ಕೊಲ್ಕತಾ,ಎ.8: ಒಂದು ನಯಾಪೈಸೆಯನ್ನು ಕೂಡ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮಬಂಗಾಳಕ್ಕೆ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ದೊಡ್ಡ ದೊಡ್ಡ ಮಾತುಗಳನ್ನಾಡುವವರು ಮೋದಿ ಪಶ್ಚಿಮಬಂಗಾಳಕ್ಕೆ ಕೊಟ್ಟ ಕೊಡುಗೆ ಏನೆಂದು ಹೇಳಬೇಕು ಎಂದು ಮಮತಾ ಹೇಳಿದರು. ಅವರು ಕೂಚ್ ಬಿಹಾರ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತಾಡುತ್ತಿದ್ದರು.
ಐದು ವರ್ಷ ಮೋದಿ ವಿದೇಶಗಳನ್ನು ಸುತ್ತಾಡುವುದರಲ್ಲೇ ಕಳೆದರು. ಈಗ ಇಲ್ಲಿಗೆ ಬರುವುದು ಅವರ ಅಗತ್ಯವಾಗಿದೆ. ಆದ್ದರಿಂದ ಅವರು ಬಂದಿದ್ದಾರೆ ಎಂದು ಮಮತಾ ಹೇಳಿದರು. ವಿವಿಧ ಧರ್ಮದ ಜನರು ಒಟ್ಟಿಗೆ ಜೀವಿಸುವ ದೊಡ್ಡ ಕುಟುಂಬಗಳನ್ನು ನಮಗೆ ಭಾರತದಲ್ಲಿ ಕಾಣಲು ಸಾಧ್ಯವಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿಗೆ ಇದು ಹೇಗೆ ಗೊತ್ತಾದೀತು?. ಅದು ಗೊತ್ತಾಗಬೇಕಿದ್ದರೆ ಒಂದೋ ಅವರಿಗೆ ಸ್ವಂತ ಕುಟುಂಬ ಇರಬೇಕು. ಅಲ್ಲವಾದರೆ ಜನರನ್ನು ತಮ್ಮ ಕುಟುಂಬ ಎಂದು ಭಾವಿಸಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದರು.












