32+16=?

0
1639

ಇರೋಮ್ ಶರ್ಮಿಳಾ ಮತ್ತು ಮೇಧಾ ಪಾಟ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಇವರಲ್ಲಿ ಇರೋಮ್ ಶರ್ಮಿಳಾ ಸದ್ಯ ಕೊಡೈಕನಾಲ್‍ನಲ್ಲಿ ಮದುವೆ ತಯಾರಿಯಲ್ಲಿ ಬ್ಯುಝಿಯಾಗಿದ್ದಾರೆ. ಮೇಧಾ ಪಾಟ್ಕರ್ ಅವರು ಮಧ್ಯ ಪ್ರದೇಶದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ನಿ ರತರಾಗಿದ್ದಾರೆ. ವಿಷಾದ ಏನೆಂದರೆ, ಬಹುತೇಕ ಕನ್ನಡ ಪತ್ರಿಕೆಗಳು ಮೇಧಾರ ಸತ್ಯಾಗ್ರಹದ ಸುದ್ದಿಯನ್ನು ಪ್ರಕಟಿಸಿಯೇ ಇಲ್ಲ. ರಾಷ್ಟ್ರಮಟ್ಟದ ಇಂಗ್ಲಿಷ್ ಪತ್ರಿಕೆಗಳು ಈ ಸತ್ಯಾಗ್ರಹಕ್ಕೆ ಒಳಪುಟದಲ್ಲಿ ಒಂದು ಕಾಲಂನಷ್ಟು ಜಾಗವನ್ನಷ್ಟೇ ಕೊಟ್ಟಿವೆ. ಇದಕ್ಕೆ ಹೋಲಿಸಿದರೆ ಇರೋಮ್ ಭಾಗ್ಯಶಾಲಿ. ಆಕೆ ಕೊಡೈಕನಾಲ್‍ನಲ್ಲಿ ತಂಗಿರುವುದು, ಬ್ರಿಟಿಷ್ ಪೌರತ್ವ ಪಡೆದಿರುವ ಡೆಸ್ಮಾಂಡ್ ಕುಟಿನ್ಹೊ ಜೊತೆ ಅಂತರ್ಧಮೀಯ ವಿವಾಹಕ್ಕಾಗಿ ನೋಂದಣಿ ಮಾಡಿಕೊಂಡಿರುವುದು ಮತ್ತು ಹಿಂದೂ ಮಕ್ಕಳ ಕಚ್ಚಿಯಂಥ ಸಂಘಟನೆ ಗಳು ಆ ಮದುವೆಗೆ ವಿರೋಧ ಸೂಚಿಸಿ ಕೇಸು ದಾಖಲಿಸಿರುವುದೆಲ್ಲ ಮಾಧ್ಯಮಗಳ ಪಾಲಿಗೆ ರಸವತ್ತಾದ ಸುದ್ದಿಯಾಗಿ ಮಾರ್ಪಾಟುಗೊಂಡಿವೆ. 2000 ಇಸವಿಯಲ್ಲಿ ಇರೋಮ್ ಶರ್ಮಿಳಾ ಆಮರಣಾಂತ ಉಪವಾಸವನ್ನು ಕೈಗೊಂಡು ದೇಶದಾದ್ಯಂತ ಸುದ್ದಿಯಾಗಿದ್ದರು. ಹರೆಯದ ಯುವತಿ ಯೊಬ್ಬಳು ಪ್ರಜಾಸತ್ತಾತ್ಮಕ ವಿಧಾನದ ಮೂಲಕ ವ್ಯವಸ್ಥೆಯನ್ನು ಎದುರಿಸುವ ನಿರ್ಧಾರ ತಳೆದುದು ಅತ್ಯಂತ ಧೈರ್ಯದ ಕೆಲಸ. ಮಣಿಪುರದ ಮೇಲೆ ಕೇಂದ್ರ ಸರಕಾರ ಹೇರಿರುವ ಸಶಸ್ತ್ರ ಪಡೆಗಳ ವಿಶೇಷಧಿಕಾರ ಕಾಯ್ದೆ(AFSPA )ಯನ್ನು