ಉತ್ತರಪ್ರದೇಶದಲ್ಲಿ ಮತ್ತೊಂದು ಭೀಕರ ಅಪಘಾತ: ಎರಡು ಟ್ರಕ್‌ಗಳ ನಡುವೆ ಅಪಘಾತ; 24 ವಲಸೆ ಕಾರ್ಮಿಕರ ಸಾವು

0
959

ಔರೈಯಾ,ಮೇ.16: ಉತ್ತರಪ್ರದೇಶದ ಔರೈಯಾ ಜಿಲ್ಲೆಯ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ 3:30 ಕ್ಕೆ ಟ್ರಕ್ ಮತ್ತೊಂದು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಅದರಲ್ಲಿದ್ದ 24 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದು, 35 ಜನರು ಗಾಯಗೊಂಡಿದ್ದಾರೆ ಎಂದು ಕಾನ್ಪುರ ರೇಂಜ್ ಐಜಿ ಮೋಹಿತ್ ಅಗರ್ವಾಲ್ ಹೇಳಿದ್ದಾರೆ.

ಈ ಪೈಕಿ 20 ಮಂದಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಗಾಯಗೊಂಡ 15 ಮಂದಿಯನ್ನು ಸೈಫಯಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಔರೈಯಾ ಬಳಿಯ ಚಿರುಹಲಿ ಪ್ರದೇಶದ ಧಾಬಾ ಬಳಿ ಈ ಅಪಘಾತ ಸಂಭವಿಸಿದೆ. ಎರಡೂ ಲಾರಿಗಳಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಪ್ರಯಾಣ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯಿಂದ ಬರುತ್ತಿದ್ದ ಟ್ರಕ್ ಧಾಬಾ ಬಳಿ ನಿಂತಿತು. ಕೆಲವರು ಚಹಾ ಕುಡಿಯುತ್ತಿದ್ದರು. ಆಗ ರಾಜಸ್ಥಾನದಿಂದ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದಿದೆ. ಇದು ಸುಣ್ಣದಿಂದ ತುಂಬಿತ್ತು ಮತ್ತು 30 ಕಾರ್ಮಿಕರನ್ನು ಹೊಂದಿತ್ತು. ಚಹಾ ಕುಡಿಯುವ ಟ್ರಕ್‌ನಿಂದ ಇಳಿದ ಜನರು ಪ್ರಾಣ ಉಳಿಸಿಕೊಂಡರು.

ರಾಜಸ್ಥಾನದಿಂದ ಬರುತ್ತಿದ್ದ ಟ್ರಕ್ ಚಾಲಕ ನಿದ್ರಾವಸ್ಥೆಯಲ್ಲಿದ್ದುದೇ ಅಪಘಾತಕ್ಕೆ ಕಾರಣವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಡಿಕ್ಕಿಯ ನಂತರ ಎರಡೂ ಟ್ರಕ್‌ಗಳು ಪಲ್ಟಿಯಾಗಿವೆ. ಕಾರ್ಮಿಕರ ಮೇಲೆ ಸುಣ್ಣದ ಚೀಲಗಳು ಬಿದ್ದಿದ್ದು ಸಾವಿಗೆ ಕಾರಣವೆನ್ನಲಾಗಿವೆ.

ಅಧಿಕಾರಿಗಳು ಮೃತರನ್ನು ಗುರುತಿಸಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದುವರೆಗೆ ಮೃತರಲ್ಲಿ 15 ಮಂದಿಯನ್ನು ಗುರುತಿಸಲಾಗಿದ್ದು, ಜಾರ್ಖಂಡ್ ಮೂಲ 7 ವಲಸೆ ಕಾರ್ಮಿಕರು, ಪಶ್ಚಿಮ ಬಂಗಾಳದ 4 ಜನರು, ಇದಲ್ಲದೇ ಬಿಹಾರ ಮತ್ತು ಉತ್ತರ ಪ್ರದೇಶದ ತಲಾ ಇಬ್ಬರು ಮೃತಪಟ್ಟಿದ್ದಾರೆ. ಇತರರ ಗುರುತು ಪತ್ತೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.