ವಡಗರ,ಎ.5: ಅರಬ್ ಮಾಂತ್ರಿಕ ಚಿಕಿತ್ಸೆ ನೀಡುವೆ ಎಂದು ಹಲವಾರು ಮಂದಿಯನ್ನು ವಂಚಿಸಿದ ನಕಲಿ ವೈದ್ಯ ಉಸ್ಮಾನ್ ಹಾಜಿ(47) ಎಂಬ ನಕಲಿ ವೈದ್ಯನನ್ನು ವಡಗರದಲ್ಲಿ ವಡಗರ ಸರ್ಕಲ್ ಇನ್ಸ್ಪೆಕ್ಟರ್ ಎಂಎಂ ಅಬ್ದುಲ್ ಕರೀಮ್ರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಆರೋಪಿಯ ಮಾಲಕತ್ವದ ವನ್ಡೆ ರಿಸಾಟ್ನಿಂದ ವಡಗರದ ಮಹಿಳೆಯೊಬ್ಬರು ನೀಡಿದ ದೂರಿನಡಿಯಲ್ಲಿ ಕಸ್ಟಡಿಗೆ ಪಡೆಯಲಾಗಿದ್ದು ಆರೋಪಿಯನ್ನು ನಂತರ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಖಾಸಗಿ ಚ್ಯಾನೆಲ್ ಒಂದರಲ್ಲಿ ಅರಬ್ ಮಾಂತ್ರಿಕ ಚಿಕಿತ್ಸೆ ಅನುಭವ, ಸಾಕ್ಷ್ಯಗಳು ಎನ್ನುವ ಹೆಸರಿನಲ್ಲಿ ಈತ ಕಾರ್ಯಕ್ರಮವೊಂದನ್ನು ನಡೆಸುತ್ತಾ ಬಂದಿದ್ದ. ಇದರ ಮೂಲಕ ಕೇರಳ ಮತ್ತು ಹೊರ ರಾಜ್ಯಗಳ ಅನೇಕರನ್ನು ತನ್ನ ಬಲೆಯಲ್ಲಿ ಬೀಳಿಸುತ್ತಿದ್ದ. ಜೀವನದ ಎಲ್ಲ ಸಮಸ್ಯೆಗಳಿಗೆ ತನ್ನಲ್ಲಿ ಪರಿಹಾರ ಇದೆ ಎಂದು ಹೇಳಿಕೊಳ್ಳುತ್ತಿದ್ದ.
ಮಕ್ಕಳಿಲ್ಲದವರಿಗೆ, ಪತಿಯೊಂದಿಗೆ ಜಗಳ ಮಾಡಿದವರಿಗೆ, ಜಮೀನು ಮಾರಾಟಕ್ಕಿರುವ ಅಡೆತಡೆ ಎಲ್ಲವನ್ನೂ ಪರಿಹಾರ ಮಾಡುವ ಚಿಕಿತ್ಸೆಯನ್ನು ಈತ ನೀಡುತ್ತಿದ್ದ. ಪ್ರತಿದಿನ ಐನೂರರಷ್ಟು ಮಂದಿ ಬರುತ್ತಿದ್ದರು.10,000 ರೂಪಾಯಿಯಿಂದ 70,000ರೂಪಾಯಿಯವರೆಗೆ ಈತ ವಸೂಲು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪತಿಯೊಂದಿಗೆ ಜಗಳ ಆಗಿದ್ದರೆ ಅದಕ್ಕೆ ಚಿಕಿತ್ಸೆ ನೀಡಿ ಏಳು ಲಕ್ಷ ರೂಪಾಯಿ ಪಡೆಯುತ್ತಿದ್ದ. ನಂತರ ಅದು ಫಲಿಸದಿದ್ದಾಗ ಹಣ ಮರಳಿ ಕೇಳಿದರೆ ಕೊಡಲು ಸಿದ್ಧನಾಗಿರಲಿಲ್ಲ. ಆದ್ದರಿಂದ ವಡಗರದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಕೇರಳ ಮತ್ತು ಹೊರರಾಜ್ಯಗಳ 25,000ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಿದ್ದಾನೆ ಎಂದು ಆರೋಪಿ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾನೆ.












