ಮುಸ್ಲಿಂ ಲೀಗ್ ಕೋಮುವಾದಿ ಪಾರ್ಟಿ- ಬೃಂದಾ ಕಾರಾಟ್

0
906

ತಿರುವನಂತಪುರಂ,ಎ.8: ಮುಸ್ಲಿಂಲೀಗ್ ಕೋಮುವಾದಿ ಪಾರ್ಟಿಯಾಗಿದೆ ಎಂದು ಸಿಪಿಎಂ ಪೊಲಿಟ್ ಬ್ಯೂರೊ ಸದಸ್ಯೆ ಬೃಂದಾ ಕಾರಾಟ್ ಹೇಳಿದ್ದಾರೆ. ಧರ್ಮ,ರಾಜಕೀಯವನ್ನು ಬೆರೆಸುವುದು ಲೀಗ್‍ನ ಮೂಲ ತತ್ವವಾಗಿದೆ. ಇಂತಹ ಪಾರ್ಟಿಗಳನ್ನು ಜಾತ್ಯತೀತ ಎಂದು ಕರೆಯಲು ಸಾಧ್ಯವಿಲ್ಲ ಎಂದು ಬೃಂದಾ ಕಾರಟ್ ಹೇಳಿದರು. ತಿರುವನಂತಪುರಂ ಪ್ರೆಸ್‍ಕ್ಲಬ್‍ನಲ್ಲಿ ಅವರು ಮಾತಾಡುತ್ತಿದ್ದರು.

ತೀವ್ರ ಕೋಮು ನಿಲುವು ಹೊಂದಿದವರು ಲೀಗ್‍ನ ಸಂಗಡಿಗರು. ಇಂತಹ ಜನರೊಡನೆ ಲೀಗ್ ಸಮಾಲೋಚಿಸುತ್ತದೆ. ಕಾಂಗ್ರೆಸ್‍ಗೆ ಕೇರಳದಲ್ಲಿ ಲೀಗ್ ಮುಖ್ಯ ಸಖ್ಯ ಪಾರ್ಟಿಯಾಗಿದೆ ಮತ್ತು ಮುಸ್ಲಿಂ ಲೀಗಿಗೆ ಧರ್ಮ,ರಾಜಕೀಯ ಬೆರೆಸುವ ನಿಲುವು ಇರುವುದರಿಂದ ಕಾಂಗ್ರೆಸ್‍ನ ಜಾತ್ಯತೀತತೆ ಪೊಳ್ಳು ಆಗಿದೆ ಎಂದು ಬ್ರಂದಾ ಹೇಳಿದರು.