ಇಸ್ರೇಲ್ ದಾಳಿಗೆ 33 ಒತ್ತೆಯಾಳುಗಳ ಬಲಿ, ಹಮಾಸ್: ಬಿಡುಗಡೆಗೊಳಿಸದಿದ್ದರೆ ಘೋರ ಪರಿಣಾಮ: ಟ್ರಂಪ್ ಎಚ್ಚರಿಕೆ

0
652

ಸನ್ಮಾರ್ಗ ವಾರ್ತೆ

ಕಳೆದ 14 ತಿಂಗಳುಗಳಿಂದ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ 33 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ. ಈ ಬಗ್ಗೆ ಹಮಾಸ್ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಇದೇ ವೇಳೆ 2025 ಜನವರಿ 20ರಂದು ತಾನು ಅಧಿಕಾರ ವಹಿಸುವುದಕ್ಕಿಂತ ಮೊದಲು ಹಮಾಸ್ ತನ್ನ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದಿದ್ದರೆ ಪರಿಣಾಮ ಘೋರವಾಗಿರುತ್ತದೆ ಎಂದು ಅಮೆರಿಕಾದ ಭಾವಿ ಅಧ್ಯಕ್ಷ ಟ್ರಂಪ್ ಹಮಾಸ್ ಗೆ ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಏರ್ಪಡಿಸುವುದಕ್ಕಾಗಿ ಈಜಿಪ್ಟ್ ಕತಾರ್ ಮತ್ತು ಅಮೆರಿಕಗಳು ಹೊಸದಾಗಿ ನಡೆಸುತ್ತಿರುವ ಸಂಧಾನ ಮಾತುಕತೆಯ ವೇಳೆ ಹಮಾಸ್ ಈ ಮಾಹಿತಿಯನ್ನು ಹಂಚಿಕೊಂಡಿದೆ. ಮೃತಪಟ್ಟ ಒತ್ತೆಯಾಳುಗಳ ಪೈಕಿ ಕೆಲವರು ಇಸ್ರೇಲ್ ನ ವೈಮಾನಿಕ ದಾಳಿಗೆ ಸಿಲುಕಿ ಸಾವಿಗೀಡಾದರೆ ಇನ್ನೂ ಕೆಲವರು ಇಸ್ರೇಲ್ ಸೇನೆಯ ರಕ್ಷಣಾ ಕಾರ್ಯಾಚರಣೆಯ ವೇಳೆ ಸಾವಿಗೀಡಾಗಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ.

ಹಾಗೆಯೇ ಇಸ್ರೇಲ್ ತನ್ನ ಈ ಹುಚ್ಚು ದಾಳಿಯನ್ನು ನಿಲ್ಲಿಸದಿದ್ದರೆ ಈಗಿರುವ ಒತ್ತೆಯಾಳುಗಳ ಸಾವಿನ ಹೊಣೆಯನ್ನು ಇಸ್ರೇಲ್ ವಹಿಸಿಕೊಳ್ಳಬೇಕಾಗುತ್ತದೆ ಎಂದು ಹಮಾಸ್ ಎಚ್ಚರಿಕೆ ನೀಡಿದೆ.