ್ಲಾಸಿನ ಸಹಪಾಠಿ ಅತ್ಯಾಚಾರ ಮಾಡಿದ್ದೆಂದು ಆಕೆ ಹೇಳಿದ್ದಾಳೆ. ಅವರಿಬ್ಬರೂ ಪರಸ್ಪರ ಪರಿಚಿತರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.