ಬಾಲಕಿ ಅಪಹರಣ ಪ್ರಕರಣ: “ಮೇರಿ ಬಚ್ಚಿ ಕಬ್ ಆಯೇಗಿ?”- ಮುಗಿಲು ಮುಟ್ಟಿದ ಅಮ್ಮನ ಕೂಗು

0
1818

ಕೊಲ್ಲಂ(ಕೇರಳ,ಮಾ.23): ಕೊಲ್ಲಂನ ಓಚ್ಚಿರದ ರಾಷ್ಟ್ರೀಯ ಹೆದ್ದಾರಿಯ ಬದಿಯ ಕುಟುಂಬದ ಶೆಡ್‍ಗೆ ಬರುವವರಲ್ಲಿ ಆತಾಯಿ ಮೇರಿ ಬಚ್ಚಿ ಕಬ್ ಆಯೇಗಿ ಎಂದು ದೈನ್ಯತೆಯಿಂದ ಕೇಳುತ್ತಿದ್ದಾರೆ. ಅವರ ಶೆಡ್‍ನ ಮುಂದೆ ಪ್ಲಾಸ್ಟರ್ ಆಫ್ ಪ್ಯಾರಿಸಿನ ಗೊಂಬೆಗಳು ಇವೆ. ಇದರ ನಡುವೆ ಕೂತ ರಾಜಸ್ಥಾನದ ಮಹಿಳೆ ತನ್ನ ಅಪಹೃತ ಪುತ್ರಿ ಯಾವಾಗ ಬರುತ್ತಾಳೆ ಎಂದು ಕೇಳುತ್ತಿರುವ ದೃಶ್ಯವಂತೂ  ಮನಕಲಕುತ್ತದೆ. ಇವರ ಹದಿನೈದು ವರ್ಷ ಪುತ್ರಿಯನ್ನು ಐದು ದಿವಸದ ಹಿಂದೆ ಕಾರಿನಲ್ಲಿ ಬಂದ ತಂಡ ಅಪಹರಿಸಿಕೊಂಡು ಹೋಗಿತ್ತು.

ಕಾಣೆಯಾದ ಬಾಲಕಿಯ ಕುರಿತು ಪೊಲೀಸರಿಗೆ ಈಗಲೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಪೊಲೀಸರು ಬೆಂಗಳೂರು ಮುಂತಾದ ಸ್ಥಳಗಳಲ್ಲಿ ತನಿಖೆಯನ್ನು ವಿಸ್ತರಿಸಿದರೂ ಪ್ರಯೋಜನವಾಗಿಲ್ಲ. ಆದರೆ, ಬಾಲಕಿಯ ತಾಯಿ “ಮೇರಿ ಬಚ್ಚಿ ಕಬ್ ಆಯೇಗಿ” ಎಂದು ಕೇಳುತ್ತಲೇ ಇದ್ದಾರೆ. ಕಣ್ಣೀರಿಳಿಸಿದ ಕಲೆಗಳು ಅವರ ಕೆನ್ನೆಯ ಮೇಲಿದೆ. ತಂದೆ ಮೊಬೈಲ್ ರಿಂಗಾಗುವಾಗ ಆಶೆಯಿಂದ ಫೋನ್ ತೆಗೆಯುತ್ತಾರೆ.

ಘಟನೆಯ ನಂತರ ಇವರ ಶೆಡ್‍ನಲ್ಲಿ ಒಲೆ ಉರಿದಿಲ್ಲ. ದಂಪತಿಯ ಏಳು ಮಕ್ಕಳಲ್ಲಿ ಹಿರಿಯವಳನ್ನು ಗೂಂಡಾಗಳು ಅಪಹರಿಸಿದ್ದರು. ಘಟನೆಯ ನಂತರ ಉಳಿದ ಮಕ್ಕಳ ಪಾಡಂತೂ ಹೇಳಿ ತೀರದು. ಅವರಿಗೆ ಸರಿಯಾಗಿ ಅನ್ನಾಹಾರವೂ ಇಲ್ಲ. ಈ ದಂಪತಿಗೆ ಐದು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ. ರಾಜಸ್ತಾನದ ಪಾಲಿ ಜಿಲ್ಲೆಯವರಾದ ಇವರು ತೀರ ಬಡವರು. ಕಳೆದ ಸೋಮವಾರ ರಾತ್ರೆ 10:30ಕ್ಕೆ ಹೊಟೇಲಿನಿಂದ ಆಹಾರ ತಂದು ಸೇವಿಸುತ್ತಿದ್ದಾಗ ಗೂಂಡಾಗಳು ಕಾರಿನಲ್ಲಿ ಬಂದು ತಂದೆಗೆ ಹೊಡೆದು ಬಾಲಕಿಯನ್ನು ಅಪಹರಿಸಿತ್ತು.

ಇದೇ ವೇಳೆ ಬಾಲಕಿಯೊಂದಿಗೆ ಮುಖ್ಯ ಆರೋಪಿ ರೋಶನ್ ರಾಜಸ್ಥಾನಕ್ಕೆ ಹೋಗಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಇವರನ್ನು ಹಡುಕುತ್ತಾ ಪೊಲೀಸರು ರಾಜಸ್ಥಾನಕ್ಕೆ ತೆರಳಿದ್ದಾರೆ. ಬೆಂಗಳೂರಿನಲ್ಲಿದ್ದ ರೋಶನ್‍ನ ಸಂಬಂಧಿಕನ್ನು ಪೊಲೀಸರು ಕಳೆದ ದಿವಸ ಕಸ್ಟಡಿಗೆ ಪಡೆದು ತನಿಖೆ ಮಾಡಿದ್ದರು.