ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತಿಗಾಗಿ 9 ಕೋಟಿ ರೂ. ವ್ಯಯಿಸಿದ ಬಿಜೆಪಿ!

0
585

ಹೊಸದಿಲ್ಲಿ,ಎ.5: ಎರಡು ತಿಂಗಳಲ್ಲಿ ಆನ್‍ಲೈನ್ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಬಿಜೆಪಿ 9 ಕೋಟಿ ರೂಪಾಯಿ ವ್ಯಯಿಸಿದೆ. ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಬಿಜೆಪಿ ಫೇಸ್ಬುಕ್‍ಗೆ 7.75 ಕೋಟಿರೂಪಾಯಿ ಮತ್ತು ಗೂಗಲ್‍ಗೆ 1.21ಕೋಟಿ ರೂಪಾಯಿ ಜಾಹೀರಾತು ನೀಡಿದೆ. ಸಾಮಾಜಿಕ ಮಾಧ್ಯಮಗಳ ಜಾಹೀರಾತಿಗಾಗಿ ವೈಎಸ್‍ಆರ್ ಕಾಂಗ್ರೆಸ್, ಟಿಡಿಪಿ ಹೆಚ್ಚು ಹಣವನ್ನು ವ್ಯಯಿಸಿದ ಇನ್ನೆರಡು ಪಾರ್ಟಿಗಳು.

ಮೈ ಫಸ್ಟ್ ವೋಟ್ ಫಾರ್ ಮೋದಿ ಪ್ರಚಾರ ಕಾರ್ಯಕ್ರಮಕ್ಕಾಗಿ ಬಿಜೆಪಿ ಫೇಸ್‍ಬುಕ್‍ಗೆ 1.05 ಕೋಟಿ ರೂಪಾಯಿ ನೀಡಿದೆ. ನೇಶನ್ ವಿದ್ ನಮೊ ಜಾಹೀರಾತಿಗಾಗಿ 59.15 ಲಕ್ಷ ರೂಪಾಯಿ ನೀಡಿದೆ. ಕಾಂಗ್ರೆಸ್ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತಿಗಾಗಿ ಒಟ್ಟು 5.91 ಲಕ್ಷರೂಪಾಯಿ ವ್ಯಯಿಸಿದೆ. ರಾಜಕೀಯ ಜಾಹೀರಾತುಗಳಿಗಾಗಿ ಗೂಗಲ್‍ನಲ್ಲಿ ಎರಡು ತಿಂಗಳಲ್ಲಿ ಬಿಜೆಪಿ ಶೇ.32ರಷ್ಟು ಬಿಜೆಪಿಯು ಖರ್ಚು ಮಾಡಿದೆ. ಗೂಗಲ್‍ನ ಇಂಡಿಯನ್ ಟ್ರಾನ್ಸಫರೆನ್ಸಿ ವರದಿ ಪ್ರಕಾರ ಬಿಜೆಪಿ 554 ಜಾಹೀರಾತುಗಳಿಗೆ 1.21ಕೋಟಿ ರೂಪಾಯಿ ವೆಚ್ಚ ಮಾಡಿದೆ. ಕಾಂಗ್ರೆಸ್ ಗೂಗಲ್ ಜಾಹೀರಾತಿಗೆ 54.100 ಲಕ್ಷ ರೂಪಾಯಿ ವ್ಯಯಿಸಿದ್ದು ಆರನೆ ಸ್ಥಾನದಲ್ಲಿದೆ. ವೈಎಸ್‍ಆರ್ ಕಾಂಗ್ರೆಸ್ ಗೂಗಲ್‍ನಲ್ಲಿ 1.04 ಕೋಟಿ ರೂಪಾಯಿ ಜಾಹೀರಾತಿಗಾಗಿ ವಿನಿಯೋಗಿಸಿದೆ.