ದಿಲ್ಲಿ: ಇಬ್ಬರು ಶಂಕಿತ ಜೈಷೆ ಭಯೋತ್ಪಾದಕರ ಬಂಧನ

0
142

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.17: ಜೈಷೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸೇರಿದ್ದಾರೆ ಎನ್ನಲಾದ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಜಮ್ಮು-ಕಾಶ್ಮೀರದ ಬಾರಮುಲ್ಲ ನಿವಾಸಿಗಳಾದ ಅಬ್ದುಲ್ ಲತೀಫ್, ಅಶ್ರಫ್ ಬಂಧಿತರು. ದಿಲ್ಲಿಯಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಯೋಜನೆ ರೂಪಿಸಿದ್ದರೆಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.

ಸೋಮವಾರ ರಾತ್ರೆ 10:15ಕ್ಕೆ ಮಿಲೆನಿಯಂ ಪಾರ್ಕ್ ಸಮೀಪದ ಸಾರಯ್ ಕಾಲೆ ಖಾನ್‍ನಿಂದ ಇಬ್ಬರನ್ನು ಬಂಧಿಸಲಾಯಿತೆಂದು ಪೊಲೀಸರು ತಿಳಿಸಿದರು. ಇವರಿಂದ ಸೆಮಿ ಆಟೊಮ್ಯಾಟಿಕ್ ಪಿಸ್ತೂಲ್ ಮತ್ತು ಹತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಬ್ಬರು ಈ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಲು ಯತ್ನಿಸಿದ್ದರು.ಆದರೆ, ಭಾರತ ಸೇನೆ ಅದನ್ನು ವಿಫಲಗೊಳಿಸಿತ್ತು. ದಿಲ್ಲಿಯಲ್ಲಿ ದಾಳಿ ಮಾಡಿದ ಬಳಿಕ ಪಾಕಿಸ್ತಾನದ ಮೂಲಕ ನೇಪಾಳಕ್ಕೆ ಹೋಗಲು ನಿರ್ಧರಿಸಿದರೆಂದು ಪೊಲೀಸರು ತಿಳಿಸಿದ್ದಾರೆ.