ಬಾಲಕೋಟ್ ನಲ್ಲಿ 250ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟಿದ್ದಾರೆ- ಗುಜರಾತ್ ಚುನಾವಣಾ ರ‌್ಯಾಲಿಯಲ್ಲಿ ಅಮಿತ್ ಶಾ

0
534

ಹೊಸದಿಲ್ಲಿ,ಮಾ.4: ಭಾರತದ ವಾಯುಸೇನೆದಾಳಿಯಲ್ಲಿ ಬಾಲಕೋಟ್‍ನಲ್ಲಿ 250ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ರವಿವಾರ ಗುಜರಾತಿನಲ್ಲಿ ನಡೆದ ಚುನಾವಣಾ ರ‌್ಯಾಲಿಯಲ್ಲಿ ಅಮಿತ್‍ ಶಾ ಹೇಳಿದ್ದು ಸೇನೆಯಾಗಲಿ ಸರಕಾರವಾಗಲಿ ಸರಿಯಾದ ಲೆಕ್ಕವನ್ನು ಬಿಡುಗಡೆಗೊಳಿಸಿಲ್ಲ.

ಉರಿ ಭಯೋತ್ಪಾದನಾ ದಾಳಿಯ ನಂತರ ಪಾಕಿಸ್ತಾನಕ್ಕೆ ಹೋಗಿ ಮಿಂಚಿನ ದಾಳಿ ನಡೆಸಲಾಗಿದೆ. ನಮ್ಮ ಯೋಧರ ಸಾವಿಗೆ ಪ್ರತೀಕಾರ ಮಾಡಲಾಗಿದೆ. ಪುಲ್ವಾಮ ಬಳಿಕ ಮಿಂಚಿನ ದಾಳಿ ನಡೆಯದು ಎಂದು ಎಲ್ಲರೂ ಭಾವಿಸಿಕೊಂಡಿದ್ದರು. ಆದರೆ ಪುಲ್ವಾಮ ದಾಳಿ ನಡೆದ 13 ದಿವಸಗಳೊಳಗೆ ಮೋದಿ ಸರಕಾರದ ಅಧೀನವಿರುವ ವಾಯುಸೇನೆ ಗಡಿದಾಟಿ ದಾಳಿ ಮಾಡಿತು. 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಶಾ ಹೇಳಿದರು.

ಅಮೆರಿಕ, ಇಸ್ರೇಲ್‍ಗಳ ನಂತರ ಸ್ವಂತ ಸೇನೆಯನ್ನು ಉಪಯೋಗಿಸಿ ಪ್ರತೀಕಾರ ಮಾಡಿದ ಮೂರನೆಯ ದೇಶ ಭಾರತವೆಂದು ಅಮಿತ್ ಶಾ ಹೇಳಿದರು. ಪಾಕಿಸ್ತಾನದ ಎಫ್16 ವಿಮಾನಕ್ಕೆ ಗುಂಡಿಟ್ಟು ಬೀಳಿಸಿದ ನಂತರ ಭಾರತದ ಪೈಲಟ್ ಅಭಿನಂದನ್ ಪಾಕ್‌ನಲ್ಲಿ ಸೆರೆಯಾಗಿ 24 ಗಂಟೆಯೊಳಗೆ ಮರಳಿ ಕರೆತರಲು ಸಾಧ್ಯವಾಗಿದ್ದು ಮೋದಿ ಅಧಿಕಾರದಲ್ಲಿರುವುದರ ಬದಲಾವಣೆಯಾಗಿದೆ ಎಂದು ಸೂರತ್‍ನಲ್ಲಿ ನಡೆದ ಇನ್ನೊಂದು ಸಭೆಯಲ್ಲಿ ಹೇಳಿದರು.

ಇದೇ ವೇಳೆ ಸೇನಾ ದಾಳಿಯನ್ನು ರಾಜಕೀಯ ಗೊಳಿಸಲಾಗುತ್ತಿದೆ ಎಂಬ ತನ್ನ ಮೇಲಿರುವ ಆರೋಪವನ್ನು ಬಿಜೆಪಿ ತಿರಸ್ಕರಿಸಿದೆ.