ಸಿಎಎ ವಿರೋಧಿ ಪ್ರತಿಭಟನೆ: ಬಂಧಿತ ಎಸ್‌ಐಓ ಮಹಾರಾಷ್ಟ್ರ ಅಧ್ಯಕ್ಷ ಸಲ್ಮಾನ್ ಅಹ್ಮದ್ ಬಿಡುಗಡೆ

0
700

ಸನ್ಮಾರ್ಗ ವಾರ್ತೆ

ಮುಂಬೈ; ಮುಂಬೈ ಪೊಲೀಸ್ ನ ಅಪರಾಧ ವಿಭಾಗವು ಬುಧವಾರದಂದು ಬಂಧಿಸಿದ್ದ ಎಸ್‌ಐಓ ಮಹಾರಾಷ್ಟ್ರ ದಕ್ಷಿಣ ವಿಭಾಗದ ಅಧ್ಯಕ್ಷ ಸಲ್ಮಾನ್ ಅಹ್ಮದ್ ಅವರನ್ನು ಫೆ. 7, ಶುಕ್ರವಾರದಂದು ಬಿಡುಗಡೆಗೊಳಿಸಲಾಗಿದೆ.

ಫೆಬ್ರವರಿ 1 ರಂದು ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಅವರು ಭಾಷಣ ಮಾಡಿದ್ದರು. ಈ ಎರಡರ ವಿರುದ್ಧ ಹೋರಾಡುವಂತೆ ಕರೆ ಕೊಟ್ಟಿದ್ದರು. ಅವರ ಭಾಷಣದ ಭಾಗಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ನಂತರ, ಜನಾಂಗ ಮತ್ತು ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸಿದ್ದಾರೆಂಬ ಆರೋಪವನ್ನು ಹೊರಿಸಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು ಮತ್ತು ಈ ಕ್ರಮವನ್ನು ಎಸ್‌ಐಓ ಬಲವಾಗಿ ಖಂಡಿಸಿತ್ತು.

ಅವರ ಭಾಷಣವನ್ನು ಉದ್ದೇಶಪೂರ್ವಕವಾಗಿ ಸಂದರ್ಭದಿಂದ ಪ್ರತ್ಯೇಕಗೊಳಿಸಿ ಎತ್ತಿಕೊಳ್ಳಲಾಗಿದೆ. ಅವರಾಡಿರುವ ಮಾತಿನ ಸಂಪೂರ್ಣ ಭಾಗವು ಈಗಾಗಲೇ ಸಾರ್ವಜನಿಕ ಲಭ್ಯವಿದೆ. ಅವರ ವಿರುದ್ಧ ದಾಖಲಾಗಿರುವ ಪ್ರಕರಣವು ಶಾಂತಿಯುತ ಪ್ರತಿಭಟನೆಗಳನ್ನು ಮೌನಗೊಳಿಸುವ ಪ್ರಯತ್ನವಲ್ಲದೆ ಇನ್ನೇನೂ ಅಲ್ಲ. ದೇಶಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿ ಮತ್ತು ಯುವ ಸಮುದಾಯದ ಮೇಲಿನ ದಾಳಿಯ ಭಾಗವಾಗಿದೆ ಇದು. ಈ ದಾಳಿಯನ್ನು ಹಿಮ್ಮೆಟ್ಟಿಸಲು ನಾವು ಒಟ್ಟಾಗಿ ನಿಲ್ಲಬೇಕು ”ಎಂದು ಎಸ್‌ಐಓ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಕರೆಕೊಡಲಾಗಿತ್ತು ಮತ್ತು ಸಲ್ಮಾನ್ ಅಹ್ಮದ್ ರನ್ನು ತಕ್ಷಣ ಬಿಡುಗಡೆ ಮಾಡುವಂತೆ ಮತ್ತು ಅವರ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡವಂತೆ ಒತ್ತಾಯಿಸಿತ್ತು. ಇದೇವೇಳೆ,

ಸಲ್ಮಾನ್ ರ ಬಂಧನವನ್ನು ಖಂಡಿಸಿ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿ ಅವರು ಟ್ವೀಟ್ ಮಾಡಿದ್ದರು ಮತ್ತು ಅವರನ್ನು ತಕ್ಷಣ ಬಿಡುಗಡೆಗೊಳಿಸಿವಂತೆ ಒತ್ತಾಯಿಸಿದ್ದರು.