ಟುನೀಶ್ಯದ ಅರಬ್ ಲೀಗ್ ಶೃಂಗದಲ್ಲಿ ಅರ್ಧಾಂಶ ದೇಶಗಳು ಗೈರು!

0
1315

ಟುನಿಸ್,ಎ.2: ಸಿರಿಯದ ಗೋಲನ್ ಬೆಟ್ಟಗಳು ಮತ್ತು ಫೆಲಸ್ತೀನ್ ವಿಷಯಗಳನ್ನು ಚರ್ಚಿಸುವ ಸಲುವಾಗಿ ಮಾರ್ಚ್ 31ರಂದು ಟುನಿಷ್ಯ ರಾಜಧಾನಿ ಟುನಿಸ್‍ನಲ್ಲಿ ನಡೆದ ಅರಬ್ ಲೀಗ್ ಶೃಂಗದಲ್ಲಿ ಅರ್ಧಾಂಶದಷ್ಟು ಸದಸ್ಯರು ಉಪಸ್ಥಿತಿತರಿರಲಿಲ್ಲ ಎಂದು ವರದಿಯಾಗಿದೆ. ಅನಾಡೊಲು ನ್ಯೂಸ್ ಏಜೆನ್ಸಿ ಈ ವಿಷಯವನ್ನು ವರದಿ ಮಾಡಿದೆ. 13 ಅರಬ್ ದೇಶಗಳು ಏಕದಿನ ಶೃಂಗದಲ್ಲಿ ಭಾಗವಹಿಸಿದ್ದವು.

ಸೌದಿ ದೊರೆ ಸಲ್ಮಾನ್, ಕತರ್ ಅಮೀರ್ ತಮೀಂ ಬಿನ್ ಹಮದ್ ಅಲ್‍ಥಾನಿ, ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಹ್ ಅಲ್ ಸಿಸಿ ಶೃಂಗದಲ್ಲಿ ಭಾಗವಹಿಸಿದ್ದಾರೆ, ಸುಡಾನ್, ಅಲ್ಜೀರಿಯ, ಒಮನ್,ಮೊರೊಕ್ಕೊ ದೇಶಗಳ ಪ್ರತಿನಿಧಿಗಳು ಶೃಂಗದಲ್ಲಿ ಭಾಗವಹಿಸಿಲ್ಲ. ಟುನಿಷ್ಯ, ಕುವೈಟ್, ಇರಾಕ್,ಲೆಬನಾನ್, ಫಲೆಸ್ತೀನ್, ಯಮನ್, ಮೌರಿತಾನಿಯ, ಡಿಜಿಬೊತಿ ದೇಶಗಳು ಅರಬ್ ಲೀಗ್‍ನಲ್ಲಿ ಭಾಗವಹಿಸಿವೆ. ಪ್ರತಿನಿಧಿಗಳನ್ನು ಕಳುಹಿಸದಿರುವ ಕಾರಣದಿಂದ 2011ರಿಂದ ಸಿರಿಯದ ಸದಸ್ಯತ್ವವವನ್ನು ಅರಬ್‍ಲೀಗ್ ಅಮಾನತಿನಲ್ಲಿಟ್ಟಿದೆ.