ಕಣ್ಣೂರ್,ಮಾ. 23: ಬಿಜೆಪಿ ಕೇಂದ್ರ ನಾಯಕರಿಗೆ ಲಂಚ ನೀಡಿದ್ದಾರೆನ್ನಲಾದ ಕರ್ನಾಟಕದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ವಿರುದ್ಧ ಆರೋಪ ಗಂಭೀರವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಡೈರಿಯಲ್ಲಿರುವ ಬರಹಗಳ ಕುರಿತು ಗಂಭೀರ ತನಿಖೆ ನಡೆಯಬೇಕು. ಇದನ್ನು ಕೇಂದ್ರದ ಏಜೆನ್ಸಿಗಳಿಂದ ತನಿಖೆ ಮಾಡಿಸಿದರೆ ಪ್ರಯೋಜನವಿಲ್ಲ. ಕೋರ್ಟಿನ ಮೇಲ್ನೋಟದ ವಿಶೇಷ ತನಿಖಾ ತಂಡವನ್ನು ತನಿಖೆಗೆ ನಿಯೋಜಿಸಬೇಕಾಗಿದೆ. ಹಣದ ಮೂಲ ಎಲ್ಲಿಯದ್ದೆಂದು ತನಿಖೆ ನಡೆಯಬೇಕಿದೆ ಎಂದು ಅವರು ಹೇಳಿದರು.
ಭ್ರಷ್ಟಾಚಾರದ ವಿರುದ್ಧ ಅಸ್ತಿತ್ವಕ್ಕೆ ಬಂದ ಕೇಂದ್ರ ಸರಕಾರ ಭ್ರಷ್ಟಾಚಾರ ನಡೆಸುತ್ತಿದೆ. ಈ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಸಮಾನವಾಗಿದೆ. ರಾಷ್ಟ್ರೀಯ ಆಂದೋಲನದ ಪರಂಪರೆಯನ್ನು ಕಾಂಗ್ರೆಸ್ ಕಳಕೊಂಡು ಬಹಳ ಕಾಲವಾಗಿದೆ ಎಂದು ಪಿಣರಾಯಿ ವಿಜಯನ್ ಆರೋಪಿಸಿದರು.












