ಪಾಕಿಸ್ತಾನದಲ್ಲಿ ಭಯೋತ್ಪದಕರ ದಾಳಿ- ಧಾರ್ಮಿಕ ವಿದ್ವಾಂಸ ಪಾರು

0
708

ಕರಾಚಿ,ಮಾ.22: ಧಾರ್ಮಿಕ ವಿದ್ವಾಂಸ ಮುಫ್ತಿ ಮುಹಮ್ಮದ್ ತಾಕಿ ಉಸ್ಮಾನಿಯವರ ಕಾರಿಗೆ ಭಯೋತ್ಪಾದಕರು ಗುಂಡಿನ ಮಳೆಗೆರೆದಿದ್ದು ಹತ್ಯೆ ಯತ್ನದಲ್ಲಿ ಮುಫ್ತಿ ಪಾರಾಗಿದ್ದಾರೆಂದು ವರದಿಯಾಗಿದೆ. ಆರಂಭಿಕ ವರದಿಗಳ ಪ್ರಕಾರ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಗುಲ್ಶನೆ ಇಕ್ಬಾಲ್ ಮತ್ತು ಶರಿ ಫಝಲ್‍ನಲ್ಲಿ ಘಟನೆ ನಡೆದಿವೆ. ಇದೇವೇಳೆ ಬೈಕಿನಲ್ಲಿ ಹಿಂಬದಿಯ ಸವಾರರು ಎರಡು ಕಾರಿಗೆ ಗುಂಡಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಸಿಬಂದಿ ಫಾರೂಕ್ ಮತ್ತು ಖಾಸಗಿ ಆಂಗರಕ್ಷಕ ಸನೊಬರ್ ಖಾನ್ ಮೃತಪಟ್ಟವರೆಂದು ಡಿಐಜಿ ಆಮಿರ್ ಫಾರೂಕಿ ತಿಳಿಸಿದ್ದಾರೆ.

ಜಿನ್ನ ಪೊಸ್ಟ್ ಗ್ರಾಜುವೇಟ್ ಮೆಡಿಕಲ್ ಸೆಂಟರ್ ನ ನಿರ್ದೇಶಕ ವೈದ್ಯ ಸೀಮಿ ಜಮಾಲಿ ಘಟನೆಯಲ್ಲಿ ಗಾಯಗೊಂಡ ಇನ್ನೊಬ್ಬ ವ್ಯಕ್ತಿ ಮೌಲಾನ ಆಮಿರ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ. ಮುಫ್ತಿ ಉಸ್ಮಾನಿ ಅಪಾಯದಿಂದ ಪಾರಾಗಿದ್ದಾರೆ ಮತ್ತು ಘಟನೆಯ ಹಿಂದೆ ಹೊಸ ಭೂಗತ ಗುಂಪುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯ ವೇಳೆ ಸ್ಥಳೀಯ ವ್ಯಕ್ತಿಯೊಬ್ಬ ಕೂಡ ಗಾಯಗೊಂಡಿದ್ದಾನೆ. ಕರಾಚಿ ಪೊಲೀಸ್ ಮುಖ್ಯ ಡಾ.ಆಮಿರ್ ಮುಫ್ತಿ ಉಸ್ಮಾನ್ ಮತ್ತು ಅವರ ಪತ್ನಿಯಿದ್ದ ಕಾರಿಗೆ ಗುರಿ ಇರಿಸಲಾಗಿತ್ತು ಎಂದು ಹೇಳಿದ್ದಾರೆ.

ಪ್ರಧಾನಿ ಇಮ್ರಾನ್ ಖಾನ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಮುಫ್ತಿಯ ಇಬ್ಬರು ಅಂಗರಕ್ಷಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ.