ಲಾಹೋರ್: ಮಾದಕವಸ್ತು ಕಳ್ಳಸಾಗಾಟದ ಪ್ರಕರಣವೊಂದರಲ್ಲಿ ಜೆಕ್ ರೂಪದರ್ಶಿ ತೆರೆಸಾ ಅಲೆಕ್ಸೋವಾಗೆ ಲಾಹೋರ್ ಕೋರ್ಟು ಬುಧವಾರ ಎಂಟು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತೆರೆಸಾ ಅಲೆಕ್ಸೋವಳನ್ನು ಲಾಹೋರ್ ವಿಮಾನ ನಿಲ್ದಾಣದಲ್ಲಿ 2018 ರ ಜನವರಿ 10ರಂದು ಬಂಧಿಸಲಾಗಿತ್ತು. ದುಬೈಯಿಂದ ಐರ್ಲೆಂಡಿಗೆ ಹೊರಟಿದ್ದ ಈಕೆ ಒಂಬತ್ತು ಕೆಜಿಯಷ್ಟು ಹೆರಾಯಿನನ್ನು ಸಾಗಿಸಲು ಯತ್ನಿಸುವ ವೇಳೆ ಸಿಕ್ಕಿಬಿದ್ದಿದ್ದಳು. 1,13,000ರೂಪಾಯಿ ದಂಡವನ್ನು ಕೂಡ ತೆರೆಸಾಗೆ ಕೋರ್ಟು ವಿಧಿಸಿದೆ. ಹದಿನಾಲ್ಕು ತಿಂಗಳಿನಿಂದ ನಡೆದ ಪ್ರಕರಣದ ವಿಚಾರಣೆಯ ಬಳಿಕ ಕೋರ್ಟು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.












