ಸನ್ಮಾರ್ಗ ವಾರ್ತೆ-
ಮುಂಬೈ, ಡಿ. 11: ಮಹಾರಾಷ್ಟ್ರದ ಡೊಂಗ್ರಿಯಲ್ಲಿ ಈರುಳ್ಳಿ ಕದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 21,160 ರೂಪಾಯಿಯ ಈರುಳ್ಳಿಯನ್ನು ಇವರು ಡಿಸೆಂಬರ್ ಐದರಂದು ಕದ್ದಿದ್ದರು. ಡೋಂಗ್ರಿ ಮಾರ್ಕೆಟಿನ ಎರಡು ಅಂಗಡಿಗಳಿಂದ ಇವರು ಈರುಳ್ಳಿ ಕದ್ದಿದ್ದರು. ಒಟ್ಟು 168 ಕಿಲೊ ಈರುಳ್ಳಿ ಕಳ್ಳತನವಾಗಿತ್ತು.
ಈರುಳ್ಳಿ ಕದ್ದ ಘಟನೆ ಸುದ್ದಿಯಾದ ಬೆನ್ನಿಗೆ ಪೊಲೀಸರು ತನಿಖೆ ನಡೆಸಿದ್ದರು. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಮಾರುಕಟ್ಟೆಯಲ್ಲಿನ ಈರುಳ್ಳಿ ಬೆಲೆ ನಮ್ಮನ್ನು ಈರುಳ್ಳಿ ಕಳ್ಳತನಕ್ಕೆ ಪ್ರೇರೇಪಿಸಿತು ಎಂದು ಬಂಧನಕ್ಕೊಳಗಾದವರು ತಿಳಿಸಿದ್ದಾರೆ.












