ಸನ್ಮಾರ್ಗ ವಾರ್ತೆ
ರಾಯ್ಪುರ, ಜ. 25: ಎಲ್ಲ ಸರಕಾರಿ ಶಿಕ್ಷಣ ಸಂಸ್ಥೆಗಳ ಪಾಠ ಪದ್ಧತಿಯಲ್ಲಿ ಭಾರತದ ಸಂವಿಧಾನದ ಪ್ರಧಾನ ಭಾಗಳನ್ನು ಸೇರಿಸಲು ಛತ್ತೀಸ್ ಗಡ ಮತ್ತು ರಾಜಸ್ಥಾನದ ಕಾಂಗ್ರೆಸ್ ಸರಕಾರಗಳು ತೀರ್ಮಾನಿಸಿವೆ. ತಿಂಗಳ ಮೊದಲ ವಾರದಲ್ಲಿ ಸಂವಿಧಾನ ಪ್ರಸ್ತಾವನೆಯ ಮೂಲಭೂತ ಹಕ್ಕುಗಳ ಕುರಿತು ಮತ್ತು ಮೂರನೇ ವಾರದಲ್ಲಿ ಪ್ರಜೆಗಳ ಕರ್ತವ್ಯದ ಕುರಿತು ಚರ್ಚಿಸಲಾಗುವುದು ಎಂದು ಛತ್ತೀಸ್ಗಡ ಶಿಕ್ಷಣ ಇಲಾಖೆ ಶುಕ್ರವಾರ ಸೂಚನೆ ನೀಡಿದೆ. ಮಧ್ಯಪ್ರದೇಶ ಸರಕಾರ ಇಂತಹದೇ ತೀರ್ಮಾನವನ್ನು ಎರಡು ದಿನಗಳಲ್ಲಿ ತೆಗೆಯಲಿದೆ ಎಂದು ತಿಳಿಸಿದೆ. ಸರಕಾರಿ ಶಾಲೆಗಳಲ್ಲಿ ಸಂವಿಧಾನ ಪ್ರಸ್ತಾವನೆ ಓದಬೇಕೆಂದು ಮಧ್ಯಪ್ರದೇಶ ಸರಕಾರ ತೀರ್ಮಾನಿಸಿತ್ತು.
ಸಂವಿಧಾನ ಕುರಿತು ಅರಿವು ಮೂಡಿಸುವ ಸಲುವಾಗಿ ಎಲ್ಲ ಸೋಮವಾರವೂ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಂವಿಧಾನ ದಿನಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಭೂಫೇಶ್ ಬಗೊಲ್ ಘೋಷಿಸಿದ್ದು ಜನವರಿ 26ರಿಂದ ಎಲ್ಲ ಶುಕ್ರವಾರ ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವವನ್ನು ಓದುವುದು ಕಡ್ಡಾಯಗೊಳಿಸಲಾಗುವುದು ಎಂದು ರಾಜಸ್ತಾನ ಸರಕಾರವೂ ತಿಳಿಸಿತು. ಈ ಹಿಂದೆ ಮಹಾರಾಷ್ಟ್ರ ಸರಕಾರ ಶಾಲೆಯ ವಿದ್ಯಾರ್ಥಿಗಳು ಸಂವಿಧಾನದ ಪ್ರಸ್ತಾವನೆಯನ್ನು ಓದುವುದು ಕಡ್ಡಾಯವಾಗಿದೆ ಎಂದು ತಿಳಿಸಿತ್ತು. ಮಹಾರಾಷ್ಟ್ರದಲ್ಲಿ 2013ರಲ್ಲಿ ಮಂಡಿಸಿದ ಪ್ರಸ್ತಾವ ಸರಕಾರ ಒಪ್ಪಿಕೊಂಡಿದ್ದರೂ ಅದನ್ನು ಜಾರಿಗೆ ತಂದಿರಲಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.












