ವಿದ್ಯಾರ್ಥಿ ಪರೀಕ್ಷಾ ಹಾಲ್‍ನಲ್ಲಿಯೇ ಮೂತ್ರ ವಿಸರ್ಜಿಸಿದ ಘಟನೆ: ಶೌಚಾಲಯಕ್ಕೆ ತೆರಳಲು ಬಿಡದ ಅಧ್ಯಾಪಕಿ ವಜಾ

0
1646

ತಿರುವನಂತಪುರಂ,ಮಾ. 23: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೊಟ್ಟೆನೋವು ಎಂದ ವಿದ್ಯಾರ್ಥಿಗೆ ಶೌಚಾಲಯಕ್ಕೆ ಹೋಗಗೊಡದೆ ತಡೆದ ಘಟನೆಯಲ್ಲಿ ಅಧ್ಯಾಪಕಿಯನ್ನು ಪರೀಕ್ಷಾ ಕರ್ತವ್ಯದಿಂದ ಕೈಬಿಡಲಾಗಿದೆ. ಕೇರಳದ ಕೊಲ್ಲಂ ಸರಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತರಾದ ಕುಟ್ಟಿಕ್ಕಾಡ್ ಸಿ.ಪಿ.ಎಚ್‍.ಸ್ಕೂಲಿನ ಅಧ್ಯಾಪಕಿಯನ್ನು ಸಾರ್ವಜನಿಕ ವಿದ್ಯಾಭ್ಯಾಸ ನಿರ್ದೇಶಕರ ನಿರ್ದೇಶದಂತೆ ಪುನಲೂರ್ ಡಿಇಒ ಕರ್ತವ್ಯದಿಂದ ವಜಾ ಗೊಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಪುನಲೂರ್ ಡಿಇಒಗೆ ಪ್ರಾಥಮಿಕ ವರದಿ ಸಲ್ಲಿಸಲಾಗಿತ್ತು. ವಿದ್ಯಾರ್ಥಿಯ ಹೇಳಿಕೆ ಪಡೆದು ವಿವರವಾದ ವರದಿ ಸಲ್ಲಿಸುವಂತೆ ಡಿಪಿಐ ಡಿಇಒಗೆ ಆದೇಶ ನೀಡಿದರು. ಶೌಚಾಲಯಕ್ಕೆ ಹೋಗಲು ಬಿಡದ್ದರಿಂದ ವಿದ್ಯಾರ್ಥಿ ಪರೀಕ್ಷಾ ಹಾಲ್‍ನಲ್ಲಿಯೇ ಮೂತ್ರ ವಿಸರ್ಜನೆ ಮಾಡಿದ್ದ. ಪರೀಕ್ಷಾ ಕೊಠಡಿಯಿಂದ ಶೌಚಾಲಯಕ್ಕೆ ವಿದ್ಯಾರ್ಥಿ ಹೋಗುವುದಾದರೆ ಜೊತೆಯಲ್ಲಿ ಕಚೇರಿ ಸಿಬ್ಬಂದಿ ಇರಬೇಕು. ಕಚೇರಿ ಸಿಬ್ಬಂದಿ ಬರಲು ತಡವಾದ್ದರಿಂದ ವಿದ್ಯಾರ್ಥಿಗೆ ಶೌಚಾಲಯಕ್ಕೆ ಹೋಗಲು ಅಧ್ಯಾಪಕಿ ಬಿಟ್ಟಿರಲಿಲ್ಲ ಎನ್ನಲಾಗಿದೆ. ನಂತರ ವಿದ್ಯಾರ್ಥಿ ಪರೀಕ್ಷಾ ಹಾಲ್‍ನಲ್ಲಿಯೇ ಮೂತ್ರ ಮಾಡಿದ್ದ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.