ಸೈಬರ್ ಸೇನೆಯ ಅಕ್ರಮ ಬಳಕೆಯು ಸರ್ಕಾರಕ್ಕೆ ಹಿನ್ನಡೆ ನೀಡಬಹುದು: ಅಮಿತ್ ಶಾ‌‌ರನ್ನು ಕುಟುಕಿದ ಸಂಜಯ್ ರಾವುತ್

0
647

ಸನ್ಮಾರ್ಗ ವಾರ್ತೆ

ಮುಂಬೈ,ಅ.12: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವನ್ನು ಹಾಗೂ ಪೊಲೀಸ್ ಇಲಾಖೆಯನ್ನು ಕೆಟ್ಟದಾಗಿ ಬಿಂಬಿಸಲು 80,000 ನಕಲಿ ಸೋಷಿಯಲ್ ಮೀಡಿಯಾ ಖಾತೆಗಳನ್ನು ರಚಿಸಲಾಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಭಾನುವಾರ ಆರೋಪಿಸಿದ್ದಾರೆ.

ಈ ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾರವರನ್ನು ಟೀಕಿಸಿದ ರಾವುತ್, “ಸೈಬರ್ ಸೈನ್ಯವನ್ನು ಅಕ್ರಮವಾಗಿ ಬಳಸುವುದು ಸರ್ಕಾರಕ್ಕೆ ಭಾರೀ ಹಿನ್ನಡೆಯನ್ನು ನೀಡಬಹುದು ಎಂಬ ಸತ್ಯವನ್ನು ಅಮಿತ್ ಶಾ ಒಪ್ಪಿಕೊಳ್ಳಬೇಕಿದೆ” ಎಂದರು.

“ವಿರೋಧಿಗಳನ್ನು ಮತ್ತು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಇಂತಹ ಕ್ರಮಗಳ ಉಪಯೋಗವು ದೇಶದ ಮೇಲೆ ಹಿನ್ನಡೆ ಉಂಟುಮಾಡಬಹುದು ಎಂಬುದನ್ನು ಅರಿತುಕೊಳ್ಳಬೇಕಿದೆ‌” ಎಂದು ರಾವುತ್ ಶಿವಸೇನೆ ಮುಖವಾಣಿ ಸಾಮ್ನಾದ ತಮ್ಮ ರೋಕ್ ಥೋಕ್ ಅಂಕಣದಲ್ಲಿ ಹೇಳಿದರು.