ಲಕ್ನೊ,ಎ.5: ಮುಸ್ಲಿಂ ಲೀಗ್- ಕಾಂಗ್ರೆಸ್ ಸಖ್ಯದ ವಿರುದ್ಧ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ. ಮುಸ್ಲಿಂ ಲೀಗೊಂದು ವೈರಸ್ ಆಗಿದೆ. ಅದರ ಬಾಧೆ ಕಾಂಗ್ರೆಸ್ಗೆ ತಟ್ಟಿದೆ ಎಂದು ಯೋಗಿ ಟ್ವೀಟ್ ಮಾಡಿದ್ದಾರೆ. ಜೀವ ಉಳಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಲೀಗ್ ಎನ್ನುವ ವೈರಸ್ ಕಾಂಗ್ರೆಸ್ನ್ನು ಬಾಧಿಸಿದೆ, ಈ ಕುರಿತು ಎಚ್ಚರ ಪಾಲಿಸಬೇಕಾಗಿದೆ ಎಂದು ಅವರು ಟ್ವೀಟ್ನಲ್ಲಿ ವಿವರಿಸಿದ್ದಾರೆ.
ಕಾಂಗ್ರೆಸ್ ಗೆದ್ದರೆ ಈ ದೇಶಾದ್ಯಂತ ಹರಡಬಹುದು. ಮುಸ್ಲಿಂ ಲೀಗ್ ಎಂಬ ವೈರಸ್ ದೇಶವನ್ನು ಒಮ್ಮೆ ವಿಭಜಿಸಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು. ರಾಹುಲ್ ಗಾಂಧಿ ಮುಸ್ಲಿಂ ಲೀಗ್ ಸಹಾಯದಲ್ಲಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಬಿಜೆಪಿಯ ಕೇಂದ್ರ ನಾಯಕರು ಈಗಾಗಲೇ ರಂಗಪ್ರವೇಶಿಸಿದ್ದಾರೆ.
मुस्लिम लीग एक वायरस है। एक ऐसा वायरस जिससे कोई संक्रमित हो गया तो वो बच नहीं सकता और आज तो मुख्य विपक्षी दल कांग्रेस ही इससे संक्रमित हो चुका है।
सोचिये अगर ये जीत गए तो क्या होगा ? ये वायरस पूरे देश मे फैल जाएगा।
— Chowkidar Yogi Adityanath (@myogiadityanath) April 5, 2019












