ಯೆಮನ್,ಮಾ.12: ಯೆಮನ್ನ ಗ್ರಾಮವೊಂದರಲ್ಲಿ 20ಕ್ಕೂ ಹೆಚ್ಚು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಮೃತರಲ್ಲಿ, ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ. ಯಮನ್ನ ವಾಯವ್ಯ ಭಾಗದ ಒಂದು ಗ್ರಾಮದಲ್ಲಿ ಕಳೆದ ಒಂದು ವಾರಗಳಿಂದ ಸೌದಿ ಮಿತ್ರ ಪಡೆಗಳು ಮತ್ತು ಹೂತಿ ಬಂಡುಕೂರರ ನಡುವೆ ಒಂದು ವಾರಗಳಿಂದ ಯುದ್ಧ ನಡೆಯುತ್ತಿದೆ ಎಂದು ಹೂತಿ ಬಂಡುಕೋರರು ಅಲ್ಮಸಿರ ಟಿವಿಗೆ ತಿಳಿಸಿದ್ದಾರೆ.
ಕುಶಾರ್ ಜಿಲ್ಲೆಯ ಹಜ್ಜ ಗ್ರಾಮದಲ್ಲಿ ಕನಿಷ್ಟ 23 ಅಮಾಯಕ ನಾಗರಿಕರು ಹತ್ಯೆಯಾಗಿದ್ದಾರೆಂದು ಅಲ್ ಮಸೀರ ಟಿವಿಗೆ ಹೂತಿ ಬಂಡುಕೋರರು ತಿಳಿಸಿದ್ದರೆ, ಸೌದಿ ಅರೇಬಿಯಾದ ಅಲ್ಅರಬಿಯ ಟಿವಿಯು ‘ಹೂತಿಗಳು ಅವರನ್ನು ವಿರೋಧಿಸುವ ಹಲವಾರು ಗ್ರಾಮೀಣರನ್ನು ಕೊಂದಿದ್ದಾರೆ’ ಎಂದು ವರದಿ ಮಾಡಿದೆ.
ಕಳೆದ ಎರಡು ವಾರಗಳಲ್ಲಿ ಹತ್ತು ಮಹಿಳೆಯರ ಮತ್ತು 12 ಮಕ್ಕಳ ಮೃತದೇಹ ಪತ್ತೆಯಾಗಿದೆ ಹಾಗೂ ಮೂವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವೈದ್ಯಕೀಯ ಕಾರ್ಯಕರ್ತರು ತಿಳಿಸಿದ್ದಾರೆ. ಸೌದಿ ಮಿತ್ರ ಪಡೆ ಹುತಾಹಿ ಬುಡಕಟ್ಟು ಜನಾಂಗವನ್ನು ಹೂತಿ ಬಂಡುಕೋರರ ವಿರುದ್ಧ ಛೂಬಿಟ್ಟಿದ್ದು ಅವರ ನಡುವೆ ವಾರಗಳಿಂದ ಕದನ ಮುಂದುವರಿಯುತ್ತಿದೆ.
ಇದೇ ವೇಳೆ, ಹೂತಿಗಳ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಹಜ್ಜಾರ್ ಬುಡಕಟ್ಟು ಜನಾಂಗಳಿಗೆ ಸೌದಿ ಅರೇಬಿಯ ಯುದ್ಧಕ್ಕೆ ಪ್ರೇರೇಪಿಸುತ್ತಿದೆ ಮತ್ತು ಈ ಪ್ರದೇಶದಿಂದ ಹೋರಾಟಗರರನ್ನು ರೂಪಿಸುತ್ತಿದೆ ಎಂದು ಹೂತಿಗಳು ಆರೋಪಿಸಿದ್ದಾರೆ.












