ಜಲಿಯಾನಾವಾಲ ಬಾಗ್: ಸ್ವಾತಂತ್ರ್ಯದ ಮೌಲ್ಯವನ್ನು ಮರೆಯಬೇಡಿರಿ- ರಾಹುಲ್ ಗಾಂಧಿ

0
1117

ಅಮೃತಸರ,ಎ.13: ಜಲಿಯಾನಾವಾಲ ಬಾಗ್ ಹತ್ಯಾಕಾಂಡದ ನೂರನೆಯ ವಾರ್ಷಿಕ ದಿನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಜಲಿಯಾನಾವಾಲ ಬಾಗ್ ಸ್ಮಾರಕಕ್ಕೆ ಪುಷ್ಪಚಕ್ರ ಅರ್ಪಿಸಿದರು. ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಸಚಿವ ನವಜೋತ್ ಸಿಂಗ್ ಸಿಧುರ ಜೊತೆ ರಾಹುಲ್ ಆಗಮಿಸಿದ್ದು ಸ್ವಾತಂತ್ರ್ಯದ ಮೌಲ್ಯವನ್ನು ಯಾವತ್ತೂ ಮರೆಯಬಾರದು ಎಂದು ಸಂದರ್ಶಕ ಪುಸ್ತಕದಲ್ಲಿ ಬರೆದಿದ್ದಾರೆ.

‘ಸ್ವಾತಂತ್ರ್ಯದ ಬೆಲೆ ಯಾವತ್ತೂ ಮರೆಬಾರದು. ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ಸಮರ್ಪಿಸಿದ ಭಾರತದ ಜನರಿಗೆ ನಾವು ಸಲ್ಯೂಟ್ ಮಾಡುತ್ತೇವೆ. ಜಯ್ ಹಿಂದ್’ ಎಂದು ರಾಹುಲ್ ಪುಸ್ತಕದಲ್ಲಿ ಬರೆದರು. ಇಂದು ಬೆಳಗ್ಗೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಜಲಿಯಾನಾವಾಲ ಬಾಗ್ ಸ್ಮಾರಕವನ್ನು ಸಂದರ್ಶಿಸಿದ್ದಾರೆ.

1919 ಎಪ್ರಿಲ್ 13ರಂದು ಜಲಿಯಾನಾವಾಲ ಬಾಗ್‍ನಲ್ಲಿ ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಗೋಲಿಬಾರ್ ನಡೆಸಿದ್ದರು. ಮೈದಾನದಲ್ಲಿ ಸಭೆಯ ನಡೆಯುತ್ತಿದ್ದಾಗ ಜನರಲ್ ರೆಜಿನಾಲ್ಡ್ ಡಯರ್ ಗೋಲಿಬಾರಿಗೆ ಆದೇಶ ನೀಡಿದ್ದನು. ಸತ್ಯಪಾಲ್, ಸೈಫುದ್ದೀನ್ ಕಿಚ್ಲೊ ಎಂಬ ಇಬ್ಬರು ನಾಯಕರನ್ನು ಬಂಧಿಸಿದ್ದ ನ್ನ ಪ್ರತಿಭಟಿಸಿ ಜನರು ಸಭೆ ಸೇರಿದ್ದರು. ಶಾಂತಿಯುತವಾಗಿ ಸಭೆ ನಡೆಯುತ್ತಿದ್ದ ವೇಳೆ ಡಯರ್ ಮತ್ತು ಆತನ ಸೈನ್ಯ ಗೋಲಿಬಾರು ನಡೆಸಿ 379 ಮಂದಿಯನ್ನು ಹತ್ಯೆ ಮಾಡಿತ್ತು.