ದಿಲ್ಲಿ ಕೋಮು ಗಲಭೆ: ನಿವೃತ್ತ ನ್ಯಾಯಾಧೀಶರ ಸಮಿತಿಯಿಂದ ತನಿಖೆ

0
579

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.12: ದಿಲ್ಲಿಯ ಕೋಮು ಗಲಭೆಯ ತನಿಖೆಗೆ ನಾಲ್ವರು ನಿವೃತ್ತ ಜಡ್ಜ್‌ಗಳು, ಇಬ್ಬರು ನಿವೃತ್ತ ಉನ್ನತ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ಸಂವಿಧಾನ ಶಿಸ್ತು ಸಮಿತಿ ನಿಯೋಜಿಸಿದೆ. ಕೋಮು ಗಲಭೆಯ ಕಾರಣಗಳು, ದಾಳಿಗಳು, ಮತ್ತು ಅದರ ನಂತರದ ಪರಿಸ್ಥಿತಿಯ ಕುರಿತು ಸಮಿತಿ ವಿವರವಾದ ತನಿಖೆ ನಡೆಸಲಿದೆ. ದಿಲ್ಲಿ ಪೊಲೀಸರ ತನಿಖೆಯನ್ನು ಬುಡಮೇಲುಗೊಳಿಸಲ್ಪಡಬಹುದೆಂದು ಬಲವಾದ ಟೀಕೆಗಳು ಕೇಳಿ ಬಂದಿರುವುದರಿಂದ ಸಮಿತಿಯನ್ನು ನೇಮಕಗೊಳಿಸಲಾಗಿದೆ.

ಮಾಜಿ ಸುಪ್ರೀಂ ಕೋರ್ಟಿನ ಜಡ್ಜ್ ಜಸ್ಟಿಸ್ ಮದನ್ ಲೋಕೂರ್, ದಿಲ್ಲಿ-ಮದ್ರಾಸ್ ಹೈಕೋರ್ಟಿನ ಮಾಜಿ ಚೀಫ್ ಜಸ್ಟಿಸ್ ಎ.ಪಿ.ಶಾ, ಮಾಜಿ ದಿಲ್ಲಿ ಹೈಕೋರ್ಟಿನ ಜಡ್ಜ್ ಜಸ್ಟಿಸ್ ಆರ್.ಎಸ್ ಸೋಧಿ, ಮಾಜಿ ಪಾಟ್ನ ಹೈಕೋರ್ಟು ಜಡ್ಜ್ ಜಸ್ಟಿಸ್ ಅಜ್ಞಾನ ಪ್ರಕಾಶ್ ಮತ್ತು ಮಾಜಿ ಗೃಹ ಸಚಿವ ಜಿ.ಕೆ. ಪಿಳ್ಳೆ, ಪೊಲೀಸ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಡೈರಕ್ಟರ್ ಜನರಲ್ ಮೀರಾನ್ ಚಂದ ಬೊರ್‍ವಾಂಕರ್ ಸಮಿತಿಯಲ್ಲಿದ್ದಾರೆ. ಈ ಸಮಿತಿ ಸ್ವತಂತ್ರ ತನಿಖೆ ನಡೆಸಲಿದೆ.