ಹಿಂತೆಗೆಯಬೇಕು ಎಂಬುದು ಯುವತಿಯ ಬೇಡಿಕೆಯಾಗಿತ್ತು. ಆ ಯುವತಿ ಅನ್ನ, ನೀರು ತ್ಯಜಿಸಿದಳು. ಕನ್ನಡಿ ನೋಡಲ್ಲ, ತಲೆಗೂದಲು ಬಾಚಲ್ಲ ಎಂದು ಶಪಥಗೈದಳು. ಆಕೆಯ ಸಾವನ್ನು ತಪ್ಪಿಸುವುದಕ್ಕಾಗಿ ಸರಕಾರ ಆಗಾಗ ಬಂಧಿಸಿ ನಳಿಕೆಯ ಮೂಲಕ ಬಲವಂತದಿಂದ ಆಹಾರವನ್ನು ಕೊಡಲು ಪ್ರಾರಂಭಿಸಿತು. ಕ್ರಮೇಣ ಮಾಧ್ಯಮಗಳೂ ಆಕೆಯ ಸತ್ಯಾ ಗ್ರಹದ ಮೇಲೆ ಆಸಕ್ತಿಯನ್ನು ಕಳಕೊಳ್ಳತೊಡಗಿದುವು. ಜನರು ನಿಧಾನಕ್ಕೆ ಅವರ ಸುತ್ತಲಿನಿಂದ ಕರಗತೊಡಗಿದರು. ಬಳಿಕ ವರ್ಷಕ್ಕೊಮ್ಮೆ ಸ್ಮರಣೆಗೆ ಒಳಗಾಗುವ ವ್ಯಕ್ತಿತ್ವವಾಗಿ ಇರೋಮ್ ಬದಲಾ ದರು. ಹಾಗಂತ, ಇರೋಮ್ ತನ್ನ ಶಪಥದಲ್ಲಿ ಯಾವ ರಾಜಿಯನ್ನೂ ಮಾಡಿಕೊಂಡಿರಲಿಲ್ಲ. ಮಾತ್ರವಲ್ಲ, ಮಣಿಪುರದಲ್ಲಿರುವ ಸಶಸ್ತ್ರ ಪಡೆಗಳು ಪರಮ ದಯಾಳುವಾಗಿಯೂ ಮಾರ್ಪಟ್ಟಿರಲಿಲ್ಲ. ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ಮಣಿಪುರದಲ್ಲಿ 2000 ಇಸವಿಯ ಬಳಿಕವೂ ಧಾರಾಳ ನಡೆದಿದೆ. ಇಷ್ಟಿದ್ದೂ ಇರೋಮ್‍ರ ಹೋರಾಟವು ನಿಧಾನವಾಗಿ ಜನರ ನಿರ್ಲಕ್ಷ್ಯಕ್ಕೆ ಯಾಕೆ ಒಳ ಗಾಯಿತೆಂಬ ಪ್ರಶ್ನೆ ಅತ್ಯಂತ ಗಂಭೀರವಾದುದು. ವ್ಯವಸ್ಥೆ ಅತ್ಯಂತ ಯೋಜಿತವಾಗಿ ಆಕೆಯ ವಿರುದ್ಧ ಅಪಪ್ರಚಾರದಲ್ಲಿ ತೊಡಗಿತು. ಆಕೆಯ ಹೋರಾಟ ಮಾದರಿಯನ್ನು ಅಪ್ರಸ್ತುತವೆಂದು ಸಾರಿತು. ಇರೋಮ್‍ರದ್ದು ನಕಾರಾತ್ಮಕ ಸಿದ್ಧಾಂತವೆಂದು ಪ್ರತಿಪಾದಿಸಿತು. ಅಂತಿಮವಾಗಿ 2016ರ ಆಗಸ್ಟ್‍ನಲ್ಲಿ ಇರೋಮ್ ತನ್ನ 14 ವರ್ಷಗಳ ಸತ್ಯಾಗ್ರಹಕ್ಕೆ ವಿದಾಯ ಕೋರಿದರು. ಪ್ರಜಾ (People Resurgence and Justice Alliance ) ಎಂಬ ಪಕ್ಷವನ್ನು ಕಟ್ಟಿ