ದಕ್ಷಿಣ ಸುಡಾನ್: ‘ಶತ್ರುತ್ವ ಕೊನೆಗೊಳಿಸಿ, ಶಾಂತಿ ಸ್ಥಾಪಿಸಿ’ ಎಂದು ನಾಯಕರ ಪಾದ ಚುಂಬಿಸಿದ 82 ವರ್ಷದ ಪೋಪ್!

0
1190

ವ್ಯಾಟಿಕನ್ ಸಿಟಿ,ಎ.13: ದಕ್ಷಿಣ ಸುಡಾನ್‍ನ ಅಧ್ಯಕ್ಷ ಸಾಲ್ವ ಕೀರ್ ಮತ್ತು ಪ್ರತಿಪಕ್ಷಾ ನಾಯಕ ರಿಕ್ ಮಾಶರ್‍ರ ಪಾದವನ್ನು ಪೋಪ್ ಪ್ರಾನ್ಸಿಸ್‍ರು ಚುಂಬಿಸಿದರು. ಶತ್ರುತ್ವವನ್ನು ಕೊನೆಗೊಳಿಸಿ ಶಾಂತಿಯ ಕಾರ್ಯಕ್ರಮಗಳೊಂದಿಗೆ ಮುಂದೆ ಸಾಗುವಂತೆ ಕರೆ ನೀಡಿ 82 ವರ್ಷದ ಪೋಪ್ ಪಾದ ಚುಂಬನ ನಡೆಸಿದರು.

ದಕ್ಷಿಣ ಸುಡಾನ್‍ನಲ್ಲಿ ಶಾಂತಿ ಒಪ್ಪಂದಕ್ಕೆ ಸಹಿಹಾಕಲು ಇಬ್ಬರು ನಾಯಕರು ಸಿದ್ಧರಾಗುವಂತೆ ಪೋಪ್ ಆಗ್ರಹಿಸಿದರು. ಅದರ ನಂತರ ಮೊಣಕಾಲೂರಿ ಇಬ್ಬರು ನಾಯಕರ ಪಾದ ಚುಂಬನ ನಡೆಸಿದರು. ವ್ಯಾಟಿಕನ್‍ನಲ್ಲಿ ನಡೆದ ಚರ್ಚೆಯಲ್ಲಿ ಘಟನೆ ನಡೆದಿದೆ. ವಿಶೇಷ ದಿವಸಗಳಲ್ಲಿ ಪೋಪ್ ಕೈದಿಗಳು ಮುಂತಾದವರ ಪಾದ ತೊಳೆಯುವುದಿದೆ.ಆದರೆ ರಾಜಕೀಯ ನಾಯಕರ ಪಾದ ಚುಂಬಿಸುವುದು ಅಪೂರ್ವವಾಗಿದೆ.